ರೋರಿಂಗ್ ಸ್ಟಾರ್ ಮೆಚ್ಚಿದ ಹೊಸಬರ ಹಾರರ್ ಟ್ರೈಲರ್ – ತ್ರಯೋದಶ

0
34

ರೋರಿಂಗ್ ಸ್ಟಾರ್ ಶ್ರೀಮುರಳಿ ಇತ್ತೀಚಿಗೆ ತ್ರಯೋದಶ ಚಿತ್ರದ ಟ್ರೇಲರ್‌ನ್ನೂ ಲಾಂಚ್ ಮಾಡಿದ್ದಾರೆ. ಹೌದು, ಆತ್ಮ.. ಹಾಗೂ ಆತ್ಮದ ಸುತ್ತ ಹೆಣೆಯಲಾದ ತ್ರಯೋದಶ ಚಿತ್ರದ ಟ್ರೇಲರ್, ಶ್ರೀ ಮುರಳಿ ಮನಸಿಗೆ ತುಂಬಾ ಹಿಡಿಸಿದೆ. ಗರುಡಪುರಾಣವನ್ನೇ ತಳಹದಿಯನ್ನಾಗಿಸಿಕೊಂಡು ಹೆಣೆಯಲಾದ ಕಥೆ ಗಮನಸೆಳೆಯುವಂತಿದೆ ಅಂದ ಶ್ರೀಮುರಳಿ, ಇದೇ ವೇಳೆ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಎಸ್.ಎಸ್.ಉಮೇಶ್ ಚಿತ್ರದ ನಿರ್ದೇಶಕ. ಆತ್ಮದ ಹದಿಮೂರು ದಿನಗಳ ಓಡಾಟದ ಕಥೆಯನ್ನ ಹೇಳಲು ಸಿದ್ಧವಾಗಿರುವ ನಿರ್ದೇಶಕರಿಗೆ ನಾಯಕನಾಗಿ ದೀಪು ಸಾಥ್ ನೀಡಿದ್ದಾರೆ. ಇದು, ಇವ್ರ ಮೊದಲ ಪ್ರಯತ್ನ. ಚೈತ್ರ. ಅರ್ಚನಾ ಚಿತ್ರದ ನಾಯಕಿಯರು. ರಮೇಶ್ ಭಟ್, ರಮೇಶ್ ಪಂಡಿತ್‌ರಂಥ ಹಿರಿಯ ಕಲಾವಿದರು ಚಿತ್ರದಲ್ಲಿದ್ದಾರೆ. ಬೀದರ್, ಬೆಂಗಳೂರು ಸುತ್ತ ಮುತ್ತ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಡಾ.ಅಶೋಕ್ ಕುಮಾರ್, ಹಾಗೂ ಎಂ.ಕಾಳಯ್ಯ ಚಿತ್ರದ ನಿರ್ಮಾಪಕರು. ಇನ್ನೂ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಒಂದು ಹಾಡಿಗೆ ಬಿಟೌನ್‌ನ ಖ್ಯಾತ ಗಾಯಕ ಕೈಲಾಶ್ ಖೇರ್ ದನಿಯಾಗಿದ್ದಾರೆ. ಸದ್ಯ, ಟ್ರೇಲರ್ ಮೂಲಕ ಸದ್ದು ಮಾಡಲು ಶುರುವಿಟ್ಟುಕೊಂಡಿರುವ ತ್ರಯೋದಶ ಸದ್ಯದಲ್ಲೇ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here