ಸ್ಟಂಟ್ ಸಮಯದಲ್ಲಿ ಕಾಲು ಮುರಿದುಕೊಂಡ ಮರಿ ಟೈಗರ್ – ವರ್ಧ ಚಿತ್ರಿಕರಣದಲ್ಲಿ‌ ನಡೆದ ಘಟನೆ

0
242

ವಿನೋದ್ ಪ್ರಭಾಕರ್.. ಕನ್ನಡ ಚಿತ್ರರಂಗದ ಲೀಡಿಂಗ್ ಸ್ಟಾರ್. ಕಳೆದ ವಾರವಷ್ಟೇ ಬಿಡುಗಡೆಯಾದ ರಗಡ್, ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಚಿತ್ರದ ಯಶಸ್ಸು ಸಹಜವಾಗಿಯೇ ವಿನೋದ್‌ಗೆ ತೃಪ್ತಿ ತಂದು ಕೊಟ್ಟಿದೆ. ಇದೇ ತೃಪ್ತಿಯಲ್ಲಿ ವರದ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವಿನೋದ್ ಇದೀಗ ಗಾಯಗೊಂಡಿದ್ದಾರೆ. ಹೌದು, ವಿನೋದ್ ಬಲಗಾಲಿನ ಮೂಳೆಯಲ್ಲಿ ಕ್ರ್ಯಾಕ್ ಕಾಣಿಸಿಕೊಂಡಿದೆ. ನಿಮಗೆ ಗೊತ್ತಿರಲಿ ವಿನೋದ್ ಇಂದು ಬೆಳ್ಳಿಗ್ಗೆ ಹೊಸ ಚಿತ್ರ ವರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಬೆಂಗಳೂರಿನ ಟಿಂಬರ್ ಫ್ಯಾಕ್ಟರಿಯಲ್ಲಿ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವಿನೋದ್, ಆಕ್ಷನ್ ಸಿಕ್ವನ್ಸ್ ಶೂಟ್ ವೇಳೆ ಜಂಪ್ ಮಾಡುವಾಗ ಕಾಲು ಟ್ವಿಸ್ಟ್ ಆಗಿ ಮುರಿತಕ್ಕೊಳಗಾಗಿದೆ. ಗಾಯಗೊಂಡ ವಿನೋದ್‌ರನ್ನ ಕೂಡಲೇ ಮಾಗಡಿ ರಸ್ತೆಯ ಬಳಿ ಇರುವ ಅರ್ಥೋಕೇರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ಸದ್ಯ, ವಿನೋದ್ ಪ್ರಭಾಕರ್ ಅವ್ರಿಗೆ ಐದು ವಾರಗಳ ವಿಶ್ರಾಂತಿ ಸೂಚಿಸಲಾಗಿದ್ದು, ವಿನೋದ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here