ಹುಚ್ಚು ಅಭಿಮಾನಿಯ ಅಸೆ ಈಡೇರಿಸಿದ ಕಿಚ್ಚ – ಇತನಿಗೆ ಬಾಯಿ ಬರೋದಿಲ್ಲ ಕಿವಿ ಕೇಳೋದಿಲ್ಲ

0
395

ಸುದೀಪ ಅಂದ್ರೆ ಅಭಿಮಾನಿಗಳಿಗೆ ಅದೇನೋ ಒಂದ್ ರೀತಿಯ ಪ್ರೀತಿ. ಒಂದ್ ರೀತಿಯ ಮೋಹ. ಸುದೀಪ ಕಂಡ್ರೆ ಸಾಕು ಸಿನಿಮಾಗಳು ಬಂದ್ರೆ ಸಾಕು ಹುಚ್ಚೆದ್ದು ಕುಣಿಯುವ ಅಭಿಮಾನಿಗಳು ಇಲ್ಲಿ ಅದೆಷ್ಟೋ. ಇಂತಹ ಸುದೀಪ.. ಇತ್ತೀಚಿಗೆ ಅಭಿಮಾನಿಯೊಬ್ಬನ ಅಭಿಮಾನಕ್ಕೆ ಮನ ಸೋತಿದ್ದಾರೆ. ಸುದೀಪ ಮನಸು ಗೆದ್ದ ಆ ಅಭಿಮಾನಿಯ ಹೆಸ್ರೇ ಮಂಜುನಾಥ್. ಹೌದು, ಮಂಜುನಾಥ್. ಮೂಲತ ಧಾರವಾಡದವರು. ಇವ್ರಿಗೆ ಕಿವಿ ಕೇಳಿಸಲ್ಲ. ಮಾತು ಬರಲ್ಲ. ಆದ್ರೂ ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಯುಸಿ ಓದಿರುವ ಪ್ರತಿಭಾವಂತ ಹುಡುಗ.

ಚಿಕ್ಕ ವಯಸ್ಸಿನಿಂದನೂ ಸುದೀಪ ಹುಚ್ಚು ಅಭಿಮಾನಿಯಾಗಿರುವ ಮಂಜುನಾಥ್, ಅಭಿನಯ ಚಕ್ರವರ್ತಿ ಸಿನಿಮಗಳನ್ನ ತಪ್ಪದೇ ನೋಡ್ತಾರೆ. ಸುದೀಪರಂತೆ ಸ್ಟೈಲ್ ಮಾಡ್ತಾರೆ. ಫೋಟೊನೂ ಕ್ಲಿಕಿಸಿಕೊಳ್ತಾರೆ. ಇಂತಹ ಮಂಜುನಾಥ್‌ಗೆ, ಸುದೀಪರನ್ನ ಭೇಟಿಯಾಗಲೇಬೇಕೆನ್ನುವ ಹಂಬಲ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿತ್ತು. ಬಹಳ ದಿನಗಳಿಂದ ಸುದೀಪ ಭೇಟಿಗೆ ಕನವರಿಸುತ್ತಿದ್ದ ಮಂಜುನಾಥ್ ಆಸೆಯನ್ನ ಸುದೀಪ ಈಡೇರಿಸಿದ್ದಾರೆ. ಭೇಟಿಯಾಗಿದ್ದಾರೆ.

ಸದ್ಯ ಕೆಸಿಸಿ ಕಪ್‌ಗಾಗಿ ಪ್ರ್ಯಾಕ್ಟೀಸ್ ಮಾಡ್ತಿರುವ ಸುದೀಪ, ತಮ್ಮ ಬ್ಯುಸಿ ಸ್ಕೆಡ್ಯೂಲ್ ನಡುವೆ ಅಭಿಮಾನಿ ಮಂಜುನಾಥ್‌ನನ್ನ ಭೇಟಿಯಾಗಿದ್ದಾರೆ. ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಬರೀ ಇಷ್ಟೇ ಅಲ್ಲ ಮಂಜುನಾಥ್‌ಗೆ ಸಿನಿಮಾದಲ್ಲಿ ನಟಿಸುವ ಬಯಕೆ ಇದೆ. ಇದನ್ನ ಅರಿತ ಸುದೀಪ, ಮಂಜುನಾಥ್ ಕನಸನ್ನ ಈಡೇರಿಸುವ ಭರವಸೆ ನೀಡಿದ್ದಾರೆ. ತಾವೇ ನಿರ್ಮಿಸುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋದಲ್ಲೊಂದು ಪಾತ್ರ ನೀಡುವದಾಗಿ ಹೇಳಿದ್ದಾರೆ. ಬಹುಶ, ಇದಕ್ಕೆ ಅಲ್ವಾ ಸುದೀಪರನ್ನ ಅಭಿಮಾನಿಗಳ ಅಭಿಮಾನಿ ಅನ್ನೋದು. ಅಭಿಮಾನಿಗಳು ಆರಾಧಿಸೋದು

LEAVE A REPLY

Please enter your comment!
Please enter your name here