ವೈರಲ್‌ ಅಯ್ತು ಅನಂತ್ ನಾಗ್ ಅಭಿನಯದ ಈ ಟ್ರೈಲರ್ – ಇದು ಹೊಟ್ಟೆಪಾಡಿನ ಕಥೆ

0
722

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಟ್ರೇಲರ್ ಬಿಡುಗಡೆಯಾಗಿದೆ. ಅದು.. ದೂರದ ದುಬೈನಲ್ಲಿ ಅನ್ನೋದು ವಿಶೇಷ. ದುಬೈಯ ಕರಾಮದಲ್ಲಿ ಇಂಡಿಯನ್ ಸ್ಕೂಲ್ ಇದೆ. ಅಲ್ಲಿ.. ದುಬೈ ಕನ್ನಡಿಗರು ಶೇಕ್ ರಾಶಿದ್ ಆಡಿಟೋರಿಯಂನಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯರ ಸಂಗೀತ ಸೌರಭ 2018 ಸಂಗೀತ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಕನ್ನಡಿಗರ ಸಮ್ಮುಖದಲ್ಲಿ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿಯ ಟ್ರೇಲರ್‌ನ್ನ ಬಿಡುಗಡೆ ಮಾಡಲಾಯ್ತು. ವಿಭಿನ್ನ ಕಥಾಹಂದರ ಇರುವ ಸಿನಿಮಾ ಇದು. ಅನಂತ್ ನಾಗ್ ಮತ್ತು ರಾಧಿಕಾ ಚೇತನ್ ಇಲ್ಲಿ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಏನೆಲ್ಲಾ ಮಾಡ್ತಾರೆ ಅನ್ನೋದು ಚಿತ್ರದ ತಿರುಳು.

ಒಂಧರ್ಥದಲ್ಲಿ ಎರಡು ತಲೆ ಮಾರಿನ ಸುತ್ತ ಸುತ್ತುವ ಸಿನಿಮಾ ಇದು. ಹಾಗಾಗಿ, ಬಹುತೇಕ ಸಿನಿಮಾ ಸುತ್ತುವದು ಅನಂತ್ ನಾಗ್ ಮತ್ತು ರಾಧಿಕಾ ಚೇತನ್ ಸುತ್ತನೇ ಅನ್ನೋದು ಇಲ್ಲಿನ ಮತ್ತೊಂದು ವಿಶೇಷ. ಅನಂತ್ ನಾಗ್ ಅದ್ಭುತವಾದ ಅಭಿನಯವನ್ನ ಪೂರ್ತಿ ಸಿನಿಮಾದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ನಿಮಗೆ ಈ ಸಿನಿಮಾದಲ್ಲಿ ಸಿಗಲಿದೆ. ಇನ್ನು.. ರಾಧಿಕಾ ಚೇತನ್ ಸಿನಿಮಾ ನೋಡಲು ನಿಮಗಿಲ್ಲಿ ಇರುವ ಇನ್ನೊಂದು ಕಾರಣ. ನರೇಂದ್ರ ಬಾಬು ಸಿನಿಮಾದ ನಿರ್ದೇಶಕ. ಹಿಂದೆ.. ಕಬ್ಬಡಿ ಮತ್ತು ಇತ್ತೀಚಿನ ಸಂತೆಯಲ್ಲಿ ನಿಂತ ಕಬೀರ ಸಿನಿಮಾ ಮಾಡಿದ್ದ ನರೇಂದ್ರ ಬಾಬು, ಇದೀಗ.. ವಿನೂತನವಾದ ಕಥೆಯೊಂದಿಗೆ ಮರಳಿದ್ದಾರೆ.

ರಾಮಚಂದ್ರ ಹಡಪದ್ ಸಿನಿಮಾದ ಸಂಗೀತ ನಿರ್ದೇಶಕ. ರಂಗಭೂಮಿ ಹಿನ್ನೆಲೆಯವರು ಇವರು. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು.. ವಿಜಯ್ ಪ್ರಕಾಶ್, ಅರ್ಮಾನ್ ಮಲ್ಲಿಕ್, ವರ್ಷ, ವಾಣಿ ಸತೀಶ್, ಶ್ವೇತ ಪ್ರಭು ಧನಿಯಾಗಿದ್ದಾರೆ. ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಸಿನಿಮಾದ ಹಾಡುಗಳು ಆಗ್ಲೇ ಸದ್ದು ಮಾಡಿವೆ, ಮಾಡ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಡು ಕೇಳಿದ ಪ್ರೇಕ್ಷಕ.. ಹಾಡುಗಳನ್ನ ಮೆಚ್ಚಿಕೊಂಡಿದ್ದಾನೆ. ಇನ್ನು ಹಿಂದೆ ಮಾರ್ಚ್ 22 ಸಿನಿಮಾವನ್ನ ನಿರ್ಮಿಸಿದ್ದ ಹರೀಶ್ ಶೇರಿಗಾರ್ ಮತ್ತು ಅವ್ರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ದುಡ್ಡು ಹೂಡಿದ್ದಾರೆ. ಅದೇನೆ ಇರ್ಲಿಿ ಸದ್ಯ ಟ್ರೇಲರ್‌ನಿಂದ ನಿರೀಕ್ಷೆಯನ್ನ ಹುಟ್ಟು ಹಾಕಿರುವ, ಭರವಸೆಯನ್ನ ಮೂಡಿಸಿರುವ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಸಿನಿಮಾ ನೋಡಬೇಕಂದ್ರೆ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ಕಾಯಬೇಕು.

LEAVE A REPLY

Please enter your comment!
Please enter your name here