ಸಿಕ್ಕಿದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳದ ಸಂಯುಕ್ತ – ಸಿನಿಮಾ‌ ಬಿಟ್ಟು ಬೇರೆಲ್ಲವೂ‌ ಮಾಡುತ್ತಿದ್ದಾಳೆ ಈ ಕಿರಿಕ್ ಹುಡುಗಿ !

0
216

ಕಿರಿಕ್ ಪಾರ್ಟಿ ಮೂಲಕ ಕನ್ನಡಿಗರಿಗೆ ಪರಿಚಯವಾದ ಸಂಯುಕ್ತಾಗೆ ಬಟ್ಟೆಗಳೂ ಅಂದ್ರೆ ಅಲರ್ಜಿ. ಇದು, ಮೇಲಿಂದ ಮೇಲೆ ಸಾಬೀತಾಗ್ತಿರುವ ಸಂಗತಿ. ಸದಾ.. ಬಿಕಿನಿಯಲ್ಲೇ ಕಾಣಸಿಗುವ, ಮೂರೊತ್ತು ಬೀಚ್‌ನಲ್ಲೇ ಸುತ್ತುವ ಈ ಚಡ್ಡಿ ಚಿಕ್ಕಿ ಇದೀಗ ಬಿಕಿನಿಯಲ್ಲೊಂದು ಸರ್ಕಸ್ ಮಾಡಿದ್ದಾಳೆ. ಸಂಯುಕ್ತಾಳ ಇದೇ ಸರ್ಕಸ್ ಇದೀಗ ಸಿಕ್ಕಾಪಟ್ಟೆ ಚರ್ಚೆಗೀಡಾಗುತ್ತಿದೆ. ಯಸ್, ಇದು.. ಸಂಯುಕ್ತಾ ಲೇಟೆಸ್ಟ್ ಭಂಗಿ. ಹೌದು ಸದಾ ಟೂ ಪೀಸ್ ಬಟ್ಟೆಗಳನ್ನು ತೊಡುವುದಲ್ಲದೇ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸ್ವಮಾನ ಹರಣ ಮಾಡಿಕೊಳ್ಳುತ್ತಲೇ ಬರ್ತಿಡರುವ ಸಂಯುಕ್ತಾ, ಇದೀಗ ಫಾರೀನ್ ಬೀಚ್ ನಲ್ಲಿ ಬಿಕಿನಿ ತೊಟ್ಟು ವಿದೇಶಿ ಹುಡುಗನೊಂದಿಗೆ ಶಿರ್ಶಾಸನ ದಲ್ಲಿ ನಿಂತು ಫೋಸ್ ಕೊಟ್ಟಿದ್ದಾಳ. ಸಂಯುಕ್ತಾಳ ಇದೇ ಶಿರ್ಶಾಸನದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಅಷ್ಟೇ ಅಲ್ಲ.. ಟ್ರೋಲಿಗರಿಗೂ ಸಂಯುಕ್ತಾಳ ಇದೇ ಅವತಾರ ತಾಂಬೂಲನೂ ಆಗಿದೆ. ಹಾಗಾಗಿ, ಸಂಯುಕ್ತಾ ಸಾಹಸಕ್ಕೆ ನಾನಾ ರೀತಿಯ ಖಾರವಾದ ಕಮೆಂಟುಗಳೂ ಕಿರಿಕ್ ಕ್ವೀನ್ ಸಾಮಾಜಿಕ ಜಾಲತಾಣದ ಕಮೆಂಟ್ ಸೆಕ್ಷನ್‌ನಲ್ಲಿ ಕಾಣಸಿಗ್ತಿವೆ. ಹೀಗಿದ್ದೂ ಡೋಂಟ್ ಕೇರ್ ಅನ್ನದ ಸಂಯುಕ್ತಾ ಮತ್ತೊಂದು ಟೂ ಪೀಸಿನ ಫೋಟೊಗಾಗಿ ಜಾಗ ಹುಡುಕುತ್ತಿದ್ದಾರೆ. ಇತ್ತ, ಸಂಯುಕ್ತಾಳನ್ನ ದೇವತೆಯಂತೆ ಕಾಣುವ ಅಭಿಮಾನಿಗಳು ಸಂಯುಕ್ತಾಳ ಶಿರ್ಶಾಸನವನ್ನೇ, ಬಿಟ್ಟು ಬಿಡದಂಗೆ ನೋಡುತ್ತಾ ಸಂಯುಕ್ತಾಳೊಂದಿಗಿರುವ ವಿದೇಶಿ ಹುಡುಗ ಯಾರು ಎಂದು ತಲೆ ಕೆರೆದುಕೊಳ್ತಿದ್ದಾರೆ.

LEAVE A REPLY

Please enter your comment!
Please enter your name here