ಸತ್ಯನಾರಾಯಣನ ಮೊರೆ ಹೋದ ರಕ್ಷಿತ್ ರಶ್ಮಿಕ – ಇದಕ್ಕೆ ಕಾರಣ ಅವನೇ

0
448

ರಕ್ಷಿತ್. ಚಂದನವನದ ಸಿಂಪಲ್ ಸ್ಟಾರ್ . ಅವ್ನೇ ಶ್ರೀಮನ್ನಾರಾಯಣನಾಗಲು ಸಿದ್ಧವಾಗಿರುವ ರಕ್ಷಿತ್, ಇತ್ತೀಚಿಗೆ.. ತಮ್ಮ ಭಾವಿ ಪತ್ನಿ ರಶ್ಮಿಕಾರೊಂದಿಗೆ ಸತ್ಯನಾರಾಯಣ ಪೂಜೆ ಮಾಡಿದ್ದಾರೆ. ಯಸ್. ರಕ್ಷಿತ್ & ರಶ್ಮಿಕಾ ಸತ್ಯನಾರಾಯಣನ ಮೊರೆ ಹೋಗಿದ್ದಾರೆ. ಇದಕ್ಕೆ ಕಾರಣ ಅವ್ನೇ ಶ್ರೀಮನ್ನಾರಾಯಣ.

ಹೌದು, ಅವ್ನೇ ಶ್ರೀಮನ್ನಾರಾಯಣ ಇನ್ನೇನು ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾನೆ. ಹಾಗಾಗೇ, ಎಲ್ಲನೂ ಸರಾಗವಾಗಿ ಸಾಗಲಿ ಅನ್ನುವ ಪ್ರಾರ್ಥನೆಯೊಂದಿಗೆ, ಸತ್ಯನಾರಾಯಣನ ಪೂಜೆ ಮಾಡಿದ್ದಾರೆ ರಕ್ಷಿತ್ & ರಶ್ಮಿಕಾ. ಇನ್ನು, ಪೂಜೆ ಮಾಡಲು ಇಲ್ಲಿ ಇನ್ನೊಂದು ಕಾರಣನೂ ಇದೆ. ಹೌದು, ನಿಮಗೆ ಗೊತ್ತಿರಲಿ, ರಕ್ಷಿತ್ ಪರಮವ್ಹಾ ಸ್ಟುಡಿಯೋ ಒಂದನ್ನ ಮಾಡಿದ್ದಾರೆ. ವಿಶಾಲವಾದ ಸ್ಟುಡಿಯೋ ಅದು. ಚಿತ್ರವೊಂದರ ಪೋಸ್ಟ್ ಪ್ರೊಡಕ್ಷನ್‌ಗೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳು ಇಲ್ಲಿವೆ. ಪೂಜೆ ನಡೆದಿದ್ದು ಕೂಡಾ ಇದೇ ಸ್ಟುಡಿಯೋದಲ್ಲಿ.

ಅವತ್ತು ಸ್ಟುಡಿಯೋ ಆರಂಭವಾದಾಗ ಪೂಜೆ ಮಾಡಬೇಕು ಅನ್ಕೊಂಡಿದ್ದ ರಕ್ಷಿತ್, ಇದೀಗ.. ಪೂಜೆ ಮಾಡಿದ್ದಾರೆ. ಅಂದ ಹಾಗೇ ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಇದೆ. ಅದೇ..ಕಿರಿಕ್ ಪಾರ್ಟಿ. ಹೌದು, ನಿಮಗೆ ಗೊತ್ತಿರಲಿ ಕಿರಿಕ್ ಪಾರ್ಟಿ ಬಿಡುಗಡೆಗೂ ಮುನ್ನ ರಕ್ಷಿತ್ ಸತ್ಯನಾರಾಯಣ ಪೂಜೆ ಮಾಡಿದ್ರು. ಪೂಜೆಯ ಫಲ ಅನ್ನುವಂತೆ ಕಿರಿಕ್ ಪಾರ್ಟಿ ಪ್ರಚಂಡ ಯಶಸ್ಸು ಗಳಿಸಿತು. ಇದೀಗ, ಅವ್ನೇ ಶ್ರೀಮನ್ನರಾಯಣ ಶುರುವಾಗ್ತಿದೆ. ಸತ್ಯನಾರಾಯಣ ಪೂಜೆ ಮತ್ತೊಮ್ಮೆ ನಡೆದಿದೆ. ಇದ್ರ ನಡುವೆ, ಇದೀಗ.. ಚಿತ್ರದ ಚಿತ್ರೀಕರಣಕ್ಕೆ.. ಬಾಗಲಕೋಟೆಯತ್ತ ಹೊರಟು ನಿಂತಿದೆ ರಕ್ಷಿತ್ & ಟೀಮ್,

LEAVE A REPLY

Please enter your comment!
Please enter your name here