ಸಾಹಸಸಿಂಹನ ಕನಸು ಈಡೇರಿಸಲು ನಡೆಯುತ್ತಿದೆ ಈ ಕಾರ್ಯಕ್ರಮ – ಸಿಂಹ ನಡೆದ ಹಾದಿ

0
760

ವೃತ್ತಿಯಲ್ಲಿ ಗಾಯಕರಲ್ಲದವರು ಪ್ರವೃತ್ತಿಯಲ್ಲಿ ಹಾಡುಗಾರರಾಗಿರುತ್ತಾರೆ. ಅಂತಹವರು ತಮ್ಮ ಕಂಠಸಿರಿಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಸಿಕ್ಕಿರುವುದಿಲ್ಲ. ಬಾತ್ ರೂಂ ಸಿಂಗರ್ ಗಳಾಗಿಯೇ ಉಳಿದು ಬಿಡುತ್ತಾರೆ. ಹಾಗಾಗಬಾರದು ಅನ್ನುವ ಉದ್ದೇಶದಲ್ಲೇ ತಮ್ಮ ಗೆಳೆಯರೊಟ್ಟಿಗೆ ಸೇರಿ ’ಸ್ನೇಹಲೋಕ ಕರೋಕೆ ಕ್ಲಬ್ ಹುಟ್ಟುಹಾಕಿದ್ದರು ಡಾ.ವಿಷ್ಣುವರ್ಧನ್.

ವಿಷ್ಣು ನಂತ್ರ ಅಳಿಯ ಅನಿರುದ್ಧ್ ಈ ಕ್ಲಬ್ ನಡೆಸಿಕೊಂಡು ಹೋಗುತ್ತಿದ್ದಾರೆ. ’ಅತಿ ಹೆಚ್ಚು ದಿನಗಳಿಂದ ನಡೆಯುತ್ತ ಬಂದಿರುವ ದೇಶದ ಕರೋಕೆ ಕ್ಲಬ್‌ಗಳಲ್ಲಿ ಇದೂ ಒಂದು ಅನ್ನೋದು ಇಲ್ಲಿನ ವಿಶೇಷ. ೪೨ ಜನಕ್ಕೂ ಹೆಚ್ಚಿನ ಹಾಡುಗಾರರನ್ನ ಒಳಗೊಂಡಿರುವ ಸ್ನೇಹಲೋಕ ಕರೋಕೆ ಕ್ಲಬ್ ಗಾಗಿ ಪ್ರತಿ ಎರಡನೇ ಶನಿವಾರ ಎಲ್ಲರೂ ಒಟ್ಟಿಗೆ ಸೇರುತ್ತಾರೆ.

ಪ್ರತಿ ವಾರಕ್ಕೂ ಒಂದೊಂದು ಥೀಮ್ ಮಾಡಿಕೊಂಡು ಅದರ ಪ್ರಕಾರ ಎಲ್ಲ ಭಾಷೆಯ ಹಾಡುಗಳನ್ನು ಹಾಡುತ್ತಾರೆ. ಹೀಗೆ.. ಇತ್ತೀಚಿಗೆ ಮತ್ತೆ ಒಂದಡೆ ಸೇರಿದ್ದ ಹವ್ಯಾಸಿ ಹಾಡುಗಾರರ ನಡುವೆ, ಅನಿರುದ್ಧ ಹಾಡೊಂದನ್ನ ಹಾಡಿದ್ದಾರೆ. ಹಿಂದಿ ಹಾಡಿಗೆ ಧನಿಯಾಗಿರುವ ಅನಿರುದ್ಧ ನೇರೆದ ಹವ್ಯಾಸಿ ಗಾಯಕರನ್ನೂ ರಂಜಿಸಿದ್ದಾರೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರುವ ಅನಿರುದ್ಧ ಹಾಡಿರುವ ಹಾಡಿಗೆ ಅಭಿಮಾನಿಗಳ ತುಂಬು ಪ್ರೀತಿ ಸಿಗ್ತಿದೆ.

LEAVE A REPLY

Please enter your comment!
Please enter your name here