ವರ್ಷದ ಕೊನೆಯಲ್ಲಿ ದರ್ಶನ‌ ಕೊಡಲಿದ್ದಾನೆ ಅನಂತ್ – ಗೆಲುವಿನ‌ ನಿರೀಕ್ಷೆಯಲ್ಲಿ‌‌ ವಿನಯ್

0
80

ಅನಂತು ವರ್ಸಸ್ ನುಸ್ರತ್. ದೊಡ್ಮನೆಯ ಕುಡಿ ವಿನಯ್ ರಾಜ್ ಕುಮಾರ್ ಅಭಿನಯದ ಸಿನಿಮಾ. ಆರಂಭದಿಂದ ಇಲ್ಲೀತನ್ಕ ಅನೇಕ ಅಡೆತಡೆಗಳನ್ನ ಎದುರಿಸಿದ್ರೂ ಕುಗ್ಗದ ಅನಂತು ಇದೀಗ ಫೈನಲಿ, ನುಸ್ರತ್‌ನೊಂದಿಗೆ ನಿಮ್ಮ ಮುಂದೆ ಬರಲು ಸಿದ್ಧವಾಗಿದ್ದಾನೆ. ಯಸ್ ಚಿತ್ರದ ಬಿಡುಗಡೆಯ ದಿನಾಂಕ ನಿಕ್ಕಿಯಾಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಕನ್ನಡ ಚಿತ್ರರಂಗಕ್ಕೆ ಲಕ್ಕಿ ಮಂಥ್ ಅಂಥನೇ ಖ್ಯಾತಿಯಾಗಿರುವ ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.ನಿಮಗೆ ಗೊತ್ತಿರಲಿ ಡಿಸೆಂಬರ್‌ನಲ್ಲಿ ಅದ್ರಲ್ಲೂ ವರ್ಷದ ಕೊನೆ ವಾರದಲ್ಲಿ ಬಂದ ಸಿನಿಮಾಗಳೂ, ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ ಇತಿಹಾಸ ಇಲ್ಲಿ ತುಂಬಾನೇ ಕಮ್ಮಿ. ಹಾಗಂತ ಬಂದ ಎಲ್ಲ ಸಿನಿಮಾಗಳೂ ಸಕ್ಸಸ್ ಕಂಡಿದಾವೇ ಅಂಥಾನೂ ಇಲ್ಲಿ ಅನ್ನಂಗಿಲ್ಲ. ಹೀಗಿದ್ದೂ. ಗೆಲುವಿನ ಸಂಪೂರ್ಣ ಭರವಸೆಯನ್ನಿಟ್ಟುಕೊಂಡಿರುವ ಚಿತ್ರತಂಡ, ಚಿತ್ರವನ್ನ ಡಿಸೆಂಬರ್ 28 ಕ್ಕೆ ಪ್ರೇಕ್ಷಕರ ಮಡಿಲಿಗೆ ಹಾಕುವ ತೀರ್ಮಾನಕ್ಕೆ ಬಂದಿದೆ.ಸುಧೀರ್ ಶಾನುಭೋಗ್ ನಿರ್ದೇಶನದ ಅನಂತು ವರ್ಸಸ್ ನುಸ್ರತ್‌ದಲ್ಲಿ, ನಾಯಕಿಯಾಗಿ ಲತಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಸುನಾದ್ ಗೌತಮ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಅದೇನೆ ಇರ್ಲಿಕ, ಸದ್ಯ ಅನಂತು ವರ್ಸಸ್ ನುಸ್ರತ್ ಬಿಡುಗಡೆಗೆ ಸಿದ್ಧವಾಗಿದೆ. ಬೇಕಿರುವ ಬಹುದೊಡ್ಡ ಗೆಲುವು ಈ ಬಾರಿ ವಿನಯ್ ರಾಜ್ ಕುಮಾರ್‌ಗೆ ಸಿಗುತ್ತಾ, ಡಿಸೆಂಬರ್ ವಿನಯ್ ಪಾಲಿಗೂ ಲಕ್ಕಿ ಅಂಥ ಸಾಬೀತಾಗುತ್ತಾ ಕಾದು ನೋಡಬೇಕು.

LEAVE A REPLY

Please enter your comment!
Please enter your name here