ರೋರಿಂಗ್ ಸ್ಟಾರ್ ಎದುರು ಅಖಾಡಕ್ಕಿಳಿಯಲ್ಲಿದ್ದಾರೆ ಸಾಯಿಕುಮಾರ್ ಅಂಡ್ ಬ್ರದರ್ಸ್

0
47

ಭರಾಟೆ. 2019 ರ ಬಹು ನಿರೀಕ್ಷಿತ ಸಿನಿಮಾ. ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಬಹದ್ದೂರ್ ಡೈರೆಕ್ಟರ್ ಚೇತನ್ ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರೋ ಹೈ-ಬಜೆಟ್ ಚಿತ್ರವೇ ಭರಾಟೆ. ಶ್ರೀಮುರಳಿ ಲುಕ್ಸ್ ಹಾಗೂ ಟೀಸರ್ ನಲ್ಲಿರೋ ಕಿಚ್ಚು ಹಚ್ಚುವ ಡೈಲಾಗ್‌ಗಳಿಂದಲೇ ಭರಾಟೆ ಚಿತ್ರ ಸಾಕಷ್ಟು ಸದ್ದು ಮಾಡಿದೆ. ಈಗ ‘ತ್ರಿ’ ಬ್ರದರ್ಸ್ ಒಂದೇ ಚಿತ್ರದಲ್ಲಿ ಪ್ರಥಮ ಬಾರಿಗೆ ಸಂಗಮವಾಗಿರೋದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ… ಯಸ್.. ಭರಾಟೆ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಲಿದೆ. ಚಿತ್ರದಲ್ಲಿ ಸಹೋದರರಾಗಿರುವ ಡೈಲಾಗ್ ಕಿಂಗ್ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಖಳ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇದುವೇ ಸಿನಿಮಾ ಮೇಲಿನ ಕೂತುಹಲ ಹೆಚ್ಚಿಸಿದೆ. ನಿರೀಕ್ಷೆಯನ್ನ ಇಮ್ಮಡಿಗೊಳಿಸಿದೆ. ನಿಮಗೆ ಗೊತ್ತಿರಲಿ ಇದುವರೆಗೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇಂತದ್ದೊಂದು ಪ್ರಯೋಗವನ್ನ ಯಾರೂ ಮಾಡಿರಲಿಲ್ಲ… ಅದ್ರಲ್ಲೂ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪರಂತಹ ಕಲಾವಿದರನ್ನ ಹಾಕಿಕೊಂಡು ಸಿನಿಮಾ ಮಾಡುತ್ತಿರೋದು ನಿಜಕ್ಕೂ ವಿಶೇಷ..

ಒಂದೇ ಕುಟುಂಬದ ತ್ರಿ ಸ್ಚಾರ್ಸ್ ಒಂದೇ ಚಿತ್ರದಲ್ಲಿ ಜತೆಯಾಗಿ ಬಣ್ಣ ಹಚ್ಚುತ್ತಿರುವುದೂ ಕೂಡ ವಿಶೇಷ.. ಸದ್ಯಕ್ಕೆ ಮೂವರು ಸಹೋದರರು ಚಿತ್ರದಲ್ಲಿ ಮುಖಾಮುಖಿ ಆಗಲು ಒಪ್ಪಿಗೆ ಹೇಳಿದ್ದಾಗಿದೆ. ಚಿತ್ರಕ್ಕೆ ಕೊನೆ ಹಂತದ ಚಿತ್ರೀಕರಣವೂ ಶುರುವಾಗಿದೆ. ಮೈಸೂರಿನಲ್ಲಿ ಚಿತ್ರತಂಡ ಈ ಮೂವರು ಸಹೋದರರ ಪಾತ್ರಗಳ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದೆ. ಒಂದೆಡೆ ಪೊಲೀಸ್ ಸ್ಟೋರಿ ರೀತಿಯ ಚಿತ್ರಗಳಿಂದಲೇ ಜನಮೆಚ್ಚುಗೆ ಪಡೆದುಕೊಂಡು, ‘ ಡೈಲಾಗ್ ಕಿಂಗ್’ ಎಂದೇ ಪ್ರಸಿದ್ಧರಾದವರು ಸಾಯಿಕುಮಾರ್. ಮೊದಲು ಡಬ್ಬಿಂಗ್ ಕಲಾವಿದನಾಗಿ, ಬಳಿಕ ಖಳನಾಯಕನ ಪಾತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು ರವಿಶಂಕರ್. ಇನ್ನು, ಅವರಿಬ್ಬರ ಸಹೋದರ ಅಯ್ಯಪ್ಪ ಕೂಡ ಜನಪ್ರಿಯ ನಟ. ಇತ್ತೀಚೆಗೆ ತೆರೆಕಂಡ ‘ಕೆಜಿಎಫ್’ ಚಿತ್ರದಲ್ಲಿ ಅಬ್ಬರಿಸಿದ ವಿಲನ್ಗಳ ಪೈಕಿ ಅಯ್ಯಪ್ಪ ಕೂಡ ಒಬ್ಬರು. ಇದೇ ಮೊದಲ ಬಾರಿಗೆ ಈ ಮೂವರೂ ಸಹೋದರರು ಜತೆಯಾಗಿ ನಟಿಸುತ್ತಿದ್ದು, ಅವರನ್ನು ಒಂದಾಗಿಸಿದ ಕೀರ್ತಿ ಈ ನಿರ್ದೇಶಕ ಚೇತನ್ ಕುಮಾರ್‌ಗೆ ಸಲ್ಲುತ್ತದೆ.

ಇನ್ನೂ ಈಗಾಗಲೇ ತಮ್ಮ ಪಾಲಿನ ದೃಶ್ಯಗಳ ಚಿತ್ರೀಕರಣವನ್ನು ಮುಗಿಸಿದ್ದಾರಂತೆ ರವಿಶಂಕರ್ ಮತ್ತು ಅಯ್ಯಪ್ಪ. ಶೀಘ್ರದಲ್ಲೇ ಸಾಯಿಕುಮಾರ್ ಕೂಡ ಶೂಟಿಂಗ್ ಸೆಟ್ ಸೇರಿಕೊಳ್ಳಲಿದ್ದಾರೆ. ಅಂದ ಹಾಗೇ ಭರಾಟೆ ಮೂಲಕ ಸಾಯಿಕುಮಾರ್ ಆಸೆ ಈಡೇರುತ್ತಿದೆ. ಹೌದು, ರವಿಶಂಕರ್, ಅಯ್ಯಪ್ಪ ಸೇರಿ ಮೂವರು ಸಹೋದರರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಆಸೆಯಿದೆ ಅಂತ ಕೆಲವು ದಿನಗಳ ಹಿಂದಷ್ಟೇ ಸಾಯಿಕುಮಾರ್ ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಆಸೆ ಈಡೇರುತ್ತಿದೆ. ಹಾಗಾಗಿ,ಇದೇ ಖುಷಿಯಲ್ಲಿ ಮೂವರು ಸಹೋದರರು ಒಂದೇ ಚಿತ್ರದಲ್ಲಿ ವಿಲನ್‌ಗಳಾಗಿ ಮುಖಾಮುಖಿ ಆಗಲು ಉತ್ಸುಕರಾಗಿದ್ದಾರೆ. ಅಂದ ಹಾಗೇ ಭರಾಟೆ ಸಿನಿಮಾದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 9 ನೆಗೆಟಿವ್ ಕ್ಯಾರೆಕ್ಟರ್ ಗಳು ಇರಲಿವೆ. 9 ಜನ ನಡೆಸುವ ಮಸಲತ್ತಿನ ವಿರುದ್ಧ ಸಿಡಿದು ನಿಲ್ಲಲ್ಲಿದ್ದಾರೆ ರೋರಿಂಗ್ ಸ್ಟಾರ್ ಶ್ರೀಮುರಳಿ. ಬಾಲಿವುಡ್ ನಲ್ಲಿ ಹೆಸರು ಮಾಡಿರುವ ಸೋನು ಸೂದ್, ಟಾಲಿವುಡ್ ನ ಖ್ಯಾತ ನಟರಾದ ಜಗಪತಿ ಬಾಬು, ಸುಮನ್ ಸೇರಿದಂತೆ ಪ್ರಖ್ಯಾತ ವಿಲನ್ ಪಾತ್ರಧಾರಿಗಳೇ ’ಭರಾಟೆ’ ಚಿತ್ರದ 9 ನೆಗೆಟಿವ್ ಕ್ಯಾರೆಕ್ಟರ್ ಗಳಿಗೆ ಬಣ್ಣ ಹಚ್ಚಲಿದ್ದಾರಂತೆ.

ಇವರೊಂದಿಗೆ ಒಂದೇ ಕುಟುಂಬದ ಈ ಮೂವರು ಸ್ಟಾರ್ಸ್ ಮಿಂಚಲಿದ್ದಾರೆ.. ಅದೇನೆ ಇರ್ಲಿ , ಮೂವರು ಸಹೋದರರ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರೋದು ನಿಜಕ್ಕೂ ಭರಾಟೆ ಚಿತ್ರಕ್ಕೆ ಪ್ಲಸ್ ಆಗಲಿದೆ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಈಗಾಗಲೇ ಭರಾಟೆ ಸಿನಿಮಾದ ಫೋಟೋಶೂಟ್ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ನಡೆದಿದೆ. ಫೋಟೋಶೂಟ್ ಗಾಗಿಯೇ ಲೊಕೇಶನ್ ಹುಡುಕಿ ರಾಜಸ್ಥಾನದವರೆಗೂ ಪ್ರಯಾಣ ಮಾಡಿರುವ ಈ ತಂಡ ಇಡೀ ಚಿತ್ರವನ್ನೂ ಗ್ರ್ಯಾಂಡ್ ಆಗಿ ತೆರೆಮೇಲೆ ಮೇಲೆ ತರಲು ಸಜ್ಜಾಗುತ್ತಿದೆ.

LEAVE A REPLY

Please enter your comment!
Please enter your name here