ಹ್ಯಾರಿಸ್ ಮಗನನ್ನು ತಡೆದಿದ್ದು ರಾಜ್ ಮೊಮ್ಮಗ – ಗುರು ಇರದಿದ್ರೆ ಆ ಹುಡುಗನ ಕಥೆ ಏನಾಗ್ತಿತ್ತು? ರಿಯಲ್ ಲೈಫನಲ್ಲೂ ಹೀರೋ ಅದ ಡಾ ರಾಜ್ ಕುಡಿ

0
1805

 ಶನಿವಾರ ರಾತ್ರಿ  ಬೆಂಗಳೂರಿನ ಯುಬಿ ಸಿಟಿಯ ರೆಸ್ಟೋರೆಂಟ್‌ನಲ್ಲಿ ನಡೆದ ಶಾಸಕ ಹ್ಯಾರಿಸ್‌ ಪುತ್ರನ ರಾದ್ಧಾಂತದ ವೇಳೆ ರಾಜ್ ಮೊಮ್ಮಗ ಗುರು ರಾಘವೇಂದ್ರ ರಾಜ್‌ಕುಮಾರ್ ಇಲ್ಲ ಅಂದಿದ್ರೆ, ಬಹುಶಾ ಆ ಹುಡುಗ ವಿದ್ವತ್‌ನ ಕತೆ ಮುಗಿದೇ ಹೋಗ್ತಿತ್ತೋ ಏನೋ.
ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಗೂಂಡಾಗಿರಿ ಪ್ರದರ್ಶಿಸಿ ವಿದ್ವತ್ ಅನ್ನೋ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದ. ಇವನ ಜೊತೆಗಿದ್ದ 10 ಜನರ ಚೇಲಾಗಳು ಜೊತೆಗೆ ಸೇರಿ ಹಲ್ಲೆ ಮಾಡ್ತಿರಬೇಕಾದ್ರೆ, ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರ ಗುರು ಈ ವೇಳೆ ಮಧ್ಯ ಪ್ರವೇಶಿಸಿದ ಹಲ್ಲೆ ನಡೆಸ್ತಾ ಇದ್ದವರನ್ನ ತಡೆಯಲು ಮುಂದಾಗಿದ್ದಾರೆ. ಆದ್ರೂ ಹಲ್ಲೆ ನಡೆಸೋದು ನಿಲ್ಲಿಸದೇ ಇದ್ದಾಗ, ಅವರು ತಮ್ಮ ತಾತ ಡಾ. ರಾಜ್‌ಕುಮಾರ್ ಹೆಸರು ಹೇಳಿದ್ದಾರೆ. ಈ ವೇಳೆ ಬೌನ್ಸರ್‌ಗಳು ಸುಮ್ಮನಾಗಿದ್ದಾರೆ.

ಆ ಬಳಿಕ ಗಾಯಗೊಂಡಿದ್ದ ವಿದ್ವತ್‌ನನ್ನು, ಆಸ್ಪತ್ರೆಗೆ ಸಾಗಿಸಲು ಗುರುನೇ ವ್ಯವಸ್ಥೆ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ
ನಲಪಾಡ್ ಅಲ್ಲಿಂದ ವಿದ್ವತ್ ದಾಖಲಾಗಿದ್ದ ಮಲ್ಯ ಆಸ್ಪತ್ರೆಗೆ ಆಗಮಿಸಿದ್ದಾರೆ. ಈ ವೇಳೆ ಗುರು ರಾಘವೇಂದ್ರ ರಾಜ್‌ಕುಮಾರ್ ಅಲ್ಲೂ ತಡೆದಿದ್ದಾರೆ. ಆಗ ನಲಪಾಡ್ ಮತ್ತಾತನ ಗ್ಯಾಂಗು ಗುರು ರಾಘವೇಂದ್ರ ರಾಜ್ ಕುಮಾರ್ ಮೇಲೂ ಜಗಳ ಕಾದಿದ್ದಾರೆ. ಈ ವೇಳೆ ಗುರು ಜೊತೆಗೂ ತಳ್ಳಾಟ ನಡೆದಿದೆ. ಕಡೆಗೆ ತಾನು ರಾಜ್ ಕುಮಾರ್ ಮೊಮ್ಮಗ ಅನ್ನೋದನ್ನ ಹೇಳಿದ ಮೇಲಷ್ಟೇ ಗ್ಯಾಂಗು ಜಾಗದಿಂದ ಕಾಲ್ತೆಗೆದಿದೆ.

ಅನಂತರ
ಬೆಳಗಿನ ಜಾವದ ತನಕ ಆಸ್ಪತ್ರೆಯಲ್ಲಿದ್ದ ಗುರು
ವಿದ್ವತ್ಗೆ ರಕ್ಷಣೆ ನೀಡಿದ್ದಾರೆ. ರಾತ್ರಿ 11 ಗಂಟೆಯಿಂದಲೂ ಮಲ್ಯ ಆಸ್ಪತ್ರೆಯಲ್ಲಿಯೇ ಇದ್ದು ವೈದ್ಯರ ಜೊತೆ ಸಮಾಲೋಚನೆ ನಡೆಸಿದ್ದ ಗುರು ರಾಘವೇಂದ್ರ ರಾಜ್‌ಕುಮಾರ್, ಬೆಳಕು ಹರಿದ ಮೇಲಷ್ಟೇ ಮನೆಗೆ ಹೋಗಿದ್ದಾರೆ. ಈ ವಿಚಾರವನ್ನ ವಿದ್ವತ್ ಕೂಡಾ ತನ್ನ ಮನೆಯವರಿಗೆ ತಿಳಿಸಿದ್ದಾನೆ. ವಿಷಯ ತಿಳಿದು ವಿದ್ವತ್ ತಂದೆ ಲೋಕೇಶ್‌ ಮತ್ತು ಮನೆಯವರು, ಗುರು ರಾಘವೇಂದ್ರ ಅವರ ಮನೆಗೆ ಹೋಗಿ ಥ್ಯಾಂಕ್ಸ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here