ರಿಲೀಸ್ ಮೂಲಕ ನಟಸಾರ್ವಭೌಮನ ಹೊಸ ದಾಖಲೆ – ಅಭಿಮಾನಿಗಳಿಗಾಗಿ ಇಂದೇ ಪ್ರಸನ್ನದಲ್ಲಿ ಪವರ್ ಸ್ಟಾರ್ ದರ್ಶನ

0
46

ದೊಡ್ಮನೆ ಅಭಿಮಾನಿಗಳು ಆತುರದಿಂದ ಕಾಯ್ತಿರುವ ನಟಸಾರ್ವಭೌಮ, ಇಂದು ನಡುರಾತ್ರಿ ಬಿಡುಗಡೆಯಾಗ್ತಿದೆ ಅಂಥ ನೀವ್ ಅನ್ಕೊಂಡಿದ್ದರೆ, ಅದು ಖಂಡಿತ ತಪ್ಪು. ಯಸ್, ನಟಸಾರ್ವಭೌಮ.. ನಡುರಾತ್ರಿಯ ಆಗಮನವಾಗ್ತಿದೆ ಅನ್ನುವದು ಏನೋ ಸತ್ಯ. ಆದ್ರೆ ಹೀಗಿದ್ದೂ ಇಂದು ರಾತ್ರಿ ನೋಡುವ ಸುವರ್ಣ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. ಇದು, ನೀವ್ ನಂಬಲೇಬೇಕು. ಹೌದು, ನಟಸಾರ್ವಭೌಮ ಮತ್ತೊಂದು ದಾಖಲೆ ಬರೆದಿದ್ದಾನೆ. ರಾಜ್ಯದಲ್ಲಿ ಅನೇಕ ಕಡೆ ನಟಸಾರ್ವಭೌಮನ ಅಬ್ಬರ ನಡುರಾತ್ರಿ ಶುರುವಾಗಲಿದೆ. ಆದ್ರೆ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಮಾತ್ರ ಇಂದು ರಾತ್ರಿ ಹತ್ತು ಘಂಟೆನಿಂದನೇ ನಟಸಾರ್ವಭೌಮನ ಮೆರವಣಿಗೆ ನಡೆಯಲಿದೆ.ಯಸ್, ನಟಸಾರ್ವಭೌಮ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಇಂದು ರಾತ್ರಿ ಹತ್ತು ಘಂಟೆಗೆ ಬಿಡುಗಡೆಯಾಗ್ತಿದೆ. ಇದಕ್ಕೆ ಕಾರಣ ಅಭಿಮಾನಿಗಳ ಅಭಿಮಾನ ಹಾಗೂ ಹಠ. ಹೌದು, ಹಾಗ್ ನೋಡಿದ್ರೆ ನಟಸಾರ್ವಭೌಮನ ಮೇಲೆ ಅಭಿಮಾನಿಗಳಿಗೆ ತುಂಬು ನಿರೀಕ್ಷೆ ಇವೆ. ಇದಕ್ಕೆ ತಕ್ಕಂತೆ ಚಿತ್ರದ ಟ್ರೇಲರ್‌ನಲ್ಲಿ ದೆವ್ವದ ಹಾವಳಿಯ ಸ್ಯಾಂಪಲ್ ಇದೆ. ಹಾಗಾಗಿ, ಎರಡು ಶೇಡ್‌ನಲ್ಲಿ ಕಾಣಸಿಗುವ ಪುನೀತ್ ದರ್ಶನಕ್ಕೆ ಕಾದು ಕುಂತಿರುವ ಭಕ್ತ ಗಣ, ಮಧ್ಯರಾತ್ರಿವರೆಗೂ ಕಾಯಲು ನಮ್ಮಿಂದ ಆಗಲ್ಲ ಅನ್ನುವ ಹಠ ಹಿಡಿದು ಕುಂತಿತ್ತು. ಇಂದೇ ನಟಸಾರ್ವಭೌಮ ಪ್ರದರ್ಶನ ಬೇಕೆ ಬೇಕು ಅನ್ನುವ ಬೇಡಿಕೆ ಇಟ್ಟಿತ್ತು. ಅಭಿಮಾನಿಗಳು ತುಂಬು ಅಭಿಮಾನದಿಂದ ಮಾಡಿದ ಇದೇ ಬೇಡಿಕೆ ಮಣೆ ಹಾಕಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ನಿರ್ದೇಶಕ ಪವನ್ ಒಡೆಯರ್ ನಟಸಾರ್ವಭೌಮನನ್ನ ಇಂದು ರಾತ್ರಿ ಹತ್ತು ಘಂಟೆಗೆನೇ ಅಭಿಮಾನಿಗಳ ಜೋಳಿಗೆಗೆ ಹಾಕಲು ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here