ಸಿಂಪಲ್ಲಾಗಿದೆ ದಿಗು ಆ್ಯಂಡಿ ಮದುವೆ ಆಮಂತ್ರಣ – ಇದು ಆತ್ಮೀಯರಿಗಾಗಿ ಮಾತ್ರ

0
64

ದಿಗಂತ್ & ಐಂದ್ರೀತಾ ರೇ. ಕನ್ನಡ ಚಿತ್ರರಂಗದ ಕ್ಯೂಟ್ ಕಫಲ್. ಇತ್ತೀಚಿಗಷ್ಟೇ ಮದುವೆಯಾಗ್ತಿರುವ ಸ್ವೀಟ್ ಸುದ್ದಿ ಕೊಟ್ಟಿದ್ದ ದಿಗಂತ್ & ಆಂಡಿ ಸರಳವಾಗಿ ಸಪ್ತಪದಿ ತುಳಿಯಲಿದ್ದಾರೆ. ಯಾವ್ದೇ ಆಡಂಬರವಿಲ್ಲದೇ ಸಂಪ್ರಯಾಯ ಬದ್ಧವಾಗಿ ಮದುವೆಯ ಬಂದನಕ್ಕೊಳಗಾಗುವ ಮನಸು ಮಾಡಿರುವ ದಿಗಂತ್ ಹಾಗೂ ಐಂದ್ರೀತಾ, ಮದುವೆಯ ಆಮಂತ್ರಣ ಪತ್ರಿಕೆನೂ ತುಂಬಾನೇ ಸರಳವಾಗಿದೆ. ಪ್ರಚಾರಕ್ಕೆ ಸಿಕ್ಕಿರುವ ಆಮಂತ್ರಣ ಪತ್ರಿಕೆಯನ್ನ ಸದ್ಯ ಆಪ್ತರು ಹಾಗೂ ಕುಟುಂಬ ವರ್ಗಕ್ಕಷ್ಟೇ ನೀಡಲಾಗ್ತಿದೆ. ಇನ್ನೂ ಮದುವೆ ಡಿಸೆಂಬರ್ 11 ಹಾಗೂ 12 ರಂದು ನಡೆಯಲಿದ್ದು, ಕನ್ನಡ ಚಿತ್ರರಂಗದ ಕುಟುಂಬಕ್ಕಾಗಿ ವಿಶೇಷ ಪಾರ್ಟಿಯೊಂದನ್ನ ಡಿಸೆಂಬರ್ 16 ರಂದು ಆಯೋಜಿಸಿದೆ ಜೋಡಿ. ಇನ್ನೂ ಮದುವೆಗೆ ಬಂದು ಶುಭ ಕೋರುವವರು ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು ಅನ್ನುವ ಮನವಿಯನ್ನೂ ದಿಗಂತ್ ಹಾಗೂ ಐಂದ್ರೀತಾ ಮಾಡಿದ್ದಾರೆ.

LEAVE A REPLY

Please enter your comment!
Please enter your name here