ಸರ್ಜಾ ವಿರುದ್ದ ಮೀಟು ಅಂದ್ಮೇಲೆ ಶೃತಿ ಪಾಡೇನಾಗಿದೆ ಗೋತ್ತಾ ? ಇದು ಅವರೆ ಬಾಯ್ಬಿಟ್ಟ ಸತ್ಯ

0
95

ಶ್ರುತಿ ಹರಿಹರನ್. ಮೀ ಟೂ ಹೀಗೊಂದು ಸುನಾಮಿಯನ್ನ, ಚಂದನವನದಲ್ಲಿ ಎಬ್ಬಿಸಿದ ನಟಿ. ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿ ಚಂದನವನದಲ್ಲಿ ಅಲ್ಲೋಲ ಕಲ್ಲೋಲವನ್ನೇ ಎಬ್ಬಿಸಿದ ಶ್ರುತಿಯನ್ನ, ಚಿತ್ರರಂಗ ದೂರವಿಡುತ್ತಾ ಅನ್ನುವ ಅನುಮಾನ ಶ್ರುತಿ ಆರೋಪ ಮಾಡಿದ ದಿನದಿಂದನೇ ಗಾಂಧಿನಗರದಲ್ಲಿತ್ತು. ಅಭಿಮಾನಿಗಳಲ್ಲಿತ್ತು ಅಂದಿನಿಂದ ಇಂದಿನವರೆಗೂ ಇದ್ದ ಇದೇ ಅನುಮಾನಕ್ಕೆ ತಕ್ಕಂತೆ, ಗಾಂಧಿನಗರದ ಗಲ್ಲಿಗಳಲ್ಲಿ ನಾನಾ ಸುದ್ದಿಗಳೂ ಕೇಳಿ ಬರಲು ಶುರುವಾಗಿದ್ವು. ಇನ್ನೂ ಇದಕ್ಕೆ ಸಾಕ್ಷಿ ಅನ್ನುವಂತೆ ಬಿ.ಎಸ್. ಲಿಂಗದೇವರು ನಿರ್ದೇಶನದ ದಾರಿ ತಪ್ಪಿಸು ದೇವರೇ ಸಿನಿಮಾದಿಂದ ಶ್ರುತಿಯನ್ನ ಕೈ ಬಿಡಲಾಗಿತ್ತು. ಇದು ಸಿಕ್ಕಾಪಟ್ಟೆ ಸುದ್ದಿನೂ ಆಗಿತ್ತು. ಚರ್ಚೆಗೂ ಕಾರಣವಾಗಿತ್ತು. ಅತ್ತ, ದಾರಿ ತಪ್ಪಿಸು ದೇವರೇ ಸಿನಿಮಾದಿಂದ ಶ್ರುತಿಯನ್ನ ಕೈ ಬಿಟ್ಟ ಬೆನ್ನಲ್ಲೇ, ನಾನಾ ದಿಕ್ಕುಗಳಿಂದ ಕೇಳಿ ಬರುತ್ತಿದ್ದ ಮೂದಲಿಕೆ, ವಿವಾದಗಳಿಂದ ಬೇಸತ್ತಿದ್ದ ಶ್ರುತಿ ಮೆತ್ತಗೆ ಅಮೆರಿಕಾಗೆ ಹಾರಿ ಅಲ್ಲಿಯೇ ಸೆಟಲ್ ಆಗುವ ಆಲೋಚನೆಯನ್ನೂ ಹೊಂದಿದ್ದಾರಂತೆ ಅನ್ನುವ ಸುದ್ದಿನೂ ಶ್ರುತಿ ಮನೆ ಅಂಗಳದಿಂದ ಹಿಡ್ದು ಗಾಂಧಿನಗರದ ಕಾನಿಷ್ಕ ಅಂಗಳದವರೆಗೂ ಕೇಳಿ ಬಂದಿತ್ತು. ಇನ್ನೇನೂ ಜನವರಿಗೊತ್ತಿಗೆಲ್ಲಾ ಶ್ರುತಿ ಅಮೆರಿಕಾದಲ್ಲೇ ಸೆಟ್ಲ್ ಆಗ್ತಾರೆ ಅನ್ನಲಾಗಿತ್ತು.

ಹೀಗೆ ನಾನಾ ಮಾತುಗಳೂ ನಾನಾ ದಿಕ್ಕುಗಳಿಂದ ಗಾಂಧಿನಗರದ ಗಲ್ಲಿಗಳಲ್ಲಿ ಗಿರಕಿ ಹೊಡೆಯುವ ಹೊತ್ತಿನಲ್ಲೇ, ಶ್ರುತಿ ಇದೀಗ ಪ್ರತ್ಯಕ್ಷಗೊಂಡಿದ್ದಾರೆ. ಹೌದು, ನಿಮಗೆ ಗೊತ್ತಿರಲಿ ಮೀ ಟೂ ಬಾಂಬ್ ಸಿಡಿಸಿದ ಬಳಿಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿನ ರಾಜಿ ಪಂಚಾಯ್ತಿ ಸಂಧಾನದ ಬಳಿಕ.. ಶ್ರುತಿ ಹರಿಹರನ್ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇದು, ಮಾತುಗಳೂ ಹೆಚ್ಚಾಗುವಂತೆ ಮಾಡಿದ್ದು ಸುಳ್ಳಲ್ಲ. ಹಾಗಾಗೇ ಏನೋ.. ನಡೆದ ಘಟನೆಗಳ ಬಗ್ಗೆ ಯೋಚನೆ ಮಾಡಿ ಫಲವಿಲ್ಲ ಅನ್ನುವ ತೀರ್ಮಾನಕ್ಕೆ ಬಂದಂತಿರುವ ಶ್ರುತಿ, ಇದೀಗ.. ಮಾತನಾಡಿದ್ದಾರೆ. ಮೌನ ಮುರಿದಿದ್ದಾರೆ. ಚಿತ್ರರಂಗ ನನ್ನನ್ನೂ ದೂರವಿಡುತ್ತಿದೆ ಅನ್ನುವ ಮಾತುಗಳನ್ನ ನೋವಿನಿಂದನೇ ಹೇಳಿದ್ದಾರೆ. ಯಸ್, ಹೆಣ್ಣಿನ ಪರವಾಗಿ ದನಿಯಾಗಿದ್ದೇ ತಪ್ಪಾ..? ಅನ್ನುವ ಪ್ರಶ್ನೆಯನ್ನೂ ಕೇಳುವ ಶ್ರುತಿ ಹರಿಹರನ್.. ಯಾವ್ದೇ ಕಾರಣಕ್ಕೂ ಹೋರಾಟ ನಿಲ್ಲಿಸದಿರಲು ತೀರ್ಮಾನಿಸಿದ್ದಾರೆ. ಇನ್ನೂ.. ಬರೀ ಕನ್ನಡ ಅಷ್ಟೇ ಅಲ್ಲ ತೆಲುಗು, ತಮಿಳು, ಮಲಯಾಳಂ ಹೀಗೆ ಉದ್ಯಮದ ಮಂದಿ.. ಶ್ರುತಿ ಹರಿಹರನ್ ಅವ್ರನ್ನ ದೂರ ಇಟ್ಟಿರೋದು ಇಲ್ಲಿನ ಇನ್ನೊಂದು ವಿಪರ್ಯಾಸ. ಮೀ ಟೂ ಎಫೆಕ್ಟ್‌ನಿಂದ ಸದ್ಯ ಅವಕಾಶವಂಚಿತರಾಗಿರುವ ಶ್ರುತಿ, ಇನ್ಮುಂದೆ.. ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲ್ವಾ.. ಹೀಗೊಂದು ಪ್ರಶ್ನೆಗೂ ಶ್ರುತಿ ಮಾತುಗಳಿಂದ ಎದ್ದೇಳುತ್ತೆ. ಇದಕ್ಕೆ ರಿಯ್ಯಾಕ್ಟ್ ಮಾಡುವ ಶ್ರುತಿ ಯಾವ್ದೇ ಕಾರಣಕ್ಕೂ ಬಣ್ಣದ ಲೋಕದಿಂದ ದೂರವಾಗಲ್ಲ ಅನ್ನುತ್ತಾರೆ. ಕಿರುಚಿತ್ರಗಳಲ್ಲಿ.. ಸಾಧ್ಯವಾದ್ರೆ ತಮ್ಮ ನಿರ್ಮಾಣದ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತೀನಿ, ಅಭಿಮಾನಿಗಳ ಮನತಣಿಸ್ತೀನಿ, ಕಲಾ ಸೇವೆ ಮುಂದುವರೆಸ್ತೀನಿ ಅಂತಾರೆ ಶ್ರುತಿ. ಒಟ್ನಲ್ಲಿ ಮೀ ಟೂ ಮೂಲಕ ತಾನೇ ಎಸೆದ ಬಾಂಬು, ಶ್ರುತಿಯ ಸುತ್ತಲೇ ಆಸ್ಫೋಟಗೊಂಡಿದೆ. ಅಲ್ಲಿಗೆ ಶ್ರುತಿಗೆ ಅಕ್ಷರಶಃ ದಾರಿ ಕಾಣದಂತಾಗಿದೆ, ಅನ್ನೋದು ಅನೇಕರ ಒಕ್ಕೂರಿಲಿನ ಅಭಿಪ್ರಾಯದ ನಡುವೆ, ಶ್ರುತಿಯ ಮುಂದಿನ ನಿರ್ಧಾರಗಳೂ, ಕಾನೂನಿನ ಹೋರಾಟಗಳೂ.. ಕೂತುಹಲ ಕೆರಳಿಸಿವೆ.

LEAVE A REPLY

Please enter your comment!
Please enter your name here