6 ನೇ ಮೈಲಿ – ಮೈ ಮರೆತರೆ ಸಾವಿನ ಬೇಲಿ

0
1229

ಹೊಸಬರು ಚಿತ್ರರಂಗಕ್ಕೆ ಬಂದ್ರೇನೇ ಹೊಸ ಕಥೆಗಳು ಹೊಸ ಪ್ರಯತ್ನಗಳು ಹೊಸ ಹೊಸ ಯೋಚನೆಗಳು ಜೊತೆಗೆ ಹೊಸ ದಾಖಲೆಗಳು ಬರೋದಿಕ್ಕೆ ಕಾರಣ… ಈಗ ಈ ಸಾಲಿನಲ್ಲಿ ನಿರೀಕ್ಷೆ ಹುಟ್ಟಿಸುತ್ತಿರುವ ಸಿನಿಮಾ 6 ನೇ ಮೈಲಿ …

ಚಿತ್ರದ ಪೋಸ್ಟರ್ಸ್ ಹಾಗು ಟೀಸರ್ ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ … ಸಂಚಾರಿ ವಿಜಯ್ , ಆರ್ ಜೆ ನೇತ್ರ ,ಆರ್ ಜೆ ಸುದೇಶ್ ಸೇರಿದಂತೆ ಇನ್ನು ಸಾಕಷ್ಟು ಹೊಸ ಪ್ರತಿಭೆಗಳು ಹಳೆ ಕಲಾವಿದರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ

ಸೀನಿ ಎನ್ನುವ ಹೊಸ ನಿರ್ದೇಶಕರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು , ವೆಸ್ಟ್ರೇನ್ ಘಾಟ್ ನಲ್ಲಿ ಟ್ರೆಕಿಂಗ್ ಹೋಗಿ ಕಳೆದು ಹೋಗುವ ಎರಡು ಟೀಮ್ಗಳ ಕಥೆಯನ್ನು ತಮ್ಮದೇ ಶೈಲಿಯಲ್ಲಿ ಹೇಳಲು ಸಜ್ಜಾಗಿದ್ದಾರೆ…ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಸಾಂಗ್ ಅನ್ನು ಲಂಡನ್ನ್ ಮೆಟ್ರೊಪೊಲಿಸ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಗಿದ್ದು ಈ ಹಾಡೇ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಅನ್ನೋದು ಆಡಿಯೋ ರಿಲೀಸ್ ಆದ್ಮೇಲೆ ಗೊತ್ತಾಗುತ್ತೆ …

ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಮೇಕಿಂಗ್ ಹಿಂದೆ ನಿಂತಿರೋರು ಮುಂದೊಂದು ದಿನ ಚಿತ್ರರಂಗದಲ್ಲಿ ಸಾಧನೆ ಮಾಡ್ತಿನಿ ಅನ್ನೋ ದೃಢವಾದ ನಂಬಿಕೆಯೊಂದಿಗೆ ಹೆಜ್ಜೆ ಹಾಕ್ತಿರೋ ನಿರ್ದೇಶಕ ಸೀನಿ,ಮ್ಯೂಸಿಕ್ ಡೈರೆಕ್ಟರ್ ಸಾಯಿಕಿರಣ್ ಹಾಗು ಕ್ಯಾಮರಾಮನ್ ಪರ್ಮಿ … ಇವರೆಲ್ಲರ ಕನಸುಗಳಿಗೆ ಅವಕಾಶ ಕೊಟ್ಟಿದ್ದು ಶೈಲೇಶ್ ಕುಮಾರ್ ಎನ್ನುವ ಹೊಸ ನಿರ್ಮಾಪಕರು … ಈ ಹೊಸ ತಂಡದ ಹೊಸ ಪ್ರಯತ್ನದ 6 ನೇ ಮೈಲಿ ಅತೀ ಶೀಘ್ರದಲ್ಲೇ ನಿಮ್ಮ ಮುಂದೆ …

ನಿಮಗಿದು ಇಷ್ಟವಾದಲ್ಲಿ ಪ್ರಚಾರ ಪೇಜ್ ಹಾಗು ವೆಬ್ಸೈಟ್ ಲೈಕ್ ಮಾಡಿ ಶೇರ್ ಮಾಡಿ. ಕನ್ನಡ ಸಿನೆಮಾಗಳನ್ನು ಸಪೋರ್ಟ್ ಮಾಡಲು ನಮ್ಮೊಂದಿಗೆ ಕೈ ಜೋಡಿಸಿ…

LEAVE A REPLY

Please enter your comment!
Please enter your name here