ಸೈಲೆಂಟ್ ಆಗಿ‌ ಸದ್ದು ಮಾಡ್ತಿದೆ ಲಾಯರ್ಸ್ ಲವ್ ಸ್ಟೋರಿ – 25ನೇ ದಿನದತ್ತ ಅನಂತ್ VS ನುಸ್ರತ್

0
37

ಫ್ಯಾಮಿಲಿಗಳ ದಿಲ್ ಕದ್ದ ಅನಂತು ನುಸ್ರುತ್ ಪ್ರೇಮಕಾವ್ಯ
ಯಶಸ್ವಿ 25ನೇ ದಿನದತ್ತ ಅನಂತು ನುಸ್ರುತ್ ಲವ್ ಕಹಾನಿ . 
ಅನಂತ್ ವರ್ಸಸ್ ನುಸ್ರುತ್ ಯಾವುದೇ ದೊಡ್ಡ ನಿರೀಕ್ಷೆಯಿಲ್ಲದೇ ಬಿಡುಗಡೆಯಾದ ಚಿತ್ರ. ಮೊದಲ ದಿನವೇ ಸಿನಿಪ್ರಿಯರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡ ಈ ಚಿತ್ರದ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನ ಅಟ್ರ್ಯಾಕ್ಟ್ ಮಾಡುವಲ್ಲಿ ಸಫಲವಾಗಿದೆ. ನಿಧಾನಕ್ಕೆ ಈ ಚಿತ್ರದ ಮೇಲೆ ಟಾಕ್ ಶುರುವಾಗಿದೆ. ಅದ್ರಂತೆ ಇದೀಗ ಅನುಂತ್ ವರ್ಸಸ್ ನುಸ್ರುತ್ ಸಿನಿಮಾ ಈ ವಾರಕ್ಕೆ ಯಶಸ್ವಿ ಮೂರನೇ ವಾರಕ್ಕೆ ಕಾಲಿಡ್ತಿದೆ. ಜೊತೆಗೆ ಯಶಸ್ವಿಯಾಗಿ 25ದಿನಗಳ ಮುಟ್ಟುವ ಸಂಭ್ರಮದಲ್ಲಿದೆ. ಅನಂತ್ ವರ್ಸಸ್ ನುಸ್ರುತ್ ಸಿನಿಮಾವನ್ನ ಕ್ಲಾಸ್ ಆಡಿಯನ್ಸ್ ಹೆಚ್ಚು ಇಷ್ಟ ಪಡ್ತಿದ್ದು, ಮಲ್ಟಿಪ್ಲೆಕ್ಸ್ ಗಳಲ್ಲಿ ಈ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಕಾಲೇಜು ಹುಡುಗ್ರನ್ನ ಬಹುವಾಗಿ ಸೆಳೆದಿದ್ದು, ಫ್ಯಾಮಿಲಿ ಆಡಿಯನ್ಸ್ ಗೂ ಸಖತ್ ಮಜಾ ಕೊಡ್ತಿದೆ.

ದೊಡ್ಡ ಸಿನಿಮಾಗಳು ಬಂದಿದ್ದರು, ಪರಭಾಷಾ ಸಿನಿಮಾಗಳ ಆರ್ಭಟವಿದ್ರು… ಅದ್ಯಾವುದು ಅನುಂತು ವರ್ಸಸ್ ನುಸ್ರುತ್ಗೆ ಎಫೆಕ್ಟ್ ಆಗಿಲ್ಲ… ತನ್ನದೇ ಹಾದಿಯಲ್ಲಿ ಈ ಸಿನಿಮಾ ಗೆಲುವಿನ ಓಟವನ್ನ ಮುಂದುವರೆಸಿದೆ..ಅನಂತು ಪಾತ್ರದಲ್ಲಿ ವಿನಯ್ ಮೋಡಿ ಮಾಡಿದ್ದಾರೆ.. ಲತಾ ಹೆಗ್ಗಡೆ ಪಾತ್ರ ಸುಂದರವಾಗಿದೆ.. ಇವರಿಬ್ಬರ ಕೆಮಿಸ್ಟ್ರಿ ಸಿನಿಮಾದ ಹೈಲೈಟ್.. ಸುನಾದ್ ಗೌತಮ್ ಸಂಗೀತ ಚಿತ್ರದ ಮತ್ತೊಂದು ತಾಕತ್.. ಸುಧೀರ ಶಾನ್ ಭೋಗ್ ನಿರ್ದೇಶನ, ನಿರೂಪಣೆ ಕ್ಲಾಸಿಯಾಗಿದ್ದು, ಸಿನಿಮಾ ತುಂಬೆಲ್ಲಾ ಇವ್ರು ಭರವಸೆಯ ನಿರ್ದೇಶಕನಾಗಿ ಕಾಣಸ್ತಾರೆ..ಕಾಮಿಡಿ ಟ್ರ್ಯಾಕ್ ನಲ್ಲಿ ಸಾಗೋ ಈ ಅಪರೂಪದ ಪ್ರೇಮ ಕಾವ್ಯ ನಿಜಕ್ಕೂ ಮನಮುಟ್ಟುತ್ತೆ… ಸಿನಿಮಾ ನೋಡಿ ಹೊರಬಂದ್ಮೇಲೂ ಕಾಡುತ್ತೆ… ಒಂದೊಳ್ಳೆ ಕಥೆಯನ್ನಾಧರಿಸಿದ, ಸಂಗೀತ ಭರಿತ, ಮನಸೊಲ್ಲಾಗೊಳಿಸೋ ಸಿನಿಮಾ ಬೇಕು ಅಂದ್ರೆ ನೀವು ಅನಂತು ವರ್ಸಸ್ ನುಸ್ರುತ್ ರ ಈ ಪ್ರೇಮಕಥೆಯನ್ನ ನೋಡಿಕೊಂಡು ಬನ್ನಿ.

LEAVE A REPLY

Please enter your comment!
Please enter your name here