ಸದ್ಯದಲ್ಲೆ ಶುರುವಾಗಲಿದೆ ನಟಸಾರ್ವಭೌಮನ ಹಾಡಿನ ಸದ್ದು – ಪವರ್ ಫುಲ್ ಡ್ಯಾನ್ಸಿಗಾಗಿ ಅಭಿಮಾನಿಗಳ ಕಾತರ

0
58

ನಟಸಾರ್ವಭೌಮ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫ್ಲೇವರ್ ಇರುವ ಪವರ್‌ಫುಲ್ ಸಿನಿಮಾ. ಆರಂಭದಿಂದ್ಲೂ ದೊಡ್ಮನೆ ಅಭಿಮಾನಿಗಳ ಅತೀವ ಕೂತುಹಲಕ್ಕೆ ಕಾರಣವಾಗಿರುವ ನಟಸಾರ್ವಭೌಮನ ಅಂಗಳದಿಂದ ಕುಣಿದು ಕುಪ್ಪಳಿಸುವಂತ ಸುದ್ದಿ ಹೊರ ಬಂದಿದೆ. ಸಿನಿಮಾದ ಹಾಡುಗಳೂ ಸದ್ಯದಲ್ಲೇ ಬಿಡುಗಡೆಯಾಗಲಿವೆ. ಹೀಗೊಂದು ಘೋಶಣೆಯನ್ನೊತ್ತು ಬಂದ ಎರಡು ಪೋಸ್ಟರ್‌ಗಳೂ ಸದ್ಯ ಅಭಿಮಾನಿಗಳಿಗೆ ಭಾರೀ ಭಯಂಕರ ಕಿಕ್ ಕೊಡ್ತಿವೆ. ಸದ್ಯ ಚಿತ್ರತಂಡ ಡಿಸೆಂಬರ್ ಅಂತ್ಯಕ್ಕೆ ಹಾಡುಗಳನ್ನ ಕನ್ನಡಿಗರ ಮಡಿಲಿಗೆ ಹಾಕುವ ತೀರ್ಮಾನಕ್ಕೆ ಬಂದಿದೆ. ಡಿ.ಇಮಾಮ್ ಸಂಗೀತ ನಿರ್ದೇಶನದಲ್ಲಿ ಬಂದಿರುವ ಹಾಡುಗಳೂ, ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ನಿರೀಕ್ಷೆಗಳೂ ಗಾಂಧಿನಗರಕ್ಕಿವೆ. ಇನ್ನೂ ಅಪ್ಪು ಡ್ಯಾನ್ಸ್.. ಮತ್ತೊಮ್ಮೆ, ಎಲ್ಲರನ್ನೂ ಹುಚ್ಚೆಬ್ಬಿಸುತ್ತೆ ಅನ್ನುವ ಮಾತುಗಳು ಇದೇ ವೇಳೆ ಬಲವಾಗಿ ಕೇಳಿ ಬರ್ತಿೂವೆ. ಇದಕ್ಕೆ ಸಾಕ್ಷಿಯಂತೆ ಬಿಡುಗಡೆಗೊಂಡಿರುವ ಎರಡು ಪೋಸ್ಟರ್‌ಗಳೂ ಕಾಣಸಿಗುತ್ವೆ.

LEAVE A REPLY

Please enter your comment!
Please enter your name here