ಸ್ಯಾಂಡಲ್ವುಡ್ಡಿಗೆ ಮತ್ತೊಬ್ಬ ಆರಡಿ ಆ್ಯಕ್ಷನ್ ಹೀರೋ – ರಾಜಣ್ಣನ ಮಗ ಮಾಸ್ ಪ್ರೇಕ್ಷಕರಿಗೆ ಹಬ್ಬದೂಟ

0
189

ರಾಜಣ್ಣನ ಮಗ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿರುವ ಸಿನಿಮಾ. ಯಸ್.. ರಾಜಣ್ಣನ ಮಗ, ಗೆದ್ದಿದ್ದಾನೆ. ಇದಕ್ಕೆ ಸಾಕ್ಷಿ ಅನ್ನುವಂತೆ ಮೊದಲ ದಿನ ಪ್ರೇಕ್ಷಕರ ದಂಡು ರಾಜಣ್ಣನ ಮಗನಿಗೆ ಬಹುಪರಾಕ್ ಹಾಕಿದ್ದಾರೆ. ಶಿಳ್ಳೆ ಹೊಡೆದಿದ್ದಾರೆ. ರಾಜಣ್ಣನ ಮಗನಿಗೆ ಅಭೂತಪೂರ್ವ ಸ್ವಾಗತವನ್ನೂ ಕೋರಿದ್ದಾರೆ. ರಾಜಣ್ಣನ ಮಗ ಬೆಸಿಕಲಿ ಅಪ್ಪ-ಮಗನ ಸಂಬಂಧದ ಸುತ್ತ ಸುತ್ತುವ ಸಿನಿಮಾ. ಇದೇ ಭಾವನಾತ್ಮಕ ಸಂಬಂಧದ ಹೂರಣ ಸಿನಿಮಾದ ಜೀವಾಳನೂ ಹೌದು. ಪ್ರೇಕ್ಷಕರಿಗೆ ಇಷ್ಟವಾಗ್ತಿರೋದು ಕೂಡಾ ಇದೇ ಅಂಶವೇ. ಅಷ್ಟಕ್ಕೂ ರಾಜಣ್ಣನ ಮಗನ ಕಥಾಹಂದರದಲ್ಲಿ ಬರೀ ಭಾವನೆಗಳ ಮೆರವಣಿಗೆ ಇದೆ ಅಂಥ ನೀವ್ ಅನ್ಕೋಳ್ಳೋ ಹಂಗಿಲ್ಲ. ಕಾರಣ, ಇಲ್ಲಿ ಕಮರ್ಷಿಯಲ್ ಅಂಶಗಳನ್ನೂ ಹದವಾಗಿ ಸೇರಿಸಲಾಗಿದೆ. ಹೌದು, ಅಪ್ಪ ಅಮ್ಮನ ಪ್ರೀತಿಯ ಚಿಲುಮೆಯಲ್ಲಿ ಬೆಳೆದ ಮಗ ಗೌರಿಶಂಕರ್. ರೌಡಿಯೊಬ್ಬನ ಕೊಲೆ ಆಪಾದನೆ ಮೇಲೆ ಜೈಲು ಪಾಲಾಗುತ್ತಾನೆ. ನಂತರ ಕಾಣದ ಕೈಗಳ ಕುತಂತ್ರಕ್ಕೆ ಬಲಿಯಾಗಿ ಭೂಗತಲೋಕದ ದೊರೆಯೂ ಆಗುತ್ತಾನೆ. ಸಾಲದಕ್ಕೆ ತನ್ನಪ್ಪನ ನಿವೇಶನಕ್ಕೂ ಬೇಲಿ ಹಾಕುತ್ತಾನೆ.

ಹೀಗೆ ಸಾಗುವ ಕಥಾಹಂದರದದಲ್ಲಿ ನಾಯಕ ನಂತರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಪ್ರೀತಿಯ ಬಲೆಯಲ್ಲೂ ಬೀಳುತ್ತಾನೆ. ಕೊನೆಗೆ ಮಗ ನಿರಪರಾಧಿ ಅನ್ನುವ ಸತ್ಯ ಅಪ್ಪ ರಾಜಣ್ಣನಿಗೆ ಗೊತ್ತಾಗುತ್ತೆ. ಮಗ ಯಾರ ರಕ್ಷಣೆಗಾಗಿ ಜೈಲು ಸೇರಿದ ಅನ್ನೋದು ಚಿತ್ರದ ತಿರುಳು. ಅದು ಗೊತ್ತಾಗಬೇಕಾದ್ರೆ ನೀವ್ ಒಮ್ಮೆ ರಾಜಣ್ಣನ ಮಗನನ್ನ ಚಿತ್ರಮಂದಿರದಲ್ಲಿ ನೋಡಬೇಕು. ಇನ್ನೂ ರಾಜಣ್ಣನ ಮಗನ ಬಹುದೊಡ್ಡ ಪ್ಲಸ್ ಪಾಯಂಟ್ ಅಂದ್ರೆ ಅದು ಸಂಗೀತ ನಿರ್ದೇಶಕ ರವಿ ಬಸ್ರೂರ್ ಸಂಗೀತ ನಿರ್ದೇಶನ. ಇನ್ನೂ ಆಫ್ಟರ್ ಎ ಗ್ಯಾಪ್ ಅಖಾಡಕ್ಕಿಳಿದ ಚರಣ್ ರಾಜ್ ಅಪ್ಪನ ಪಾತ್ರದಲ್ಲಿ ನಿಮಗೆ ಖಂಡಿತ ಇಷ್ಟವಾಗುತ್ತಾರೆ. ನಾಯಕ ಹರೀಶ್ ಜಲಗೆರೆ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅದ್ರಲ್ಲೂ ಸಾಹಸ ಸನ್ನಿವೇಶಗಳನ್ನ ಸಮರ್ಥವಾಗಿ ನಿಭಾಯ್ಸಿದ್ದಾರೆ ಹರೀಶ್. ಅದೇನೆ ಇರ್ಲಿಸ ಸದ್ಯ ರಾಜಣ್ಣನ ಮಗ ನೂರಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡು, ಮುನ್ನುಗ್ಗುತ್ತಿದ್ದಾನೆ. ಕ್ಲಾಸ್ ಹಾಗೂ ಮಾಸ್ ಎರಡು ವರ್ಗಕ್ಕೂ ಇಷ್ಟವಾಗುವಂಥ ಇದೇ ರಾಜಣ್ಣನ ಮಗನ ಆಟ ಹಾಗೂ ಓಟ ಮುಂದಿನ ದಿನಗಳಲ್ಲಿ ಹೇಗಿರಲಿದೆ ಅನ್ನೋದಕ್ಕುತ್ತರ ಸದ್ಯದಲ್ಲೇ ಸಿಗಲಿದೆ.

LEAVE A REPLY

Please enter your comment!
Please enter your name here