ಸ್ಯಾಂಡಲ್ವುಡ್ ಚಕ್ರವರ್ತಿಯನ್ನು ಭೇಟಿ ಮಾಡಿದ ರಂಗಸ್ಥಲಂ ನಿರ್ದೇಶಕ – ಸಿಕ್ರೇಟ್ ರಿವೀಲ್

0
232

ದರ್ಶನ್ ಅಭಿಮಾನಿಗಳ ಮನಸು ಇವತ್ತು ಸಿಕ್ಕಾಪಟ್ಟೆ ಖುಷಿಯಾಗಿದೆ. ಇದಕ್ಕೆ ಕಾರಣ ಸುಕುಮಾರ್. ಹೌದು, ರಂಗಸ್ಥಳಂ ಸಿನಿಮಾ ನಿರ್ದೇಶಕ ಸುಕುಮಾರ್ ದರ್ಶನ್ ದರ್ಶನವನ್ನ ಇವತ್ತು ಪಡೆದಿದ್ದಾರೆ. ನಿಮಗೆ ಗೊತ್ತಿರಲಿ ಸುಕುಮಾರ್ ಇತ್ತೀಚಿಗಷ್ಟೇ ಸೂರಜ್ ಗೌಡ ಅಭಿನಯದ ಲಕ್ಷ್ಮೀತನಯ ಚಿತ್ರದ ಮುಹೂರ್ತಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಲಕ್ಷ್ಮೀತನಯ ಚಿತ್ರತಂಡಕ್ಕೆ ಶುಭ ಕೋರಿದ್ದ ಸುಕುಮಾರ್, ಡಾ.ರಾಜ್ ಸ್ಮಾರಕಕ್ಕೆ ನಮನ ಸಲ್ಲಿಸಿದ್ದರು. ಅಣ್ಣಾವ್ರ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದರು. ಆಗ ಕನ್ನಡದಲ್ಲೊಂದು ಸಿನಿಮಾ ಮಾಡ್ಲೇಬೇಕೆನ್ನುವ ತಮಗಿರುವ ಬಹುದಿನದ ಕನಸಿನ ಬಗ್ಗೆ ಹೇಳಿದ್ದ ಸುಕುಮಾರ್ ಇದೀಗ ದರ್ಶನ್‌ರನ್ನ ಭೇಟಿಯಾಗಿದ್ದಾರೆ. ಯಜಮಾನ ಚಿತ್ರೀಕರಣ ಸ್ಥಳಕ್ಕೆ ಹೋಗಿ, ಕೆಲ ಹೊತ್ತು ದರ್ಶನ್‌ರೊಟ್ಟಿಗೆ ಕಾಲ ಕಳೆದಿದ್ದಾರೆ. ಇದೇ ಭೇಟಿ ಇದೀಗ ನಾನಾ ರೀತಿಯಲ್ಲಿ ಚರ್ಚೆಯಾಗ್ತಿದೆ. ಕೂತುಹಲ ಕೆರಳಿಸಿದೆ. ಸುಕುಮಾರ್ ದರ್ಶನ್‌ಗೆ ಆಕ್ಷನ್ ಕಟ್ ಹೇಳ್ತಾರಾ ಅನ್ನುವ ಅನುಮಾನಕ್ಕೂ ಕಾರಣವಾಗಿದೆ. ಅಂದ ಹಾಗೇ ದರ್ಶನ್ ಹಾಗೂ ಸುಕುಮಾರ್ ಭೇಟಿಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಅದೇನೆ ಇರ್ಲಿ , ಸುಕುಮಾರ್ ದರ್ಶನ್ ಸಿನಿಮಾದ ನಿರ್ದೇಶಕನಾಗಿ ಕನ್ನಡಕ್ಕೆ ಬಂದ್ರ್ರೂ, ದಚ್ಚುನಾ ತೆಲುಗಿಗೆ ಕರೆದೊಯ್ದರು ಅಚ್ಚರಿ ಇಲ್ಲ.

LEAVE A REPLY

Please enter your comment!
Please enter your name here