ಹೊಸಬರೊಂದಿಗೆ ಹೊಸ ಇತಿಹಾಸ ಬರೆಯುತ್ತಾರ ಜೋಗಿ ಪ್ರೇಮ್ ? ಫಸ್ಟ್ ಲುಕ್ಕಿಗೆ ಸ್ಯಾಂಡಲ್ವುಡ್ ಫಿದಾ

0
224

ಪ್ರೇಮ್ ಮೊನ್ನೆಯಷ್ಟೇ ಅದ್ಧೂರಿ ಸಮಾರಂಭವನ್ನ ಮಾಡಿದ್ದರು. ಇದೇ ಸಮಾರಂಭದಲ್ಲಿ ತಮ್ಮ ಭಾಮೈದ ಅಭಿಷೇಕ್‌ಗೆ ರಾಣಾ ಎಂದು ಮರುನಾಮಕರಣ ಮಾಡಿ, ಭಾಮೈದನ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದ್ದರು. ಏಕ್ ಲವ್ ಯಾ ಎಂಬ ಟೈಟಲ್‌ನ್ನೂ ರಿವೀಲ್ ಮಾಡಿದ್ದರು.ಮೋಶನ್ ಪೋಸ್ಟರ್‌ನಲ್ಲಿಯೇ ಎಲ್ಲರ ಕೂತುಹಲ ಮತ್ತೊಮ್ಮೆ ಗರಿಗೇದರುವಂತೆ ಮಾಡಿದ್ದ ಪ್ರೇಮ್, ಇದೀಗ.. ಹೆಣ್ಣೈಕ್ಳ ಒದ್ದಾಟಕ್ಕೆ ಕಾರಣವಾಗಿದ್ದಾರೆ. ಹೌದು, ಪ್ರೇಮ್.. ಯುಗಾದಿ ಹಬ್ಬದ ಪ್ರಯುಕ್ತ ನಯಾ ಲುಕ್‌ವೊಂದನ್ನ ರಿವೀಲ್ ಮಾಡಿದ್ದಾರೆ. ಪ್ರೇಮ್ ಬಿಡುಗಡೆ ಮಾಡಿರುವ ಇದೇ ಲುಕ್ ಇದೀಗ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ.ಕೈಯಲ್ಲಿ ಸಿಗಾರ ಹಚ್ಚಿಕೊಳ್ಳುತ್ತಾ, ಗಾಗಲ್ಸ್ ಹಾಕೊಂಡು.. ಬೈಕ್ ಪಕ್ಕ ಕುಂತಿರುವ ರಾಣಾರ, ಸ್ಟೈಲಿಶ್ ಅವತಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಅಷ್ಟೇ ಅಲ್ಲ.. ಚಿತ್ರದ ಮೇಲೀನ ಕೂತುಹಲವನ್ನೂ ಈ ಸ್ಟೀಲ್ ಇಮ್ಮಡಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಅಂದ ಹಾಗೇ ಸದ್ಯ, ಮೋಶನ್ ಪೋಸ್ಟರ್ ಹಾಗೂ ಸ್ಟೀಲ್ ಮೂಲಕವೇ ನಿರೀಕ್ಷೆಗಳನ್ನ ಹೆಚ್ಚು ಮಾಡ್ತಿರುವ ಪ್ರೇಮ್, ಏಕ್ ಲವ್ ಯಾ ಚಿತ್ರದ ಚಿತ್ರೀಕರಣವನ್ನ ಇದೇ ಏಪ್ರಿಲ್ ಹತ್ತರಿಂದ ಶುರುಮಾಡಲಿದ್ದಾರೆ. ಅವತ್ತೇ ಬಹುಶ, ಚಿತ್ರದ ನಾಯಕಿಯಾರು ಎಂಬ ಕೂತುಹಲಕ್ಕೂ ಉತ್ತರ ಸಿಗಲಿದೆ.

LEAVE A REPLY

Please enter your comment!
Please enter your name here