ರಾಜಸ್ತಾನದಲ್ಲಿ ಭರಾಟೆಯ ಭರ್ಜರಿ ಪೋಟೊಶೂಟ್ – ಶ್ರೀಮುರುಳಿ ಜೊತೆ ಶ್ರೀಲೀಲಾ

0
313

ಶ್ರೀ ಮುರಳಿ.. ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್. ಮಫ್ತಿಯಲ್ಲಿ ಮಸ್ತಾಗಿ ಅಭಿಮಾನಿಗಳನ್ನ ಎಂಟ್ರಟೈನ್ ಮಾಡಿ, ಗೆಲುವಿನ ಕೇಕೆ ಹಾಕಿದ ಶ್ರೀಮುರಳಿಯ ಭರಾಟೆ ಇದೀಗ ರಾಜಸ್ತಾನದುದ್ದಕ್ಕೂ ಕೇಳಿ ಬರ್ತಿ ದೆ.ಯಸ್. ಭರಾಟೆ.. ಶ್ರೀಮುರಳಿ ಅಭಿನಯದ ಮುಂದಿನ ಸಿನಿಮಾ. ಆರಂಭದಿಂದ್ಲೂ ಸದ್ದು ಮಾಡುತ್ತಾ, ಎಲ್ಲರ ಚಿತ್ತವನ್ನ ಕದಿಯುತ್ತಾ, ಆಗ್ಲೇ ಅಭಿಮಾನಿಗಳಲ್ಲೊಂದು ಅತೀವ ಕೂತುಹಲ ಕೆರಳಿಸಿರುವ ಭರಾಟೆಗಾಗಿ ಶ್ರೀಮುರಳಿ ಇದೀಗ ರಾಜಸ್ತಾನದಲ್ಲಿ ಬೀಡು ಬಿಟ್ಟಿದ್ದಾರೆ. ರಾಜಸ್ತಾನದಲ್ಲಿ ಶ್ರೀಮುರಳಿ & ಟೀಮ್ ಬೀಡು ಬಿಟ್ಟಿದೆ. ಹಾಗಂತ.. ಶ್ರೀಮುರಳಿ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ ಅಂತ ಅನ್ಕೊಳ್ಳೋ ಹಾಗಿಲ್ಲ. ಬಿಕೌಝ್.. ಶ್ರೀಮುರಳಿ & ತಂಡ ಠಿಕಾಣಿ ಹೂಡಿರೋದು ಬರೀ ಫೋಟೊಶೂಟ್‌ಗಷ್ಟೇ.

ಹೌದು, ಭರಾಟೆ ಚಿತ್ರತಂಡ, ಬರೀ ಚಿತ್ರೀಕರಣಕ್ಕಂತನೇ.. ರಾಜಸ್ತಾನಕ್ಕೆ ಹೋಗಿದೆ. ನಿಮಗೆ ಗೊತ್ತಿರಲಿ, ಸಾಮಾನ್ಯವಾಗಿ ಚಿತ್ರತಂಡ.. ಬೇರೆ ಊರುಗಳಿಗೆ ಹೋಗೋದು ಚಿತ್ರೀಕರಣಕ್ಕೆ. ಬಟ್. ಭರಾಟೆ ಟೀಮ್ ವಿಚಾರದಲ್ಲಿ ಇದು ಭಿನ್ನ. ಫೋಟೊಶೂಟ್‌ಗಾಗೇ ರಾಜಸ್ತಾನಕ್ಕೆ ಹೋಗಿರುವ ತಂಡ.. ಚಿತ್ರದ ಕಲರ್‌ಫುಲ್ ಫೋಟೊಶೂಟ್‌ಗಳನ್ನ ಸೆರೆಹಿಡಿಯುವಲ್ಲಿ ಬ್ಯುಸಿಯಾಗಿದೆ.ಭರಾಟೆಗೆ ಚೇತನ್ ಕುಮಾರ್ ನಿರ್ದೇಶನವಿದೆ. ಹಿಂದೆ ಬಹದ್ದೂರ್ ಹಾಗೂ ಭರ್ಜರಿ ಚಿತ್ರಗಳನ್ನ ಪ್ರೇಕ್ಷಕರ ಮಡಿಲಿಗೆ ಹಾಕಿದ್ದ, ಓನ್ಸ್ ಅಗೈನ್ ಬಿ ಅಕ್ಷರದೊಂದಿಗೆ ಇದೀಗ ಭರಾಟೆಯ ಕಹಾನಿಯನ್ನ ಹೇಳಲು ಸಿದ್ಧವಾಗಿದ್ದಾರೆ.

ಇನ್ನು, ಭರಾಟೆಯಲ್ಲಿ ನಾಯಕಿಯಾಗಿ ಶ್ರೀಲೀಲಾ ಕಾಣಸಿಗಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇದು ಇವ್ರಿಗೆ ಎರಡನೇ ಪ್ರಯತ್ನ. ಅಂದ ಹಾಗೇ, ಭರಾಟೆಯ ಚಿತ್ರೀಕರಣಕ್ಕೂ ಮುನ್ನವೇ.. ರಾಜಸ್ಥಾನದಲ್ಲೇ ಫೋಟೊಶೂಟ್ ಮಾಡಲು ಕಾರಣನೂ ಇದೆ. ಯಸ್, ಅಸಲಿಗೆ ರಾಜಸ್ಥಾನದಲ್ಲೇ ಚಿತ್ರದ ಕೆಲ ಸನ್ನಿವೇಶಗಳು ಇರಲಿವೆ. ಬರೀ ಸನ್ನಿವೇಶಗಳಷ್ಟೇ ಅಲ್ಲ ಹಾಡು ಹಾಗೂ ಫೈಟ್ ಕೂಡಾ ರಾಜಸ್ಥಾನದಲ್ಲಿ ನಡೆಯಲಿದೆ. ಹಾಗಾಗೇ, ರಾಜಸ್ಥಾನದ ಜೈಪುರ್, ಜೋಧಪುರ, ಜೈಸಲ್ಮೇರ್, ಉದಯಪುರಗಳಲ್ಲಿ ಬೀಡು ಬಿಟ್ಟಿರುವ ತಂಡ, ಚಿತ್ರದ ಸ್ಪೆಷಲ್ ಫೋಟೋಶೂಟ್ ಮಾಡುತ್ತಿದೆ.

ಇನ್ನು, ಚಿತ್ರಕ್ಕಾಗಿ ಅಲ್ಲಿನ ಸಂಸ್ಕೃತಿ ಬಿಂಬಿಸುವಂತಹ ಉಡುಪುಗಳು ಬೇಕಾಗಿರೋದ್ರಿಂದ ಇದರ ಶಾಪಿಂಗ್ ಕೂಡ ಭರ್ಜರಿಯಾಗೇ ಸಾಗಿದೆ.ಶೂಟಿಂಗ್ ಲೊಕೇಶನ್ ಹುಡುಕಾಟದಲ್ಲಿರೋ ತಂಡ ಚೆನ್ನಾಗಿರೋ ತಾಣಗಳ ಪಟ್ಟಿ ಮಾಡ್ತಿದೆ. ಸುಮಾರು 25 ದಿನ ರಾಜಸ್ಥಾನದ ಹಲವೆಡೆ ಚಿತ್ರೀಕರಣ ನಡೆಯಲಿದೆ. ಶ್ರೀಮುರಳಿ ಹಾಗೂ ಶ್ರೀಲೀಲಾ ಭರಾಟೆಯನ್ನ ಇಲ್ಲಿ ಭುವನ್ ಗೌಡ ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯುತ್ತಿದ್ದಾರೆ. ನಿಮಗೆ ಗೊತ್ತಿರಲಿ.. ಭುವನ್ ಗೌಡ ಸದ್ಯದ ಬ್ಯುಸಿಯೆಸ್ಟ್ ಸಿನಿಮ್ಯಾಟೋಗ್ರಾಫರ್. ಅದೇನೆ ಇರ್ಲಿ್.. ಬರೀ ಫೋಟೊಶೂಟ್‌ಗಾಗಿನೇ ಇಷ್ಟೊಂದು ಕಾಳಜಿಯನ್ನ ವಹಿಸುತ್ತಿರುವ ಡೈರೆಕ್ಟರ್ ಚೇತನ್ ಕುಮಾರ್ & ಟೀಮ್, ತಮ್ಮ ಭರಾಟೆಯ ಚಿತ್ರೀಕರಣವನ್ನ ಇದೇ ಆಗಸ್ಟ್ ಮೊದಲ ವಾರದಲ್ಲಿ ಶುರು ಮಾಡಲಿದೆ. ಅಲ್ಲಿವರೆಗೂ ಇನ್ನು ಯಾವೆಲ್ಲಾ ಸ್ಪೆಷಲ್ ಸಂಗತಿಗಳ ಭರಾಟೆ ಶುರುವಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here