ಶೂಟಿಂಗ್ ಕಂಪ್ಲೀಟ್ ಮಾಡಿದ ಉದ್ಘರ್ಶ – ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ತಯಾರಿಯಲ್ಲಿ ಸುನೀಲ್ ಕುಮಾರ್ ದೇಸಾಯಿ

0
35

ಉದ್ಘರ್ಶ, ಆರಂಭದಿಂದನೂ ಸಿನಿಪ್ರೇಮಿಗಳ ಕೂತುಹಲಕ್ಕೆ ಕಾರಣವಾಗಿರುವ ಸಿನಿಮಾ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಬಹುನಿರೀಕ್ಷಿತ ಉದ್ಘರ್ಷ ಚಿತ್ರದ ಶೂಟಿಂಗ್ ಫೈನಲಿ ಕಂಪ್ಲೀಟ್ ಆಗಿದೆ. ಚಿತ್ರದ ಬಹುತೇಕ ಶೂಟಿಂಗ್ ಅನ್ನು ಈಗಾಗಲೇ ಕಂಪ್ಲೀಟ್ ಮಾಡಿ, ಎಡಿಟಿಂಗ್ ಕೂಡ ಮುಗಿಸಿರೋ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ಸದ್ಯ ಕುಂಬಳಕಾಯಿ ಒಡೆದಿದ್ದಾರೆ.ಕನ್ನಡ ಮತ್ತು ತೆಲುಗಿನಲ್ಲಿ ಉದ್ಘರ್ಷ ಹೆಸರಿನಿಂದ ಚಿತ್ರ ತೆರೆಕಾಣಲಿದ್ದು, ತಮಿಳಿನಲ್ಲಿ ಉಚ್ಚಕಟ್ಟಮ್ ಅಂತಾ ಹೆಸರಿಡಲಾಗಿದೆ. ಇನ್ನು ಚಿತ್ರದ ಬಹುತೇಕ ಚಿತ್ರೀಕರಣ ಮಡಿಕೇರಿಯಲ್ಲಿ ನಡೆದಿದ್ದು, ಬೆಂಗಳೂರು, ಹೈದರಾಬಾದ್ ಹಾಗೂ ಕೇರಳದಲ್ಲೂ ಕೆಲ ದೃಶ್ಯಗಳ ಚಿತ್ರೀಕರಣವಾಗಿದೆ.ಇನ್ನು ಚಿತ್ರದಲ್ಲಿ ಸಿಂಗಂ ೩ ಖ್ಯಾತಿಯ ಠಾಕೂರ್ ಅನೂಪ್ ಸಿಂಗ್ ನಾಯಕ ನಟರಾಗಿ ನಟಿಸಿದ್ದರೆ, ತಮಿಳಿನ ಕಬಾಲಿ ಖ್ಯಾತಿಯ ಧನ್ಸಿಕಾ ಹಾಗೂ ನವ ನಟಿ ತಾನ್ಯಾ ಹೋಪ್ ನಾಯಕಿಯರಾಗಿ ಅಭಿನಯಿಸಿದ್ದಾರೆ.

ಅಲ್ಲದೇ ಬಾಲಿವುಡ್ ವಿಲನ್ ಕಬೀರ್ ಸಿಂಗ್ ದುಹಾನ್, ತೆಲುಗಿನ ಬಾಹುಬಲಿ ಖ್ಯಾತಿಯ ಪ್ರಭಾಕರ್, ಶ್ರವಣ್ ರಾಘವೇಂದ್ರ, ವಂಶಿ ಕೃಷ್ಣ, ಶ್ರದ್ಧಾ ದಾಸ್ ಮುಂತಾದವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಬಹುಭಾಷಾ ತಾರೆ ಕನ್ನಡಿಗ ಕಿಶೋರ್ ಮತ್ತೊಂದು ಪ್ರಮುಖ ಹಾಗೂ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದರೆ, ಹರ್ಷಿಕಾ ಪೂಣಚ್ಚ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಚಿತ್ರಕ್ಕೆ ಪಿ ರಾಜನ್ ಹಾಗೂ ದಿವಂಗತ ವಿಷ್ಣುವರ್ಧನ್ ಅವರ ಕ್ಯಾಮರಾ ವರ್ಕ್ ಮಾಡಿದ್ದರೆ, ಹಿಂದಿಯ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಸಂಜೋಯ್ ಚೌಧುರಿ ಸಂಗೀತ ನೀಡಿದ್ದಾರೆ. ಇನ್ನು ಚಿತ್ರಕ್ಕೆ ನಿರ್ದೇಶಕ ದೇಸಾಯಿ ಅವರ ಸ್ನೇಹಿತರಾದ ಆರ್. ದೇವರಾಜ್ ರಾಜೇಂದ್ರ ಹಾಗೂ ಡಿ. ಮಂಜುನಾಥ್ ಬಂಡವಾಳ ಹೂಡಿದ್ದಾರೆ. ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಉದ್ಘರ್ಶ ಸದ್ಯದಲ್ಲೇ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here