ರಾಜಣ್ಣನ ಮಗನ ಟ್ರೈಲರ್ ಅಬ್ಬರ – ನಿರೀಕ್ಷೆ ಹೊತ್ತು ಬರುತ್ತಿದೆ ಹೊಸಬರ ಸಿನಿಮಾ

0
312

ಇದೇ 15ಕ್ಕೆ ನಿಮ್ಮುಂದೆ ಬರ್ತಿದ್ದಾನೆ ರಾಜಣ್ಣನ ಮಗ
ಮಾರ್ಚ್ 15ಕ್ಕೆ ಥಿಯೇಟರ್ ಅಂಗಳಕ್ಕೆ ರಾಜಣ್ಣನ ಮಗ ಎಂಟ್ರಿ
ರಾಜಣ್ಣನ ಮಗ ಸಾಕಷ್ಟು ವಿಶೇಷ ವಿಚಾರಗಳಿಂದ ಈ ಸಿನಿಮಾ ಸದ್ದು, ಸುದ್ದಿ ಮಾಡುತ್ತಲೇ ಬರ್ತಿದೆ. ಈಗಾಗ್ಲೇ ಟೀಸರ್ ಮತ್ತು ಹಾಡುಗಳಿಂದ ಗಮನ ಸೆಳೆದಿದ್ದ ಈ ತಂಡ ಮೊನ್ನೆಯಷ್ಟೇ ರಂಗಿ ನನ್ನ ಅನ್ನೋ ಬೊಂಬಾಟ್ ಐಟಂ ಸಾಂಗ್ ನ ರಿಲೀಸ್ ಮಾಡಿತ್ತು. ಜೊತೆಗೆ ಯಜಮಾನ ಚಿತ್ರದೊಂದಿಗೆ ಅಪ್ಪನ ಎಮೋಷನ್ಸ್ ಇರೋ ಬ್ಯೂಟಿಫುಲ್ ವಿಡಿಯೋ ಹಾಡು ಮತ್ತು ಟೀಸರ್ ನ ರಿಲೀಸ್ ಮಾಡಿ ಗಮನ ಸೆಳೆದಿತ್ತು. ಇದೀಗ ಟ್ರೈಲರ್ ಲಾಂಚ್ ಮಾಡೋ ಧಾವಂತದಲ್ಲಿರೋ ಚಿತ್ರತಂಡ ರಿಲೀಸ್ ಡೇಟ್ ನ ಅನೌನ್ಸ್ ಮಾಡಿದೆ. ರಾಜಣ್ಣನ ಮಗ ಚಿತ್ರ ಇದೇ ತಿಂಗಳ 15ಕ್ಕೆ ರಾಜ್ಯಾದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.
ಕೋಲಾರ್ ಸೀನು ನಿರ್ದೇಶನದಲ್ಲಿ ಜಲಗರೆ ಹರೀಶ್ ಅಕ್ಷತಾ, ಚರಣ್ ರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿರೋ ರಾಜಣ್ಣನ ಮಗ ಸಿನಿಮಾಗೆ ಕೆ.ಜಿ.ಎಫ್ ಮ್ಯೂಸಿಕ್ ಡೈರೆಕ್ಟರ್ ರವಿ ಬಸರೂರು ಸಂಗೀತ ಸಂಯೋಜಿಸಿದ್ದಾರೆ. ಔಟ್ ಅಂಡ್ ಔಟ್ ಮಾಸ್ ಆಕ್ಷನ್ ಫ್ಯಾಮಿಲಿ ಡ್ರಾಮಾ ಆಗಿರೋ ಈ ಸಿನಿಮಾ ಎಲ್ಲಾ ಆಂಗಲ್ ನಿಂದ್ಲೂ ಭರವಸೆ ಹುಟ್ಟಿಸಿದೆ. 15ನೇ ತಾರೀಖು ಪ್ರೇಕ್ಷಕರೆದುರಿಗೆ ಬರ್ತಿದ್ದು, ಉದ್ಯಮದಲ್ಲಿ ನಿರೀಕ್ಷೆ ಹುಟ್ಟಿಸಿದೆ. ಜೊತೆಗೆ ಪ್ರೇಕ್ಷಕರಲ್ಲೂ ಈ ಸಿನಿಮಾ ಮೇಲೆ ಭರವಸೆ ಹುಟ್ಟಿಕೊಂಡಿದೆ.

LEAVE A REPLY

Please enter your comment!
Please enter your name here