ಸ್ಯಾಂಡಲ್ವುಡ್ಗೆ ಜೂ ಗಣೇಶ್ ಪದಾರ್ಪಣೆ – ಅಪ್ಪನ ಜೊತೆ ಬಣ್ಣ ಹಚ್ಚಿದ ಮರಿ ಗೋಲ್ಡನ್ ಸ್ಟಾರ್

0
75

ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್, ತಮ್ಮ ಅಭಿಮಾನಿಗಳಿಗೆ ಸಿಹಿಯಾದ ಸುದ್ದಿಯೊಂದನ್ನ ನೀಡಿದ್ದಾರೆ. ತಮ್ಮ ಪುತ್ರ ವಿಹಾನ್‌ರನ್ನ ಸಿನಿಮಾರಂಗಕ್ಕೆ ಪರಿಚಯಿಸಿದ್ದಾರೆ.ಹೌದು, ಗಣಪನ ಮಗ ಬಾಲನಟನಾಗಿ ಇದೀಗ ಅಖಾಡಕ್ಕಿಳಿದಿದ್ದಾನೆ. ಅದು, ಕೈಯಲ್ಲಿ ಬಂದೂಕು ಹಿಡಿಯುವ ಮೂಲಕ. ಯಸ್, ನಿಮಗೆ ಗೊತ್ತಿರಲಿ ಗಣೇಶ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದಾದ ಮೇಲೊಂದು ಚಿತ್ರಗಳ ಚಿತ್ರೀಕರಣದಲ್ಲಿ ತಲ್ಲೀನರಾಗಿರುವ ಗಣೇಶ್, ಇದೀಗ ಗೀತಾ ಚಿತ್ರದ ಚಿತ್ರೀಕರಣ ಮಾಡುತ್ತಿದ್ದಾರೆ. ಇದೇ ಗೀತಾಗಾಗಿ ಗಣೇಶ್ ಇದೀಗ ತಮ್ಮ ಪುತ್ರ ವಿಹಾನ್‌ರನ್ನ ಕ್ಯಾಮರಾ ಮುಂದೆ ಕರೆತಂದಿದ್ದಾರೆ. ಅಂದ ಹಾಗೇ ಗೀತಾ ಚಿತ್ರದ ಮೂಲಕ ಪುತ್ರ ವಿಹಾನ್‌ರನ್ನ ಇಂಟ್ರಡ್ಯೂಸ್ ಮಾಡ್ತಿರುವ ಗಣೇಶ್, ಹಿಂದೆ ಚಮಕ್ ಚಿತ್ರದಲ್ಲಿ ಪುತ್ರಿ ಚಾರಿತ್ರ್ಯಳನ್ನ ಕನ್ನಡಿಗರಿಗೆ ಪರಿಚಯ ಮಾಡಿಸಿದ್ದರು.

ಇನ್ನೂ ಸಿನಿಮಾ ರಂಗದಲ್ಲಿ ಸ್ಟಾರ್ ನಟರ ಮಕ್ಕಳು ಸ್ಟಾರ್ ಆಗೋದು ಕಾಮನ್ ಎಂಬ ಮಾತಿನಂತೆ ಇತ್ತೀಚಿಗೆ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟರ ಮಕ್ಕಳ ಎಂಟ್ರಿ ಬಲು ಜೋರಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ಯಜಮಾನ ಸಿನಿಮಾದ ಒಂದು ಹಾಡಿನಲ್ಲಿ ಅಪ್ಪನಂತೆ ಭರ್ಜರಿ ಸ್ಟೆಪ್ ಹಾಕಿ ಮಿಂಚಿದ್ರು. ಅಲ್ಲದೇ ಉಪೇಂದ್ರ ಪುತ್ರಿ ಐಶ್ವರ್ಯ ಕೂಡ ‘ದೇವಕಿ’ ಅನ್ನೋ ಚಿತ್ರದಲ್ಲಿ ಅಮ್ಮನ ಮುದ್ದಿನ ಮಗಳಾಗಿ ಕಾಣಿಸಿಕೊಂಡು ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ರು. ಇದೀಗ ಗೋಲ್ಡನ್ ಸ್ಟಾರ್ ‘ಗಣಿ’ ಪುತ್ರ ವಿಹಾನ್ ಎಂಟ್ರಿ ಕೊಟ್ಟಿದ್ದಾನೆ. ಮುಂದೆ ಇವ್ರ ಸಾಲಿಗೆ ಇನ್ಯಾರ ಕಲಾವಿದರ ಪುತ್ರ ಅಥ್ವಾ ಪುತ್ರಿ ಸೇರ್ತಾಣರೋ ಕಾದು ನೋಡಬೇಕು.

LEAVE A REPLY

Please enter your comment!
Please enter your name here