ಹೆಣ್ಣಾಗಿ ಬದಲಾದ ಪರಮೇಶ್ವರ್ ಪುತ್ರ ಶಶಾಂಕ್ – ಈಗ ಇವರು ಅವನಲ್ಲ ಅವಳು

0
850

ಕೆಲ ತಿಂಗಳ ಹಿಂದೆಯೇ ವಿದೇಶದಲ್ಲಿ  ಲಿಂಗಪರಿವರ್ತನೆ ಮಾಡಿಕೊಂಡಿದ್ದು, ಶಶಾಂಕ್ ಅನ್ನೋ ತಮ್ಮ ಹೆಸರನ್ನು ಕೂಡ ಶಾನ ಅಂತ ಬದಲಾಯಿಸಿಕೊಂಡಿದ್ದಾರೆ. 
ಹಲವು ವರ್ಷಗಳಿಂದಲೂ ನನ್ನೊಳಗೆ ನಡೀತಿದ್ದ ಪರಿವರ್ತನೆಯನ್ನು ನಾನಷ್ಟೇ ಗಮನಿಸಿಕೊಂಡು ಬಂದಿದ್ದೆ. ಇದೆಲ್ಲದರ ಪರಿಣಾಮವಾಗಿ ನಾನೀಗ ಲಿಂಗ ಪರಿವರ್ತನೆ ಮಾಡಿಕೊಂಡಿದ್ದೇನೆ. ಸಮಾಜದಲ್ಲಿನ ಕಟ್ಟುಪಾಡುಗಳಿಂದಾಗಿ ಇಲ್ಲೀವರೆಗೂ ನನ್ನೊಳಗಿನ ತಳಮಳಗಳನ್ನು ಯಾರಿಗು ತಿಳಿಸದೆ  ಬದುಕಿದ್ದೆ. ಆದ್ರೆ ಇನ್ನು ಮುಂದೆ ನನ್ನ ಇಷ್ಟದಂತೆ ಬದುಕುತ್ತೇನೆ  ಅಂತಾ ಶಾನಾ ವಿದೇಶದಿಂದಲೇ ಪ್ರತಿಕ್ರಿಯಿಸಿದ್ದಾಳೆ.

 ಜೀವನದಲ್ಲಿ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಹೆದರುವವರಿಗೆ ನನ್ನ ನಿರ್ಧಾರ ಪ್ರೇರಣೆಯಾಗಲಿ ಅಂತಾನೂ ಅವರು ಹೇಳ್ಕೊಂಡಿದ್ದಾರೆ. ನಾನು ಪರಿವರ್ತನೆಯಾದ ಮಾತ್ರಕ್ಕೆ ಎಲ್ಲವೂ ಕಳೆದು ಹೋಯಿತು ಅಂತೇನಲ್ಲ. ನನ್ನ ಜೀವನವನ್ನ ಪೂರ್ತಿವಾಗಿ ಜೀವಿಸುತ್ತೇನೆ ಎಂದು ಶಾನ್‌ ಸ್ಪಷ್ಟಪಡಿಸಿದ್ದಾರೆ.

ಇವರು ಈ ರೀತಿ ಪರಿವರ್ತನೆ ಅಗುವ ವಿಷಯ ತಿಳಿದಾಗ ಇವರ ಸ್ನೇಹಿತರು ಇವರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರಂತೆ… ಆದ್ರೂ ನನ್ನ ನಿರ್ಧಾರದ ಬಗ್ಗೆ ನನಗೆ ಹೆಮ್ಮೆಯಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವ ಶಾನಾ, ತಾನು ಇನ್ನು ಮೇಲೆ ಜೀವನದಲ್ಲಿ ನೊಂದ ಮಹಿಳೆಯರ ಪರವಾಗಿ ಕೆಲಸ ಮಾಡೋದಾಗಿ ಹೇಳಿಕೊಂಡಿದ್ದಾರೆ… ತಮ್ಮ ಒಬ್ಬನೆ ಮಗ ಈ ರೀತಿ‌ ನಿರ್ಧಾರ ತೆಗೆದುಕೊಂಡಿರೋದ್ರಿಂದ ಪರಮೇಶ್ಚರ್ ದಂಪತಿಗಳಿಗೆ ಮೊದಲು ತುಂಬಾ ನೋವಾಗಿದ್ದು , ಈಗ ನಿಧಾನವಾಗಿ ಅ ಶಾಕ್ ನಿಂದ ಹೋರಬರುತ್ತಿದ್ದಾರಂತೆ…

 

LEAVE A REPLY

Please enter your comment!
Please enter your name here