ರುಸ್ತುಂ‌ ಚಿತ್ರದ ಭರ್ಜರಿ ಪೋಟೋಶೂಟ್ – ಶಿವಣ್ಣನಿಗೆ ಜೋಡಿಯಾಗಿ ಶೃದ್ದಾ

0
598

ಡಾ.ಶಿವರಾಜ್ ಕುಮಾರ್. ಪೊಗರು ತುಂಬಿದ ಟಗರು ರೂಪದಲ್ಲಿ ಅಭಿಮಾನಿಗಳನ್ನ ಎಂಟ್ರಟೈನ್ ಮಾಡ್ತಿರುವ ನಟ. ವಯಸ್ಸು ಐವತ್ತು ದಾಟಿದ್ರೂ ಶಿವಣ್ಣ ಎನರ್ಜಿಗೆ ಯಾರು ಸಾಟಿ ಇಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಫಲ್ ಇವ್ರ ಕೈಯಲ್ಲಿರುವ ಸಿನಿಮಾಗಳು. ಅರ್ಧ ಡಜನ್‌ಗೂ ಹೆಚ್ಚಿನ ಸಿನಿಮಾಗಳನ್ನ ಒಪ್ಪಿಕೊಂಡಿರುವ ಈ ಕರುನಾಡ ಚಕ್ರವರ್ತಿ, ಇದೀಗ.. ರುಸ್ತುಂ ರೂಪದಲ್ಲಿ ಬರಲು ಸಿದ್ಧವಾಗಿದ್ದಾರೆ. ಯಸ್. ಶಿವಣ್ಣ.. ರುಸ್ತುಂ ಸಿನಿಮಾ ಇದೇ ಏಪ್ರಿಲ್ ೨೪ಕ್ಕೆ ಸೆಟ್ಟೇರುತ್ತಿದೆ. ಹೀಗಿದ್ಮೇಲೆ.. ಅಭಿಮಾನಿಗಳ ಕೂತುಹಲ ದುಪ್ಪಟ್ಟು ಮಾಡ್ದೆ ಇದ್ದರೆ ಹೇಗೆ. ಬಹುಶ ಇದೇ ಕಾರಣಕ್ಕೋ ಏನೋ.. ಚಿತ್ರದ ಫೋಟೊಶೂಟ್‌ನ್ನ ಮಾಡಿ ಮುಗಿಸಿದ್ದಾರೆ ಡೈರೆಕ್ಟರ್ ರವಿವರ್ಮಾ 

. ಹೌದು, ರುಸ್ತುಂ ಸಿನಿಮಾದ ಫೋಟೊಶೂಟ್‌ನ್ನ ಸದ್ದಿಲ್ಲದೇ ರವಿವರ್ಮಾ ಮಾಡಿ ಮುಗಿಸಿದ್ದಾರೆ. ಟಗರು ಶಿವನನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದ ಸಿನಿಮ್ಯಾಟೋಗ್ರಾಫರ್ ಮಹೇನ್ ಸಿಂಹ ಈ ರುಸ್ತುಂನನ್ನೂ ಕ್ಯಾಮರಾ ಕಣ್ಣಿನಲ್ಲಿ ಬಂಧಿಯನ್ನಾಗಿಸಿದ್ದಾರೆ. ನಿಮಗೆ ಗೊತ್ತಿರಲಿ, ರುಸ್ತುಂನ ಈ ಫೋಟೊಶೂಟ್‌ಗಾಗಿ ಅಂತನೇ ಅದ್ಧೂರಿ ಸೆಟ್‌ನ್ನ ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಹಾಕಲಾಗಿದೆ. ಭರ್ತಿ, ಹತ್ತು ಲಕ್ಷವನ್ನ.. ಬರೀ ಈ ಫೋಟೊಶೂಟ್‌ಗಾಗಿ ಇಲ್ಲಿ ಖರ್ಚು ಮಾಡಲಾಗಿದೆ. ಇಷ್ಟು ಸಾಕಲ್ವಾ ಕ್ವಾಲಿಟಿ ವಿಚಾರದಲ್ಲಿ ರವಿವರ್ಮಾ ಎಷ್ಟರ ಮಟ್ಟಿಗೆ ತಲೆ ಕೆಡಿಸಿಕೊಂಡಿದ್ದಾರೆ ಅನ್ನೋದಕ್ಕೆ. ಇನ್ನು, ಫೋಟೊಶೂಟ್ ಮಾಡಲು ಫೇಸ್ ಒನ್ ಮೆಗಾ ಪಿಕ್ಸೆಲ್ ಕ್ಯಾಮರಾವನ್ನ ಇಲ್ಲಿ ಬಳಸಿರೋದು ಇಲ್ಲಿನ ಇನ್ನೊಂದು ವಿಶೇಷ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಈ ಕ್ಯಾಮರಾ ಬಳಸುತ್ತಿರೋದು ಅನ್ನೋದು ನಿಮಗೆ ಗೊತ್ತಿರಲಿ. ಅಂದ ಹಾಗೇ ಚಿತ್ರದಲ್ಲಿ ಶಿವರಾಜ್ ಕುಮಾರ್ ರುಸ್ತುಂ ಎಂಬ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಕಾರಣಕ್ಕೆ.. ಫೋಟೊಶೂಟ್‌ನಲ್ಲಿ ಶಿವಣ್ಣ ಕೈಯಲ್ಲಿ ಗನ್ ನೀಡಲಾಗಿದೆ. ಟಗರು ಬಳಿಕ ಮತ್ತೊಮ್ಮೆ ಸೆಂಚುರಿ ಸ್ಟಾರ್ ಖಾಕಿ ತೊಡ್ತಿರೋದು ಇಲ್ಲಿನ ಮತ್ತೊಂದು ವಿಶೇಷ. ಇನ್ನು, ಶಿವಣ್ಣಗೆ ಇಲ್ಲಿ ನಾಯಕಿಯಾಗಿ.. ಶ್ರದ್ಧಾ ಶ್ರೀನಾಥ್ ಕಾಣಸಿಗಲಿದ್ದಾರೆ. ಒಂಧರ್ಥದಲ್ಲಿ ಶ್ರದ್ಧಾಗೆ ಇದು ಕನಸಿನ ಸಿನಿಮಾನೂ ಹೌದು. ಇನ್ನು ಮಯೂರಿ ಚಿತ್ರದ ಮತ್ತೊಬ್ಬ ನಾಯಕಿ. ಶಿವಣ್ಣ ತಂಗಿಯ ಪಾತ್ರದಲ್ಲಿ ಮಯೂರಿ ಇಲ್ಲಿ ಕಾಣಸಿಗಲಿದ್ದಾರೆ. ರುಸ್ತುಂಗಾಗಿ, ಹಿಂದಿ ಸಿನಿಮಾ ರಂಗದ ಖ್ಯಾತರನ್ನೂ ಕರೆತರುವ ಯೋಚನೇ ನಿರ್ದೇಶಕ ರವಿವರ್ಮಾಗಿದೆ. ತಮ್ಮ ಪ್ರಯತ್ನದಲ್ಲಿ ರವಿವರ್ಮಾ ಯಶಸ್ವೀಯಾದ್ರೂ ಅಚ್ಚರಿ ಇಲ್ಲ. ಯಾಕಂದ್ರೆ ರವಿವರ್ಮಾ.. ಎಲ್ಲಾ ಭಾಷೆಯಲ್ಲೂ ತಮ್ಮ ಚಾಪು ಮೂಡಿಸಿದವರು. ಅನೂಪ್ ಸೀಳೀನ್ ಸಂಗೀತ ನಿರ್ದೇಶನ ರುಸ್ತುಂಗಿರಲಿದೆ. ಇನ್ನು ನಿರ್ಮಾಣದ ಜವಾಬ್ಧಾರಿಯನ್ನ ಜಯಣ್ಣ ವಹಿಸಿಕೊಂಡಿದ್ದಾರೆ. ಒಟ್ನಲ್ಲಿ ತಮ್ಮ ಮೊದಲ ಸಿನಿಮಾವನ್ನ.. ಅದ್ಧೂರಿಯಾಗಿ, ಮಾಡಲು ಮುಂದಾಗಿರುವ ರವಿವರ್ಮಾ.. ಮತ್ತೊಂದಷ್ಟು ಸರ್‌ಫ್ರೈಸ್‌ಗಳನ್ನ ಚಿತ್ರದ ಮುಹೂರ್ತದ ದಿನ ಅಂದ್ರೆ ಡಾ.ರಾಜ್ ಹುಟ್ಟುಹಬ್ಬದ ಪ್ರಯುಕ್ತ ನೀಡಲಿದ್ದಾರೆ. ಅಲ್ಲಿವರೆಗೂ ಕಾಯಬೇಕಷ್ಟೇ

LEAVE A REPLY

Please enter your comment!
Please enter your name here