ವಿಷ್ಣುದಾದನ ಹೆಸರಿನಲ್ಲಿ ನಡೆಯುತ್ತಿರುವ ಕೆಲಸಕ್ಕೆ ಕೈಜೋಡಿಸಿದ ಕರುನಾಡ ಚಕ್ರವರ್ತಿ

0
186

ಡಾ. ಶಿವರಾಜ್ ಕುಮಾರ್. ಕನ್ನಡ ಚಿತ್ರರಂಗದ ಕರುನಾಡ ಚಕ್ರವರ್ತಿ. ಸದಾ ಕಾಲ ಸಿನಿಮಾ ಧ್ಯಾನವನ್ನೇ ಮಾಡುತ್ತಾ, ಸಿನಿಮಾವನ್ನೇ ಜೀವಿಸುವ ಶಿವಣ್ಣ.. ಇತ್ತೀಚಿಗೆ ವಿಷ್ಣು ಅಳಿಯ ಅನಿರುದ್ಧ್‌ಗೆ ಕೊಟ್ಟ ಮಾತೊಂದನ್ನ ಉಳಿಸಿಕೊಂಡಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.ಹೌದು, ನಿಮಗೆ ನೆನಪಿದ್ದರೆ ಕಳೆದ ತಿಂಗಳು ಅಂದ್ರೆ ಸೆಪ್ಟೆಂಬರ್ ೧೮ಕ್ಕೆ ವಿಷ್ಣು ಹುಟ್ಟುಹಬ್ಬದ ಪ್ರಯುಕ್ತವಾಗಿ, ವಿಷ್ಣು ಫ್ಯಾಮಿಲಿ, ವಿಷ್ಣು ನೆನಪಿನಲ್ಲೊಂದು ಕಾರ್ಯಕ್ರಮವನ್ನ ಹಮ್ಮಿಕೊಂಡಿತ್ತು. ಅದು, ಹೃದಯ ಗೀತೆ ಅನ್ನುವ ಸಂಗೀತ ಕಾರ್ಯಕ್ರಮ. ಯಜಮಾನನಿಗೆ ಗೀತ ನಮನ ಸಲ್ಲಿಸಲು, ನೆನಪುಗಳನ್ನ ತಾಜಾ ಮಾಡಿಕೊಳ್ಳಲು.. ಬಹುತೇಕ ಚಿತ್ರರಂಗ ಒಂದೇ ಸೂರಿನಡಿ ಅವತ್ತು ಸೇರಿತ್ತು. ವಿಷ್ಣು ಹಾಡುಗಳನ್ನ ಹಾಡಿ ಸಂಭ್ರಮಿಸಿತು. ಇದೇ ಹೃದಯ ಗೀತೆ ಕಾರ್ಯಕ್ರಮದಲ್ಲಿ ಯಜಮಾನನ ನೆನಪು ಮಾಡಿಕೊಂಡ ಶಿವಣ್ಣ, ಹೃದಯ ಗೀತೆ ಮನರಂಜನೆ ಕಾರ್ಯಕ್ರಮದ ಹಿಂದೆ ಇದ್ದ ಸದ್ದುದೇಶವನ್ನೂ ಮೆಚ್ಚಿಕೊಂಡಿದ್ದರು. ಕಾರ್ಯಕ್ರಮದಿಂದ ಬಂದ ಹಣವನ್ನ, ವಿಷ್ಣು ಅಳಿಯ ಅನಿರುದ್ಧ ಅವ್ರ ವಿಭಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವ್ರಿಗೆ ನೀಡಲು ತೀರ್ಮಾನಿಸಲಾಗಿರುವ ವಿಚಾರ ತಿಳಿದು ಖುಷಿ ಪಟ್ಟಿದ್ದರು. ಅಷ್ಟೇ ಅಲ್ಲ.. ತಾವು ಒಂದು ಲಕ್ಷ ಧನಸಹಾಯ ಮಾಡುವದಾಗಿ ಕಾರ್ಯಕ್ರಮದಲ್ಲಿ ಘೋಶಿಸಿದ್ರು. ಇದೀಗ, ಅವತ್ತು ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಶಿವಣ್ಣ, ಇತ್ತೀಚಿಗೆ ಅನಿರುದ್ಧ್ ಅವ್ರಿಗೆ ಒಂದು ಲಕ್ಷ ಚೆಕ್‌ನ್ನ ಹಸ್ತಾಂತರಿಸಿದ್ದಾರೆ. ಈ ಮೂಲಕ.. ವಿಭಾ ಚಾರಿಟೆಬಲ್ ಟ್ರಸ್ಟ್ ಪರವಾಗಿ ಹೃದಯ ಸಂಬಂಧಿ ಕಾಯಿಲೆನಿಂದ ಬಳಲುತ್ತಿರುವವರಿಗೆ ನೆರವಾಗಿ ನಿಂತಿದ್ದಾರೆ. ಸದ್ಯ, ಶಿವಣ್ಣ ಮಾಡಿದ ದಾನಕ್ಕೆ ಅಭಿಮಾನಿಗಳು ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಿದ್ದಾರೆ. ಹೃದಯ ವೈಶ್ಯಾಲತೆಯನ್ನ ಕೊಂಡಾಡುತ್ತಿದ್ದಾರೆ. ಅಣ್ಣ ಅಂದ್ರೆ ಅದು ನಮ್ ಶಿವಣ್ಣ ಅಂತ ಅಭಿಮಾನದ ಮಾತುಗಳನ್ನಾಡ್ತಿದ್ದಾರೆ.

LEAVE A REPLY

Please enter your comment!
Please enter your name here