ರಿಲೀಸ್ಗು ಮುನ್ನವೆ ಖದರ್ ಹೆಚ್ಚಿಸಿಕೊಂಡ ಬೆಲ್ ಬಾಟಂ – ಮತ್ತೊಂದು ಸಕ್ಸಸ್ ನಿರೀಕ್ಷೆಯಲ್ಲಿ ಜಯತೀರ್ಥ

0
35

ಬೆಲ್ ಬಾಟಂ.. ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾ. ಗಾಂಧಿನಗರದ ಗಲ್ಲಿಗಳಿಂದ ಹಿಡ್ದು ಪಕ್ಕದ ತಮಿಳುನಾಡಿನವರೆಗೂ ಸದ್ದು ಮಾಡ್ತಿರುವ ಬೆಲ್ ಬಾಟಂ ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದೆ.ಬೆಲ್ ಬಾಟಂ ನಿಮ್ಮನ್ನ ೮೦ರ ದಶಕಕ್ಕೆ ಕರೆದೊಯ್ಯುವ ಸಿನಿಮಾ. ಆಲ್ ರೆಡಿ.. ಚಿತ್ರದ ಪ್ರಚಾರಕ್ಕೆ, ಚಿತ್ರತಂಡ ಬಳಸಿರುವ ಹಳೆಯ ವಿನ್ಯಾಸದ ರೆಟ್ರೋ ಪೋಸ್ಟರ್‌ಗಳೂ ಚಿತ್ತ ಕದ್ದಿವೆ. ಹೀಗಿರುವಾಗ್ಲೇ ಬಂದಿರುವ ಟ್ರೇಲರ್.. ಚಿತ್ರದ ಮೇಲೀನ ನಿರೀಕ್ಷೆಗಳನ್ನ ಇಮ್ಮಡಿಗೊಳಿಸುತ್ತಿದೆ.ಯಸ್, ಬೆಲ್ ಬಾಟಂ ಚಿತ್ರದ ಟ್ರೇಲರ್ ಇಂಟ್ರೆಸ್ಟಿಂಗ್ & ಇಂಪ್ರೆಸಿವ್ ಆಗಿದೆ ಅನ್ನೋದು ಅನೇಕರ ಅಂಬೋಣ. ಕಾರಣ, ಇಲ್ಲಿ ಕಥೆಯನ್ನ.. ಹರಿಕಥೆ ಮೂಲಕ ಹೇಳಲಾಗಿದೆ. ಆ ಮೂಲಕ.. ಚಿತ್ರದಲ್ಲೊಂದು ಹೊಸತನವಿದೆ ಅನ್ನುವ ಸಂದೇಶವನ್ನೂ ಸ್ಪಷ್ಟವಾಗಿ ಹೇಳುವ ಪ್ರಯತ್ನನೂ ಆಗಿದೆ.

ಸದ್ಯ, ಇದೇ ಹರಿಕಥೆಯ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಪ್ರೇಕ್ಷಕರ ಪ್ರೀತಿಗೂ ಪಾತ್ರವಾಗ್ತಿದೆ.ಅಂದ ಹಾಗೇ ಬೆಲ್ ಬಾಟಂ.. ರಿಶಭ್ ಶೆಟ್ಟಿ ಆಸ್ ಎ ಆಕ್ಟರ್ ಕಾಣಸಿಗುವ ಸಿನಿಮಾ. ಆರಂಭದಿಂದ್ಲೂ ಒಂದು ಹಂತದ ಕೂತುಹಲಕ್ಕೆ ಕಾರಣವಾಗಿದ್ದ ಬೆಲ್ ಬಾಟಂನಲ್ಲಿ ರಿಶಭ್, ಡಿಟೆಕ್ಟಿವ್ ದಿವಾಕರ್ ಪಾತ್ರದಲ್ಲಿ ಕಾಣಸಿಗಲಿದ್ದಾರೆ. ಬಟ್, ದುರಂತ ಅಂದ್ರೆ ಇದೇ ಡಿಟೆಕ್ಟಿವ್ ದಿವಾಕರ್ ಬಳಿ ಇಲ್ಲಿ ಗನ್ನೇ ಇಲ್ಲ. ಗನ್ ಇಲ್ಲದೇ ಪೋಸ್ ಕೊಟ್ಟು, ಕಾಮಿಡಿ ಪೀಸು ಅನ್ನಿಸಿಕೊಳ್ತಿರುವ ದಿವಾಕರ್ ಜೇಮ್ಸ್ ಬಾಂಡಾ ಅಥ್ವಾ ಕುರಿ ಬಾಂಡಾ ಅನ್ನುವ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡ್ತಿದೆ. ಇನ್ನೂ ಹರಿಪ್ರಿಯಾ ದಿವಾಕರ್‌ನ ದಿಲ್ ಕೀ ದಡ್ಕನ್. ಜಯತೀರ್ಥ ಚಿತ್ರದ ನಿರ್ದೇಶಕ. ಒಲವೇ ಮಂದಾರ, ಬ್ಯೂಟಿಫುಲ್ ಮನಸುಗಳು ಅಂಥ ಸದಭಿರುಚಿ ಸಿನಿಮಾ ಮಾಡಿದ್ದ ಜಯತೀರ್ಥ, ಎಂಟ್ರಟೈನ್ಮೆಂಟ್‌ನ ಫುಲ್ ಮೀಲ್ಸ್ ಬಡಿಸಲು ಸಿದ್ಧವಾಗಿದ್ದಾರೆ. ಸದ್ಯ, ಚಿತ್ರಕ್ಕೆ ಸಿಗ್ತಿರುವ ರೆಸ್ಫಾನ್ಸ್‌ನಿಂದ ಪುಳಕಿತರಾಗಿರುವ ಜಯತೀರ್ಥಗೆ ಗೆಲುವಿನ ಸಂಪೂರ್ಣ ವಿಶ್ವಾಸವಿದೆ.ಯೋಗರಾಜ್ ಭಟ್ ಚಿತ್ರದ ಮತ್ತೊಂದು ಆಕರ್ಷಣೆ. ಇನ್ನು ಅಚ್ಯುತ್ ಕುಮಾರ್ ಹಾಗೂ ನಿರ್ದೇಶಕ ಶಿವಮಣಿ ಕೂಡಾ ಚಿತ್ರದ ತಾರಾಕಳೆ. ದಯಾನಂದ್ ಬರೆದಿರುವ ಕಥೆಗೆ.. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ. ಅರವಿಂದ್ ಕಶ್ಯಪ್ ಚಿತ್ರದ ಸಿನಿಮ್ಯಾಟೋಗ್ರಾಫರ್. ಇನ್ನೂ ಸಂತೋಶ್ ಕುಮಾರ್ ಚಿತ್ರದ ಪ್ರೊಡ್ಯೂಸರ್.ಇನ್ನೂ ಬೆಲ್ ಬಾಟಂನ ಟ್ರೇಲರ್ ಹೇಗೆ ಟಾಕ್ ಆಫ್ ದಿ ಟೌನ್ ಆಗ್ತಿದೆಯೋ.. ಹಾಗೇ ಚಿತ್ರದ ಏತಕೆ ಸಾಂಗ್ ಕೂಡಾ ಸದ್ದು ಮಾಡ್ತಿದೆ. ಹಾಡು ಕೇಳಿದ ನೋಡಿದ ಪಡ್ಡೆಗಳು ಏತಕೆ ಕನಸಲಿ ಮೀಸೆ ತಿಡಿಯುವೆ ಅನ್ನುವ ಪ್ರಶ್ನೆಯನ್ನ, ತಮ್ಮ ತಮ್ಮ ಪ್ರಿಯತಮೆಗಳಿಗೆ ಕೇಳಲು ಶುರುಮಾಡಿದ್ದಾರೆ. ಅದೇನೆ ಇರ್ಲಿಕ, ಸದ್ಯ ಟ್ರೇಲರ್ ಮೂಲಕ.. ದಿವಾಕರ್‌ನ ಇನ್‌ವೆಸ್ಟಿಗೇಶನ್ ಹೇಗಿರುತ್ತೆ ಅನ್ನುವ ಕೂತುಹಲವನ್ನ ಹುಟ್ಟು ಹಾಕಿರುವ ರೆಟ್ರೋ ಸ್ಟೈಲ್‌ನ ಬೆಲ್ ಬಾಟಂ ನೋಡಿ, ನೀವ್ ಫೀಲ್ ಮಾಡ್ಕೋಬೇಕು ಅಂದ್ರೆ ಇನ್ನೂ ಸ್ವಲ್ಪ ದಿನ ಕಾಯಬೇಕು. ಕಾರಣ ದಿವಾಕರನ ಇನ್ವೆಸ್ಟಿಗೇಶನ್ ಶುರುವಾಗೋದು ಜನವರಿ ಅಂತ್ಯಕ್ಕೆ ಅಥ್ವಾ ಫೆಬ್ರುವರಿ ಮೊದಲನೇ ವಾರದಲ್ಲಿ. ಅಲ್ಲಿವರೆಗೂ ಟ್ರೇಲರ್ ನೋಡಿ . ಹಾಡು ಕೇಳಿ ಎಂಜಾಯ್ ಮಾಡಿ.

LEAVE A REPLY

Please enter your comment!
Please enter your name here