ರಾಜಕಾರಣಿಗಳ ಪರವಾಗಿ ದರ್ಶನ್ ಪ್ರಚಾರ ಮಾಡ್ತಿರೋದ್ಯಾಕೆ ಗೋತ್ತಾ ? ಚಾಲೆಂಜಿಂಗ್ ಸ್ಟಾರ್ ಬಾಯ್ಬಿಟ್ಟ ಸತ್ಯ

0
101

ಕನ್ನಡ ಚಿತ್ರರಂಗದ ಆರಡಿ ಕಟೌಟ್ ದರ್ಶನ್, ಮೊದಲಿಂದನೂ ಮಾನವೀಯತೆಗೆ ಮಣೆ ಹಾಕಿದ್ದಾರೆ. ಕಷ್ಟದಲ್ಲಿದ್ದವ್ರ ಕೈ ಹಿಡಿದಿದ್ದಾರೆ. ಬಲಗೈನಿಂದ ಕೊಟ್ಟಿದ್ದು ಎಡಗೈಗೂ ಗೊತ್ತಾಗಬಾರದೆನ್ನುವ ಪಾಲಿಸಿಯನ್ನೇ ನಂಬುವ ದರ್ಶನ್ ಬಗ್ಗೆ ಇದೀಗ ಅಚ್ಚರಿಯ ಸಂಗತಿಯೊಂದು ಅನಾವರಣಗೊಂಡಿದೆ. ಇಂಟ್ರೆಸ್ಟಿಂಗ್ ಅಂದ್ರೆ ಖುದ್ದು ದರ್ಶನ್ ಯಾರಿಗೂ ಗೊತ್ತಿರದ ವಿಚಾರವನ್ನ ಹಂಚಿಕೊಂಡಿದ್ದಾರೆ. ಹೌದು, ನಿಮಗೆಲ್ಲರಿಗೂ ಗೊತ್ತಿರುವಂತೆ, ಕನ್ನಡ ಚಿತ್ರರಂಗದ ಬಗ್ಗೆ ಅದ್ರಲ್ಲೂ ಹಿರಿಯ ನಟರ, ಖಳ ನಟರ ಬಗ್ಗೆ ಅಪಾರ ಗೌರವ ಹೊಂದಿರೋ ದರ್ಶನ್ ಫಾsರ್ ದಿ ಫಸ್ಟ್ ಟೈಮ್ ಚುನಾವಣಾ ಪ್ರಚಾರದ ಹಿಂದಿನ ಉದ್ದೇಶವನ್ನ ಬಹಿರಂಗಗೊಳಿಸಿದ್ದಾರೆ. ಯಸ್, ನಿಮಗೆ ಗೊತ್ತಿರಲಿ ಸಾಮಾನ್ಯವಾಗಿ ಸ್ಟಾರ್‌ಗಳೂ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಾಗ, ಎಲ್ಲರೂ ಅಂದುಕೊಳ್ಳೋದು ಇದು ದುಡ್ಡಿನ ಆಟವಷ್ಟೇ ಅಂಥ. ದುಡ್ಡು ಕೊಟ್ಟರೆ ಯಾವ ಪಕ್ಷದ ಪರ ಬೇಕಿದ್ದರೂ ಕಲಾವಿದರು ಪ್ರಚಾರ ಮಾಡ್ತಾರೆ ಅನ್ನುವದು ಜನಸಾಮಾನ್ಯರ ಯೋಚನೆ ಹಾಗೂ ಅಭಿಮತ. ಆದ್ರೆ ದರ್ಶನ್ ವಿಚಾರದಲ್ಲಿ ಮಾತ್ರ ನೀವ್ ಇಂಥ ಓಪಿನಿಯನ್ ಇಟ್ಟುಕೊಂಡಿದ್ದರೆ ಅದು ಖಂಡಿತ ತಪ್ಪು.

ಹೌದು, ದರ್ಶನ್ ಪ್ರಚಾರದ ಹಿಂದೆ ಬೇರೆಯದ್ದೇ ಕಾರಣವಿದೆ. ಅದನ್ನ ಕಾರಣ ಅನ್ನುವದಕ್ಕಿಂತ ಒಂದೊಳ್ಳೇ ಸದ್ದುದ್ದೇಶ ಅನ್ನಲು ಅಡ್ಡಿ ಇಲ್ಲ. ಅಸಲಿಗೆ ದರ್ಶನ್ ಮನೆಯಲ್ಲಿದ್ದಾಗ ಅಭಿಮಾನಿಗಳಿಂದ ಹಿಡ್ದು ಜನಸಾಮಾನ್ಯರವರೆಗೂ ಅನೇಕರು ದರ್ಶನ್ ಭೇಟಿ ಮಾಡಲು ಬರ್ತಾನರೆ. ಹೀಗೆ ಬರುವ ಅನೇಕರಲ್ಲಿ ಕೆಲವರು ಬಡವರು ಇರ್ತಾ ರೆ. ಅನಾರೋಗ್ಯದಿಂದನೂ ಬಳಲುತ್ತಿರುತ್ತಾರೆ. ಅನಾರೋಗ್ಯಕ್ಕೊಳಗಾದವರು ಆಪರೇಷನ್‌ಗಾಗಿ ಹಣಕೇಳಿದಾಗ ದರ್ಶನ್ ತಮ್ಮ ಕೈಲಾದ ಸಹಾಯ ಮಾಡ್ತಾರೆ. ಹಾಗಂಥ ದರ್ಶನ್ ಸಹಾಯ ಮಾಡಿದ ಮಾತ್ರಕ್ಕೆ ಎಲ್ಲ ಸರಿಹೋಯ್ತು ಅಂಥನೂ ಅಲ್ಲ. ಕಾರಣ ಆಸ್ಪತ್ರೆಯ ಖರ್ಚು ವೆಚ್ಚವೇ ಅಂಥಹದ್ದು. ಹಾಗಾಗಿಯೇ ತಮ್ಮ ಕೈಲಾದ ಸಹಾಯ ಮಾಡುವ ದರ್ಶನ್ ಬಳಿಕ ತನ್ನ ಆಪ್ತ ರಾಜಕೀಯ ವಲಯಕ್ಕೆ ಕರೆ ಮಾಡುತ್ತಾರೆ. ಕಾರಣ, ಅದೊಂದು ಪತ್ರ. ಹೌದು, ಅಸಲಿಗೆ ಎಂ.ಪಿ ಸ್ಥಾನದಲ್ಲಿರುವವರು ಒಂದು ಲೆಟರ್ ಕೊಟ್ರೆ ಆಸ್ಪತ್ರೆಯ ಖರ್ಚಿನಲ್ಲಿ ಅರ್ಧದಷ್ಟು ಹಣ ಕಡಿಮೆಯಾಗುತ್ತೆ. ಹೀಗೆ ಕಡಿಮೆಯಾಗುವ ಮೊತ್ತದಿಂದ ಅಭಿಮಾನಿಗಳಿಗೆ, ನೊಂದವರಿಗೆ ಸಹಾಯವಾಗುತ್ತದೆ. ಆ ಕಾರಣಕ್ಕೆ ಪ್ರಚಾರಕ್ಕೆ ಬರುತ್ತೇನೆಂಬ ವಿಷಯವನ್ನು ದರ್ಶನ್ ಹೊರಹಾಕಿದ್ದಾರೆ. ದರ್ಶನ್‌ರ ಈ ಮಾತು ಕೇಳಿದ ಅಭಿಮಾನಿಗಳು ದಾಸನ ಮೇಲಿನ ಅಭಿಮಾನವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದು, ತಮ್ಮ ಕಾಲರ್ ಮೇಲೆ ಮಾಡಿ ಬಾಸ್ ಅಂದ್ರೆ ನಮ್ಮ ಡಿ ಬಾಸ್ ಅಂತ ಶಿಳ್ಳೆ, ಚಪ್ಪಾಳೆ ಜೊತೆಗೆ ಸೆಲ್ಯೂಟ್ ಹೊಡೆಯುತ್ತಿದ್ದಾರೆ. ಸ್ನೇಹಕ್ಕೆ.. ಅಥಿತಿ, ಪ್ರೀತಿಗೆ.. ಸಾರಥಿ ನಮ್ಮ ದಚ್ಚು ಅಂತ ತಮ್ಮ ಅಭಿಮಾನದ, ಅಭಿಮಾನವನ್ನು ಇನ್ನುಷ್ಟು ಅಭಿಮಾನದಿಂದ ಮೆರೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here