ರಿಲೀಸ್ಗೆ ರೆಡಿಯಾಗಿದೆ ಗಣಿಯ ಮತ್ತೊಂದು ಲವ್ ಸ್ಟೋರಿ – ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡುತ್ತಾ ರೋಮಿಯೊ ಜೋಡಿ

0
233

99.. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾ. ತಮಿಳಿನ ಸೂಪರ್ ಹಿಟ್ ಸಿನಿಮಾ 96 ಚಿತ್ರದ ಕನ್ನಡ ಅವತರಣಿಕೆ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದ 99.. ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.ಹೌದು, 99.. ಚಿತ್ರದ ಬಿಡುಗಡೆ ದಿನಾಂಕ ನಿಕ್ಕಿಯಾಗಿದೆ. ಚಿತ್ರ ಇದೇ ಏಪ್ರಿಲ್ 26.. ಕ್ಕೆ ಬಿಡುಗಡೆಯಾಗಲಿದೆ. ಅಲ್ಲಿಗೆ.. ಚುನಾವಣೆ ಬಿಸಿ ಕಮ್ಮಿಯಾಗ್ತಿದ್ದಂತೆ ಚಿತ್ರಮಂದಿರಗಳಲ್ಲಿ ಗೋಲ್ಡನ್ ಗಣಿಗಾರಿಕೆ ಶುರುವಾಗಲಿದೆ. ಇನ್ನೂ 99.. ಚಿತ್ರದ ಬಿಡುಗಡೆಯ ಸುದ್ದಿ ಗಣಪನ ಭಕ್ತಗಣದ ಸಂಭ್ರಮಕ್ಕೂ ಕಾರಣವಾಗಿದೆ. ಕಾರಣ.. ಗಣೇಶ್, ಅಭಿನಯದ ಯಾವ ಚಿತ್ರವೂ ಈ ವರ್ಷ ಇನ್ನೂ ಬಿಡುಗಡೆಯಾಗಿಲ್ಲ. ಹಾಗಾಗಿ, ಕೂತುಹಲ ಹಾಗೂ ತುಂಬು ಕಾತುರದಿಂದ ಅಭಿಮಾನಿಗಳೂ ಕಾಯ್ತಿರುವಾಗ್ಲೇ ಇದೀಗ 99.. ಚಿತ್ರದ ಬಿಡುಗಡೆಯ ದಿನಾಂಕವನ್ನ ಫಿಕ್ಸ್ ಮಾಡಲಾಗಿದೆ. ಅಂದ ಹಾಗೇ, ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಬಂದ ಹಾಡುಗಳಿಂದ.. ಆಗ್ಲೇ ಒಂದು ಹಂತಕ್ಕೆ ಗಾಂಧಿನಗರದ ಗಲ್ಲಿಯಲ್ಲಿ ಸುದ್ದಿ ಮಾಡಿರುವ 99ನಲ್ಲಿ ನಾಯಕಿಯಾಗಿ ಭಾವನಾ ಕಾಣಸಿಗಲಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶನವಿರುವ ಚಿತ್ರಕ್ಕೆ ಕೋಟಿ ನಿರ್ಮಾಪಕ ರಾಮು ಬಂಡವಾಳ ಹೂಡಿದ್ದಾರೆ.

LEAVE A REPLY

Please enter your comment!
Please enter your name here