ಸ್ಯಾಂಡಲ್ವುಡ್ನಲ್ಲಿ ಹತ್ತು ವರ್ಷ ಮುಗಿಸಿದ ಸಂತೋಷದಲ್ಲಿ – ರಮ್ಯನಿಗೆ ಶಾಕಿಂಗ್ ನ್ಯೂಸ್ ಕೊಟ್ರು ರಾಗಿಣಿ

0
305

ರಾಗಿಣಿ ದ್ವೀವೇದಿ.. ಕನ್ನಡ ಚಿತ್ರರಂಗದ ತುಪ್ಪದ ಬೆಡಗಿ. ಚಂದನವನದಲ್ಲಿ ಒಂದು ದಶಕವನ್ನ ಇತ್ತೀಚಿಗಷ್ಟೇ ಕಂಪ್ಲೀಟ್ ಮಾಡಿರುವ ರಾಗಿಣಿ, ಇದೀಗ.. ಗಾಂಧಿನಗರದಿಂದ ವಿಧಾನಸೌಧಕ್ಕೆ ಶಿಫ್ಟ್ ಆಗುವ ಮನಸು ಮಾಡಿದಂತಿದೆ. ಹೌದು, ಇದೀಗ ಎಲ್ಲೆಡೆ ಚುನಾವಣಾ ಪ್ರಚಾರದ ಬಿಸಿಯೇರಿಕೊಂಡಿದೆ. ದರ್ಶನ್.ಯಶ್. ಚುನಾವಣಾ ಅಖಾಡದಲ್ಲಿದ್ದಾರೆ. ಸುಮಲತಾ ಹಾಗೂ ನಿಖಿಲ್ ನಡುವಿನ ಮಂಡ್ಯ ಮಹಾಯುದ್ಧ ಕೂತುಹಲ ಕೆರಳಿಸಿದೆ. ಇದ್ರ ನಡುವೆ ಇದೀಗ ರಾಗಿಣಿ ರಾಜಕೀಯಕ್ಕಿಳಿಯಲು ನಾನು ರೆಡಿ ಅಂದಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸುವ ಸೂಚನೆಯನ್ನೂ ನೀಡಿದ್ದಾರೆ. ಅಷ್ಟೇ ಅಲ್ಲ ಯಾರಾದ್ರೂ ಅವಕಾಶ ಕೊಟ್ಟರೆ, ಮಣೆ ಹಾಕಿದ್ರೆ ರಾಜಕೀಯ ಅಖಾಡಕ್ಕಿಗ್ಲೇ ಇಳಿಯುತ್ತೇನೆ ಅನ್ನುವ ಮಾತುಗಳನ್ನಾಡಿದ್ದಾರೆ. ಅಸಲಿಗೆ ರಾಗಿಣಿಗೆ ತನ್ನನ್ನ ಪ್ರೀತಿಸಿದ ಪ್ರೋತ್ಸಾಹಿಸಿ ಬೆಳೆಸಿದವ್ರಿಗೆ ಒಳ್ಳೇಯದನ್ನ ಮಾಡಬೇಕೆನ್ನುವ ಸದುದ್ದೇಶ ಹಾಗೂ ಕನಸಿದೆ. ಇದಕ್ಕೆ ರಾಜಕೀಯ ರಂಗವೇ ಅತ್ಯುತ್ತಮವಾದ ವೇದಿಕೆ. ಹಾಗಾಗೇ ಪೊಲಿಟಿಕಲ್ ಫೀಲ್ಡ್‌ಗೆ ಇಳಿಯುವ ಮನಸು ಮಾಡಿದ್ದಾರೆ ರಾಗಿಣಿ.

ಇನ್ನೂ ರಾಗಿಣಿಯ ಇದೇ ನಿರ್ಧಾರ, ಇದೀಗ ಗಾಂಧಿನಗರದಲ್ಲಿ ಮತ್ತೊಂದು ಹಂತದ ಚರ್ಚೆಗೂ ಕಾರಣವಾಗಿದೆ. ಅದುವೇ ರಮ್ಯಾ ಹಾಗೂ ರಾಗಿಣಿಯ ಕದನದ ಕಥನ. ಹೌದು, ನಿಮಗೆ ಗೊತ್ತಿರಲಿ ಮೊದಲಿಂದನೂ ರಾಗಿಣಿ ಹಾಗೂ ರಮ್ಯ ನಡುವಿನ ಸಂಬಂಧ ಅಷ್ಟಕಷ್ಟೇ. ಒಂದರ್ಥದಲ್ಲಿ ಇಬ್ಬರದ್ದು ಹಾವು-ಮುಂಗುಸಿಯ ಸಂಬಂಧ. ಅತ್ತ ರಮ್ಯಾ ಕಾಂಗ್ರೆಸ್‌ನಲ್ಲಿ ಮಿಂಚುತ್ತಿದ್ದರೆ, ರಾಗಿಣಿ ಬಿಜೆಪಿ ಪಾಳೆಯ ಸೇರುವ ಮನಸು ಮಾಡಿದ್ದಾರೆ. ಒಂದ್ವೇಳೆ..ರಾಗಿಣಿ ಪೊಲಿಟಿಕಲ್ ಅಖಾಡಕ್ಕೆ ಬಿ.ಜೆ.ಪಿ. ಪಾಳಯದಿಂದ ಇಳಿದಿದ್ದೇ ಆದಲ್ಲಿ ರಮ್ಯಾ ಹಾಗೂ ರಾಗಿಣಿ ನಡುವಿನ ಕೋಳಿ ಜಗಳ ಮತ್ತೆ ಶುರುವಾದ್ರೂ ಅಚ್ಚರಿ ಇಲ್ಲ ಅನ್ನುವದು ಗಾಂಧಿನಗರದ ಗಲ್ಲಿಗಳಲ್ಲಿ ಸದ್ಯ ಕೇಳಿ ಬರುತ್ತಿದೆ.

LEAVE A REPLY

Please enter your comment!
Please enter your name here