ರಾಜಣ್ಣನ ಮಗನ ಅಡ್ಡದಲ್ಲೊಂದು ಕಲರ್ಫುಲ್ ಸಾಂಗ್ – ಮಾದಕ ಹಾಡಿನಲ್ಲಿ ಟಾಲಿವುಡ್ ಬೆಡಗಿ

0
494

ಮತ್ತೊಂದು ವಿಶಿಷ್ಠ ಹಾಡಿನಿಂದ ಸುದ್ದಿಯಲ್ಲಿ ರಾಜಣ್ಣನ ಮಗ ಸೌಂಡಿಂಗ್

ಟೀಸರ್ ಮತ್ತು ಹಾಡುಗಳಿಂದ ಸ್ಯಾಂಡಲ್ ವುಡ್ ಅಂಗಳದಲ್ಲಿ ವಿಶಿಷ್ಠವಾಗಿ ಸದ್ದು ಸುದ್ದಿ ಮಾಡ್ತಿರೋ ಹೊಸಬರ ಸಿನಿಮಾ ರಾಜಣ್ಣನ ಮಗ. ಸಾಕಷ್ಟು ವಿಶೇಷ ವಿಚಾರಗಳಿಂದ ಶೂಟಿಂಗ್ ಹಂತದಲ್ಲೇ ಬಾರಿ ನ್ಯೂಸ್ ಮಾಡಿದ ಈ ಚಿತ್ರ, ಇದೀಗ ರಿಲೀಸ್ ಗೆ ರೆಡಿಯಾಗಿದೆ. ಒಂದು ಮಾಸ್ ಫೈಟ್ ಸಾಂಗ್ ಮತ್ತು ಚರಣ್ ರಾಜ್ ಅವ್ರ ಅಪ್ಪನ ಪ್ರೀತಿ ಸಾರೋ ಹಾಡಿನಿಂದ ಗಮನ ಸೆಳೆದಿದ್ದ ಈ ಚಿತ್ರತಂಡ ಇದೀಗ ಸ್ಪೆಷಲ್ ಐಟಂ ಸಾಂಗ್ ನ ರಿಲೀಸ್ ಮಾಡಿದೆ. ಅದೇ ರಂಗಿ ನನ್ನ ಕಣ್ಣೀನಾಗ ನಿನ್ನದೇ ಭಂಗಿ..
ರಾಂಬೋ2 ಮತ್ತು ನಟಸಾರ್ವಭೌಮ ಖ್ಯಾತಿಯ ಭೂಷಣ್ ನೃತ್ಯನಿರ್ದೇಶವಿರೋ ಸ್ಪೆಷಲ್ ಹಾಡಿದು. ತೆಲುಗು ಜನಪ್ರಿಯ ಡ್ಯಾನ್ಸಿಂಗ್ ರಿಯಾಲಿಟಿ ಶೋನಿಂದ ಖ್ಯಾತಿ ಪಡೆದಿರೋ ಸೆಕ್ಸಿ ಡ್ಯಾನ್ಸರ್ ಅಕ್ಸಾ ಖಾನ್ ಈ ಹಾಡಿಗೆ ಹೆಜ್ಜೆ ಹಾಕಿರೋದು ಮತ್ತೊಂದು ವಿಶೇಷ. ಹೌದು, ಮಾದಕ ಡ್ಯಾನ್ಸ್ ಗೆ ಫೇಮಸ್ ಆಗಿರೋ ಅಕ್ಸಾ ಮತ್ತು ಭೂಷಣ್ ಈ ಹಾಡಿಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದ್ದಾರೆ.

ರವಿಬರ್ಸೂರು ಸಂಗೀತ ಸಂಯೋಜಿಸಿರೋ ಈ ಹಾಡು ಕೇಳೋದಕ್ಕೆ ಮಜವಾಗಿದೆ. ನೋಡೋದಕ್ಕೂ ಕಲರ್ ಫುಲ್ಲಾಗಿದೆ. ಕೋಲಾರ್ ಸೀನು ನಿರ್ದೇಶನದಲ್ಲಿ, ಹರೀಶ್, ಅಕ್ಷತಾ, ಚರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರೋ ರಾಜಣ್ಣನ ಮಗ ಚಿತ್ರದಲ್ಲಿ ಇದು ಮೇಜರ್ ಹೈಲೈಟ್ ಗಳಲ್ಲಿ ಒಂದು ಅಂದ್ರೆ ತಪ್ಪಾಗಲ್ಲ. ಅಂದ್ಹಾಗೆ

https://www.youtube.com/watch?v=Nzok7z5t05

LEAVE A REPLY

Please enter your comment!
Please enter your name here