ಶಿವಣ್ಣ ಹಾಕಿದ ಗೆರೆ ದಾಟಲ್ಲ ಅಂದ ಕರುನಾಡ ಚಕ್ರವರ್ತಿ ಅಭಿಮಾನಿಗಳು

0
172

ಶಿವಣ್ಣ, ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ ಅನ್ನೋದು ಎಷ್ಟು ನಿಜಾನೋ, ಅಷ್ಟೇ ಅಭಿಮಾನಿಗಳು ಶಿವಣ್ಣ ಹಾಕಿದ ಗೆರೆಯನ್ನ ದಾಟುವ ಧೈರ್ಯ ಮಾಡ್ತಾರಾ, ಮಾಡಲ್ವಾ ಅನ್ನುವ ಪ್ರಶ್ನೆ ಕೇಳಿ ಬರ್ತಿನರೋದು ಕೂಡಾ ನಿಜ. ಇದಕ್ಕೆ ಕಾರಣ.. ಓನ್ಸ್ ಅಗೈನ್ ದ್ವೇಶದ ತಾಣವಾಗಿ ಬದಲಾಗ್ತಿರುವ ಸಾಮಾಜಿಕ ಜಾಲತಾಣ.ಹೌದು, ನಿಮಗೆ ಗೊತ್ತಿರಲಿ ಶಿವಣ್ಣ ಅಭಿಮಾನಿಗಳ ಕಿವಿ ಹಿಂಡಿದ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಅನೇಕ ಶಿವ ಭಕ್ತರು, ನಾವ್ ಅಣ್ಣ ಹಾಕಿದ ಗೆರೆ ದಾಟಲ್ಲ. ಹಾಗಂತ, ನಮ್ ತಂಟೆಗೆ ಬೇರೆ ನಟರ ಅಭಿಮಾನಿಗಳು ಬಂದ್ರೆ ಸುಮ್ನೆ ಬಿಡಲ್ಲ ಅಂಥ ಥೇಟ್ ದಿ ವಿಲನ್ ಚಿತ್ರದಲ್ಲಿ ಶಿವಣ್ಣ ಬುಟ್ ಬುಡ್ತೀವಾ ಅಂತ ಹೇಳಿದಂಗೆ ಹೇಳಲು ಶುರುವಿಟ್ಟುಕೊಂಡಿದ್ದಾರೆ. ದಿ ವಿಲನ್ ಶೈಲಿಯಲ್ಲೇ, ಬುಟ್ ಬುಡ್ತೀವಾ ಅಂತ ಅಭಿಮಾನಿಗಳು ಹೇಳ್ತಿರುವದನ್ನ, ಸದ್ಯಕ್ಕೆ ನೋಡ್ತಿದ್ದರೆ ಬಿಡುಗಡೆಯಾಗುವಷ್ಟರಲ್ಲಿ ಮತ್ತೊಂದು ವಿವಾದ ಭುಗಿಲೇಳುತ್ತಾ ಅನ್ನುವ ಅನುಮಾನ ಇದೀಗ ಗಾಂಧಿನಗರಕ್ಕೆ ಕಾಡ್ತಿದೆ.

ಇದಕ್ಕೆ ಸಾಕ್ಷಿ ಅನ್ನುವಂತೆ ಸರಣಿ ಟ್ವೀಟ್‌ಗಳು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.ಇಲ್ಲಿ, ಇನ್ನೊಂದು ಉತ್ತರವಿರದ ಬಹುಕಾಲದಿಂದ ಉಳಿದಿರುವ ಪ್ರಶ್ನೆಯೂ ಇದೆ. ಅದುವೇ ಒಗ್ಗಟ್ಟಿನಲ್ಲಿ ಬಲವಿದೆ ಅನ್ನುವದನ್ನ ಅಭಿಮಾನಿಗಳು ಯಾಕೆ ಒಪ್ಪಿಕೊಳ್ಳಲ್ಲ ಅನ್ನೋದು. ಹೌದು, ಖುದ್ದು ಶಿವಣ್ಣನೇ ಹೇಳುವಂತೆ, ಕನ್ನಡ ಚಿತ್ರರಂಗ ಒಂದು ಕುಟುಂಬ. ಇಲ್ಲಿ ಎಲ್ಲರು ಚೆನ್ನಾಗೇ ಇದ್ದಾರೆ. ಶಿವಣ್ಣ ಹಾಗೂ ಸುದೀಪ ಒಟ್ಟಿಗೆ ಬಣ್ಣ ಹಚ್ಚಿದ್ದಾರೆ. ಇದು ಸಂಭ್ರಮಿಸುವ ಕಾಲ. ಬಟ್, ಅದ್ಯಾಕೋ ಹೀಗಿದ್ದೂ ಅಭಿಮಾನಿಗಳು ಮಾತ್ರ ಇದನ್ನ ಒಪ್ಪಿಕೊಳ್ತಿಲ್ಲ. ಸಂಭ್ರಮ ಪಡುತ್ತಿಲ್ಲ. ಬದ್ಲಿಗೆ ಲೋಪಗಳನ್ನ ಹುಡುಕುತ್ತಿದ್ದಾರೆ. ಗಲಾಟೆ ಮಾಡುವ ಅವಕಾಶಕ್ಕೆ ಕಾಯುತ್ತಿದ್ದಾರೆ. ಬಹುಶ ಇದೇ ಕಾರಣಕ್ಕೋ ಏನೋ.. ಶಿವಣ್ಣ ಅಭಿಮಾನಿಗಳಲ್ಲಿ ಗಲಾಟೆ ಮಾಡಬೇಡಿ ಅಂತ ಮಾಡಿಕೊಂಡ ಮನವಿಯನ್ನೇ, ಇದೀಗ ಚಿತ್ರರಂಗನೂ ಮಾಡುತ್ತಿದೆ. ಈ ಮೂಲಕ ಅಭಿಮಾನಿಗಳಲ್ಲಿ ಸಾಮರಸ್ಯ ಬೆಸೆಯುವ ಯತ್ನ ಮಾಡುತ್ತಿದೆ. ಬಟ್, ಅಭಿಮಾನಿಗಳು ಇದೇ ಮನವಿಯನ್ನ ಅಪ್ಪಿಕೊಳ್ತಾರಾ, ಪಾಲಿಸುತ್ತಾರಾ.. ಉತ್ತರ ಕಾಲವೇ ನೀಡಲಿದೆ.

LEAVE A REPLY

Please enter your comment!
Please enter your name here