ಸ್ಯಾಂಡಲ್ವುಡ್ ಐಟಿ ದಾಳಿಯ ಹಿಂದಿದೆ ದೊಡ್ಡ ಕಾರಾಮತ್ತು – ಸ್ಟಾರ್ಗಳಿಗೆ ಶಾಕ್ ನೀಡಲು ಕಾರಣವೇನು ?

0
47

ಕನ್ನಡ ಚಿತ್ರರಂಗ ಇಂದು ನಲುಗಿ ಹೋಗಿದೆ. ಯಸ್. ಹೊಸ ವರ್ಷಚಾರಣೆಯ ಮೂಡಿನಿಂದ ಹೊರಬರುವ ಮುನ್ನವೇ, ಗಾಂಧಿನಗರಕ್ಕೆ ಐಟಿ ಗುನ್ನಾ ಬಿದ್ದಿದೆ. ಇಂದು ಬೆಳ್ಳಂ ಬೆಳ್ಳಗ್ಗೆ 200ಕ್ಕೂ ಅಧಿಕ ಸ್ಥಳದಲ್ಲಿ 60ಕ್ಕೂ ಅಧಿಕ ಅಧಿಕಾರಿಗಳೂ ದಾಳಿ ಮಾಡಿದ್ದಾರೆ. ಅದು, ಕನ್ನಡ ಚಿತ್ರರಂಗದ ದಿಗ್ಗಜರ ಮನೆ ಮೇಲೆ. ಇದ್ರಿಂದ ಸಹಜವಾಗಿ ಗಾಂಧಿನಗರ ಆತಂಕಕ್ಕೀಡಾಗಿದೆ. ಯಸ್, ಕನ್ನಡ ಚಿತ್ರರಂಗದ ಹೆಡ್ಡಾಫೀಸ್ ಸದಾಶಿವನಗರದಲ್ಲಿನ ದೊಡ್ಮನೆ ಮೇಲೆ ಇಂದು ಬೆಳ್ಳಿಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಖಲೆಗಳನ್ನ ಪರಿಶೀಲಿಸಿದ್ದಾರೆ. ಹೌದು, ಪವರ್ ಸ್ಟಾರ್ ಪುನೀತ್ ಮನೆ ಬಾಗಿಲನ್ನ ಬೆಳ್ಳಿಗ್ಗೆ ಬಡೆದ ಐಟಿ ಅಧಿಕಾರಿಗಳು, ಪುನೀತ್ ವಿಚಾರಣೆಯನ್ನ ಮಾಡಿದ್ದಾರೆ. ಮೊದಲೇ ಪುನೀತ್ ಆಸ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಐ ಟಿ ಅಧಿಕಾರಿಗಳು, ಹಿಂದಿನ ವರ್ಷ ಪುನೀತ್ ಪಡೆದ ಸಂಭಾವನೆಯ ಬಗ್ಗೆಯೂ ಪ್ರಶ್ನೆಗಳನ್ನ ಕೇಳಿದ್ದಾರೆ. ಇನ್ನು, ಗೆದ್ದ ಸಿನಿಮಾಗಳಲ್ಲಿ ಶೇರ್ ಪಡೆದಿದ್ದಾರಾ ಅನ್ನುವ ಸಂದೇಹದಲ್ಲಿ ಪ್ರಶ್ನೆ ಮಾಡಿದ ಅಧಿಕಾರಿಗಳು, ಪುನೀತ್ ಕಟ್ಟಿರುವ ತೆರಿಗೆಯ ಲೆಕ್ಕವನ್ನೂ ಪಡೆದಿದ್ದಾರೆ.

ಬರೀ ಪುನೀತ್ ಅಷ್ಟೇ ಅಲ್ಲ ಸೆಂಚ್ಯೂರಿ ಸ್ಟಾರ್ ಶಿವರಾಜ್ ಕುಮಾರ್ ಮನೆ ಮೇಲೂ ಇಂದು ಐಟಿ ದಾಳಿ ನಡೆದಿದೆ. ಶಿವಣ್ಣ ಮನೆಯಲ್ಲಿ ಇರುವದನ್ನ ಖಚಿತ ಪಡಿಸಿಕೊಂಡಿದ್ದ ಐ.ಟಿ.ಅಧಿಕಾರಿಗಳು, ಶಿವಣ್ಣ ಬಳಿ ಮಾಹಿತಿ ಕಲೆ ಹಾಕಿದ್ದಾರೆ. ಹಿಂದಿನ ಚಿತ್ರದ ಸಂಭಾವನೆ, ಸದ್ಯ ಪಡೆಯುತ್ತಿರುವ ಸಂಭಾವನೆ ಬಗ್ಗೆಯೂ ಕೇಳಿದ್ದಾರೆ. ಇನ್ನೂ ಇದೇ ವೇಳೆ ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ವಿಚಾರಣೆಯನ್ನೂ ಮಾಡಿದ್ದಾರೆ. ದೊಡ್ಮನೆ ಹುಡುಗರ ಮೇಲಾದ ಐಟಿ ದಾಳಿ, ಸಹಜವಾಗಿಯೇ ಅಭಿಮಾನಿಗಳನ್ನ ಕೆರಳಿಸಿದೆ. ಹಾಗಾಗಿ, ದಾಳಿ ನಡೆದಿರುವ ವಿಚಾರ ತಿಳಿಯುತ್ತಿದ್ದಂತೆ ಮನೆ ಬಳಿ ಜಮಾಯಿಸಿದ ಅಭಿಮಾನಿಗಳೂ ಇದೇ ವೇಳೆ ತಮ್ಮ ಆಕ್ರೋಶವನ್ನೂ ಹೊರ ಹಾಕಿದ್ದಾರೆ. ಇದು, ರಾಜಕೀಯ ಪ್ರೇರಿತ ದಾಳಿ ಎಂದು ಕೇಂದ್ರ ಸರ್ಕಾರ ಮೇಲೆ ತಮಗಿರುವ ಸಿಟ್ಟನ್ನೂ ಹೊರ ಹಾಕಿದ್ದಾರೆ. ದೊಡ್ಮನೆ ಮೇಲೀನ ದಾಳಿ ಬೇಸರಕ್ಕೆ ಕಾರಣವಾಗಿದೆ ಅಂತಾನೂ ಅಂದಿದ್ದಾರೆ.

ಇನ್ನೂ ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೂ ಇಂದು ದಾಳಿ ನಡೆದಿದೆ. ಬರೀ ಯಶ್ ಮನೆಯಷ್ಟೇ ಅಲ್ಲ, ಯಶೋಮಾರ್ಗ ಕಛೇರಿ ಹಾಗೂ ರಾಧಿಕಾ ಪಂಡಿತ್ ತವರು ಮನೆಯ ಮೇಲೂ ಐಟಿ ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ. ಅಂದ ಹಾಗೇ ಐಟಿ ದಾಳಿ ನಡೆದಾಗ ಯಶ್, ಬೆಂಗಳೂರಿನಲ್ಲಿ ಇರಲಿಲ್ಲ. ತಮ್ಮ ಕೆ.ಜಿ.ಎಫ್ ಚಿತ್ರಕ್ಕಾಗಿ ಮುಂಬೈನಲ್ಲಿ ಬೀಡು ಬಿಟ್ಟಿದ್ದ ಯಶ್, ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರಿನತ್ತ ಧಾವಿಸಿದ್ದಾರೆ. ಇನ್ನೂ ಇದೇ ವೇಳೆ ಮಾಧ್ಯಮದವ್ರ ಬಳಿ ಮಾತನಾಡಿದ ಯಶ್ ಸಹೋದರಿ ನಂದಿನಿ, ದಾಳಿ ಆಗಿದ್ದೇಕೆ ಅನ್ನುವದು ಗೊತ್ತಿಲ್ಲ ಅಂದಿದ್ದಾರೆ. ಭಯ ಪಡುವ ಅಗತ್ಯನೂ ಇಲ್ಲ ಅಂದಿದ್ದಾರೆ.ಬರೀ ಯಶ್ ಅಷ್ಟೇ ಅಲ್ಲ ಕೆ.ಜಿ.ಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಮನೆ ಹಾಗೂ ಕಛೇರಿಗಳ ಮೇಲೂ ಇಂದು ಐಟಿ ದಾಳಿ ನಡೆದಿದೆ. ಹಾಕಿರುವ ಬಂಡವಾಳ.. ಬಂದ ಬಂಡವಾಳ ಹೀಗೆ ಎಲ್ಲದ್ರ ವಿಚಾರಣೆಯನ್ನೂ ಇಂದು ನಡೆಸಿದ್ದಾರೆ ಐಟಿ ಅಧಿಕಾರಿಗಳು. ಇಷ್ಟೇ ಅಲ್ಲ ವಿಜಯ್ ಕಿರಗಂದೂರ್ ಆಪ್ತ ಆನಂದ್ ಮನೆ ಮೇಲೂ ಐ.ಟಿ.ಅಧಿಕಾರಿಗಳೂ ದಾಳಿ ಮಾಡಿದ್ದಾರೆ. ಅಭಿನಯ ಚಕ್ರವರ್ತಿ ಸುದೀಪಗೂ ಐಟಿ ಶಾಕ್ ನೀಡಿದೆ. ಅಸಲಿಗೆ ಸುದೀಪ ದಾಳಿ ನಡೆದ ಸಂದರ್ಭದಲ್ಲಿ ಮೈಸೂರಿನಲ್ಲಿದ್ದರು. ತಮ್ಮ ಪೈಲ್ವಾನ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಆದ್ರೆ ಅದ್ಯಾವಾಗ ಐಟಿ ದಾಳಿ ವಿಚಾರ ಸುದೀಪಗೆ ತಲುಪಿತೋ ಆಗ ಮೈಸೂರಿನಿಂದ ಬೆಂಗಳೂರಿಗೆ ಬಂದ ಸುದೀಪ, ಐ.ಟಿ.ಇಲಾಖೆಯ ಅಧಿಕಾರಿಗಳ ತನಿಖೆಗೆ ಪೂರ್ಣ ಸಹಕಾರ ನೀಡುವ ಮಾತುಗಳನ್ನು ಆಡಿದ್ರು. ಮೂರು ದೊಡ್ಡ ಸಿನಿಮಾಗಳ ವಿಚಾರದಿಂದ ದಾಳಿ ಆಗಿರಬಹುದು ಅಂದ್ರು. ಕನ್ನಡ ಚಿತ್ರರಂಗದ ಧೀರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ದಿ ವಿಲನ್ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್, ನಿರ್ಮಾಪಕ ಹಾಗೂ ವಿತರಕ ಜಯಣ್ಣ ಮನೆ ಬಾಗಿಲನ್ನೂ ಇಂದು ಐ.ಟಿ.ಅಧಿಕಾರಿಗಳು ತಟ್ಟಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿರುವ ಮೂವರ ಮನೆ, ಕಛೇರಿ ಹಾಗೂ ಇನ್ನುಳಿದ ಒಡೆತನದ ಸಂಸ್ಥೆಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆಯನ್ನ ಮಾಡಿದ್ದಾರೆ. ಸದ್ಯ ಬೆಳ್ಳಿಗ್ಗೆ ಆರು ಘಂಟೆನಿಂದ ಶುರುವಾದ ವಿಚಾರಣೆ ಸುಧೀರ್ಘವಾಗಿ ನಡೆದಿದೆ. ಇದೇ ವೇಳೆ ಕನ್ನಡ ಚಿತ್ರರಂಗದ ದಿಗ್ಗಜರ ಮೇಲಾದ ಇದೇ ದಾಳಿ ಕನ್ನಡ ಚಿತ್ರರಂಗವನ್ನೇ ನಡುಗಿಸಿದೆ. ಕಾರಣ, ಹಿಂದೆಂದೂ ಇಂಥಹದ್ದೊಂದು ದಾಳಿ ಕನ್ನಡ ಚಿತ್ರರಂಗದಲ್ಲಿ ನಡೆದಿರಲಿಲ್ಲ.

LEAVE A REPLY

Please enter your comment!
Please enter your name here