ರಾಮಾಚಾರಿಯ ಗೆಟಪ್ನಲ್ಲಿ ಪಡ್ಡೆಹುಲಿ ಶ್ರೇಯಸ್ – ವಿಷ್ಣುದಾದನಿಗೆ ಹಾಡನ್ನು ಅರ್ಪಿಸಿದ ಗುರುದೇಶಪಾಂಡೆ

0
32

ಪಡ್ಡೆಹುಲಿ..ಗಂಡುಗಲಿ ಕೆ.ಮಂಜು ಪುತ್ರ ಶ್ರೇಯಸ್ ಮೊದಲ ಚುಂಬನ. ಸೆಟ್ಟೇರಿದ ದಿನದಿಂದ ಹಿಡ್ದು ನಾನಾ ಕಾರಣಕ್ಕೆ ಗಮನ ಸೆಳೆಯುತ್ತಾನೇ ಬಂದಿದ್ದ ಪಡ್ಡೆಹುಲಿ ಇದೀಗ ವಿಶೇಷ ಪ್ರಮೋಶನಲ್ ಹಾಡೊಂದನ್ನೊತ್ತುಕೊಂಡು ಬಂದಿದ್ದಾನೆ. ವಿಶೇಷ ಅಂದ್ರೆ ಇದು ಸಾಹಸಸಿಂಹ ಡಾ.ವಿಷ್ಣುವರ್ಧನ್‌ಗೆ ಅರ್ಪಿಸಲಾದ ಹಾಡು.ವಿಷ್ಣುಗೆ ಅರ್ಪಿಸಿದ ಹಾಡು ಅಂದ್ಮೇಲೆ, ವಿಷ್ಣುವನ್ನ ಅನುಸರಿಸದಿದ್ದರೇ ಹೇಗೆ. ಬಹುಶ, ಇದೇ ಕಾರಣಕ್ಕೋ ಏನೋ.. ಶ್ರೇಯಸ್ ವಿಷ್ಣು ಮ್ಯಾನರಿಸಂನ ಫಾಲೋ ಮಾಡಿದ್ದಾರೆ. ವಿಷ್ಣು ಮತ್ತೆ ನೆನಪಾಗುವಂತೆ ಮಾಡಿದ್ದಾರೆ. ಸದ್ಯ, ಇದೇ ಹಾಡು.. ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅಷ್ಟೇ ಅಲ್ಲ ಕನ್ನಡ ಚಿತ್ರರಂಗದ ಟಾಫ್ ನಟ ಹಾಗೂ ನಟಿಯರಿಗೂ ನಾ ತುಂಬಾ ಹೊಸಬ ಬಾಸು ಸದ್ಯಕ್ಕೆ ಫೇವರೇಟ್ ಹಾಡು.ಇನ್ನೂ ಪಡ್ಡೆಹುಲಿ ಡಾ.ವಿಷ್ಣುವರ್ಧನ್ ನೆರಳಿನಲ್ಲಿ ನಿರ್ಮಾಣಗೊಂಡ ಸಿನಿಮಾ. ಹಾಗಾಗೇ, ಪ್ರಮೋಶನಲ್ ಹಾಡು.. ಬಿಡುಗಡೆ ಮಾಡಲು, ವಿಷ್ಣುವಿನ ಆಪ್ತಮಿತ್ರ ದ್ವಾರಕೀಶ್ ಮುಖ್ಯ ಅತಿಥಿಯಾಗಿ ಬಂದಿದ್ದರು.

ಹಾಡು ಕೇಳಿ, ನೋಡಿ.. ಖುಷಿಪಟ್ಟ ದ್ವಾರಕೀಶ್ ಇದೇ ವೇಳೆ ಎಮೋಶನಲ್ ಆದರು. ವಿಷ್ಣು ವಾರಕ್ಕೊಮ್ಮೆಯಾದ್ರೂ ನನ್ನ ಕನಸಿನಲ್ಲಿ ಬರ್ತಾ್ನೇ ಅಂದರು. ವಿಷ್ಣು ಜೊತೆಗಿನ ನೆನಪಿನ ಬುತ್ತಿಯನ್ನೂ ಬಿಚ್ಚಿಟ್ರು. ಇನ್ನೂ ಶ್ರೇಯಸ್ ತಂದೆ ಕೆ.ಮಂಜು, ಅಪ್ಪಟ ವಿಷ್ಣು ಭಕ್ತ. ಹಾಗಾಗಿ, ಪಡ್ಡೆಹುಲಿಗಿಂತ ಇನ್ನೊಂದು ಅತ್ಯುತ್ತಮ ವೇದಿಕೆಗಾಗಿ ಕಾಯಲು ಹೇಗೆ ಸಾಧ್ಯ. ಇದೇ ಕಾರಣಕ್ಕೆ.. ಪಡ್ಡೆಹುಲಿ ಮೂಲಕ ಶ್ರೇಯಸ್ ಪರಿಚಯಕ್ಕೆ ಮಂಜು ಮುಂದಾಗಿದ್ದು. ಇಷ್ಟೇ ಅಲ್ಲ ಇದುವೇ ಶ್ರೇಯಸ್‌ಗೆ ನಾಗರಹಾವಿನಲ್ಲಿ ವಿಷ್ಣು ಗೆಟಪ್ಪು ಹಾಕಿಸಲು ಕಾರಣ. ಗುರುದೇಶಪಾಂಡೇ ನಿರ್ದೇಶನದ ಚಿತ್ರವಿದು. ಇಲ್ಲೀತನ್ಕ ಭಿನ್ನ.. ವಿಭಿನ್ನ.. ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿರುವ ಗುರುದೇಶಪಾಂಡೇ, ಪಡ್ಡೆಹುಲಿಯನ್ನ.. ಡಾ.ವಿಷ್ಣುವರ್ಧನ್‌ಗೆ ಅರ್ಪಣೆ ಮಾಡಿದ್ದೇಕೆ ಅನ್ನುವ ಪ್ರಶ್ನೆಗೂ ಉತ್ತರ ನಿಮಗೆ ಚಿತ್ರಮಂದಿರದಲ್ಲಿ ಚಿತ್ರ ನೋಡಿದಾಗ ಗೊತ್ತಾಗುತ್ತೆ.

ಇನ್ನೂ ವಿಷ್ಣು ಅಪರಾವತಾರದಂತೆ ಹಾಡಿನಲ್ಲಿ ಕಾಣಸಿಗುವ ಮಂಜು ಪುತ್ರ ಶ್ರೇಯಸ್‌ಗೆ, ವಿಷ್ಣು ನಡೆದ ಹಾದಿಯಲ್ಲೇ ನಡೆಯುವ ಹೆಬ್ಬಯಕೆ. ಈ ನಿಟ್ಟಿನಲ್ಲಿ ಪಡ್ಡೆಹುಲಿ ಮೂಲಕ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ ಶ್ರೇಯಸ್ . ನಿಶ್ವಿಕಾ ನಾಯ್ಡು ಪಡ್ಡೆಹುಲಿಯ ಸಿಂಹಿಣಿ. ಸಂಗೀತ ಎಂಬ ಪಾತ್ರದಲ್ಲಿ ಕಾಣಸಿಗುವ ನಿಶ್ವಿಕಾಗೆ, ಪಡ್ಡೆಹುಲಿಯ ಮೇಲೆ ಎಲ್ಲಿಲ್ಲದ ಪ್ರೀತಿ. ಹಾಗೂ ಭರವಸೆ ಇದೆ.ಅಂದ ಹಾಗೇ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿರುವ ಹಾಡಿಗೆ, ವಿಷ್ಣುವಿನ ಆರಾಧಕ ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ತೇಜಸ್ವಿನಿ ಎಂಟ್ರಪೈಸಿಸ್ ಬ್ಯಾನರ್ ಅಡಿ, ಚಿತ್ರಕ್ಕೆ ಎಂ.ರಮೇಶ್ ಬಂಡವಾಳ ಹೂಡಿದ್ದಾರೆ.ಸದ್ಯ ಪ್ರಮೋಶನಲ್ ಸಾಂಗ್ ಮೂಲಕ ಸದ್ದು ಮಾಡ್ತಿರುವ ಪಡ್ಡೆಹುಲಿಯ ಪರಾಕ್ರಮವನ್ನ ಕಣ್ತುಂಬಿಕೊಳ್ಳುವ ಕಾಲ ಸದ್ಯದಲ್ಲೇ ಬರಲಿದೆ.

LEAVE A REPLY

Please enter your comment!
Please enter your name here