ರಾಜಮೌಳಿಯ ಮುಂದಿನ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ವಿಲನ್ – ಜೂ ಎನ್ ಟಿ ಆರ್ ರಾಮ್ ಚರಣ್ ಎದುರು ಗುಡುಗಲಿದೆ ಗೂಳಿ

0
64

ಸುದೀಪ.. ಕನ್ನಡ ಚಿತ್ರರಂಗದ ಹೆಮ್ಮೆಯ ಅಭಿನಯ ಚಕ್ರವರ್ತಿ. ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಾನೇ, ಅಭಿಮಾನಿಗಳ ಮನ ತಣಿಸುತ್ತಾನೇ.. ಆಗೊಮ್ಮೆ ಈಗೊಮ್ಮೆ ಪಕ್ಕದ ಮನೆಗಳಿಗೂ ವಿಸಿಟ್ ಕೊಡುವ ಕೆಚ್ಚದೆಯ ಕಿಚ್ಚ ಇದೀಗ ಮತ್ತೊಮ್ಮೆ ಹೈದ್ರಾಬಾದ್ ಫ್ಲೈಟ್ ಹತ್ತಲಿದ್ದಾರೆ. ಹೀಗೊಂದು ಸುದ್ದಿ ಹೈದ್ರಾಬಾದ್‌ನ ಬೀದಿ ಬೀದಿಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.ಯಸ್, ಸುದೀಪ.. ಮತ್ತೊಮ್ಮೆ ತೆಲುಗು ಸಿನಿಮಾದಲ್ಲಿ ಕಾಣಸಿಗಲಿದ್ದಾರಂತೆ. ಹಾಗಂಥ, ಅತಿಥಿ ಪಾತ್ರವಾ ಅಂಥ ಅನ್ಕೋಳ್ಳೋ ಹಾಗಿಲ್ಲ. ಕಾರಣ.. ಸುದೀಪ. ಹೈದ್ರಾಬಾದ್‌ನಲ್ಲಿ ವಿಲನ್ ಪೋಷಾಕುಗಳನ್ನ ಮತ್ತೆ ಹಾಕಿಕೊಳ್ಳಲಿದ್ದಾರೆ. ಇನ್ನೂ ಇಂಟ್ರೆಸ್ಟಿಂಗ್ & ಎಕ್ಸಾಯಟಿಂಗ್ ವಿಷಯ ಅಂದ್ರೆ ಸುದೀಪ ರಾಜಮೌಳಿಯ ನೆಕ್ಸ್ಟ್ ಮೆಗಾ ವೆಂಚರ್ ತ್ರಿಬಲ್ ಆರ್‌ನಲ್ಲಿ ರಾಮ್ ಚರಣ್ ತೇಜಾ ಹಾಗೂ ಜ್ಯೂ.ಎನ್.ಟಿ.ಆರ್‌ಗೆ ಸವಾಲು ಹಾಕಲಿದ್ದಾರೆ. ಹೌದು, ಆರ್ ಆರ್ ಆರ್.. ಆಲ್ ರೆಡಿ, ಇಂಡಿಯನ್ ಸಿನಿಮಾ ಲೋಕದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಸಿನಿಮಾ. ಬೆಟ್ಟದಷ್ಟು ನಿರೀಕ್ಷೆಗಳನ್ನ ಆಗ್ಲೇ ಹುಟ್ಟು ಹಾಕಿರುವ ಇದೇ ಆರ್ ಆರ್ ಆರ್‌ನ ನೆಗೆಟಿವ್ ಪಾತ್ರಕ್ಕೆ, ರಾಜಮೌಳಿ.. ಅಭಿನಯ ಚಕ್ರವರ್ತಿಯನ್ನ ಅಪ್ರೌಚ್ ಮಾಡಿದ್ದಾರಂತೆ. ಮಾತುಕಥೆನೂ ಮಾಡಿದ್ದಾರಂತೆ. ಇಂಥಹದ್ದೊಂದು ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

LEAVE A REPLY

Please enter your comment!
Please enter your name here