ರಸ್ತೆ ಮಧ್ಯದಲ್ಲಿ ಕಾರು ನಿಲ್ಲಿಸಿ ಸಿಟ್ಟಿಗೆದ್ದ ಚಾಲೆಂಜಿಂಗ್ ಸ್ಟಾರ್ – ಇದಕ್ಕೆ ಕಾರಣ ಈ ಹುಡುಗರು

0
912

ದರ್ಶನ್. ಅಭಿಮಾನಿಗಳ ಅಭಿಮಾನಿ. ಅಭಿಮಾನಿಗಳಿಗಾಗಿ.. ಏನ್ ಬೇಕಾದ್ರೂ ಮಾಡುವ ಕನ್ನಡದ ಆರಡಿ ಕಟೌಟಿಗೆ ಅಭಿಮಾನಿಗಳಿಂದನೇ ಇತ್ತೀಚಿಗೆ ಕಿರಿಕಿರಿಯಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ನೊಂದ ದರ್ಶನ್ ಅಭಿಮಾನಿಗಳಿಗೆ ಅವಾಜ್ ಹಾಕಿದ್ದಾರೆ. ವಾರ್ನಿಂಗ್ ಕೊಟ್ಟಿದ್ದಾರೆ.ಯಸ್, ನಿಮಗೆ ಗೊತ್ತಿರಲಿ, ದರ್ಶನ್ ಬೆಂಗಳೂರಿಗಿಂತ ಹೆಚ್ಚು ಮೈಸೂರಿನಲ್ಲಿ ಇರಲು ಇಷ್ಟ ಪಡುವ ನಟ. ಇದೇ ಕಾರಣಕ್ಕೆ.. ದರ್ಶನ್ ಕಾರು ಬೆಂಗಳೂರು ಮೈಸೂರು ರೋಡಿನಲ್ಲಿ ಹೆಚ್ಚಾಗಿ ಕಾಣಸಿಗ್ತಾನೇ ಇರುತ್ತೆ. ಎಂದಿನಂತೆ, ನಿನ್ನೆನೂ ತಮ್ಮಿಷ್ಟದ ಮೈಸೂರಿನತ್ತ ಹೊರಟು ನಿಂತ ಕನ್ನಡ ಚಿತ್ರರಂಗದ ಈ ಐರಾವತ, ತಮ್ಮ ಕಾಸ್ಟ್ಲೀ ಲ್ಯಾಂಬೋರಗಿನಿಯನ್ನ ರೋಡಿಗಿಳಿಸಿದ್ರು. ಕಾರತ್ತಿ ಮೈಸೂರಿನತ್ತ ಹೊರಟು ನಿಂತಿದ್ದರು.

ತಮ್ಮ ಕಾಸ್ಟ್ಲೀ ಲ್ಯಾಂಬೋರಗಿನಿಯಲ್ಲಿ ಹಾಯಾಗಿ ದರ್ಶನ್ ಮೈಸೂರಿನತ್ತವೇನೋ ಹೊರಟಿದ್ದರು. ಆದ್ರೆ.. ಅಭಿಮಾನಿಗಳ ಅಂಧಾಭಿಮಾನ ನೆಮ್ಮದಿಯ ಪ್ರಯಾಣಕ್ಕೆಲ್ಲಿ ಅನುವು ಮಾಡಿಕೊಡುತ್ತೆ. ಇದೇ ಕಾರಣಕ್ಕೋ ಏನೋ.. ದರ್ಶನ್, ನಿನ್ನೆ.. ಅಭಿಮಾನಿಗಳನ್ನ ಸರಿಯಾಗೇ ತರಾಟೆಗೆ ತೆಗೆದುಕೊಂಡರು. ಗದರಿದರು. ಎಚ್ಚರಿಕೆ ನೀಡಿದ್ರು. ಅಷ್ಟಕ್ಕೂ ದರ್ಶನ್ ಕೋಪಕ್ಕೆ ಕಾರಣವಾದ ಅಭಿಮಾನಿಗಳು ಮಾಡಿರುವ ಕೆಲ್ಸನೂ ಅಂಥಹದ್ದೇ.

ಹೌದು, ನಿನ್ನೆ ದರ್ಶನ್ ಕಾರನ್ನ ಬೆಂಗಳೂರಿನಿಂದ ಫಾಲೋ ಮಾಡಿಕೊಂಡು ಹೋದ ಅಭಿಮಾನಿಗಳು ದರ್ಶನ್ ಕಾರು ರಾಮನಗರದ ತಲುಪುತ್ತಿದ್ದಂತೆ ದರ್ಶನ್ ಕಾರಿಗೆ ಅಡ್ಡ ಹಾಕಿದ್ದರು. ಇದು, ಡಿ ಬಳಗದ ಯಜಮಾನನಿಗೆ ಸಿಟ್ಟು ತರಿಸಿತ್ತು. ಅಭಿಮಾನಿಗಳ ಮೇಲೆ ದರ್ಶನ್ ಮಾಡಿಕೊಂಡ ಕೋಪ ಸಹಜನೇ. ಯಾಕಂದ್ರೆ, ದರ್ಶನ್ ಪ್ರಾಣ ಅಡಗಿರೋದು ಇದೇ ಅಭಿಮಾನಿಗಳಲ್ಲಿ. ಇದೇ ಕಾರಣಕ್ಕೆ ಸಮಯ ಸಿಕ್ಕಾಗೆಲ್ಲಾ ಅಭಿಮಾನಿಗಳೊಟ್ಟಿಗೆ ಕಾಲ ಕಳೆಯುವ ದರ್ಶನ್‌ಗೆ, ನಿನ್ನೆ ತಮ್ಮನ್ನ ಬೆನ್ನಟ್ಟಿಕೊಂಡು ಭರದಲ್ಲಿ ಬಂದ ಅಭಿಮಾನಿಗಳಿಗೆ ಏನಾದ್ರೂ ಆಗಿದ್ದರೆ ಅನ್ನುವ ಆತಂಕ.

ಇದೇ ಆತಂಕ ಆಕ್ರೋಶದ ರೂಪದಲ್ಲಿ ನಿನ್ನೆ ಮತ್ತೊಮ್ಮೆ ಹೊರ ಬಂದಿದ್ದು. ಅಂದ ಹಾಗೇ ಅಭಿಮಾನಿಯ ಹುಚ್ಚುತನದ ಕೆಲ್ಸ ದರ್ಶನ್ ಇನ್ನುಳಿದ ಅಭಿಮಾನಿಗಳಿಗೂ ನೋವುಂಟು ಮಾಡಿದೆ. ಅಷ್ಟೇ ಅಲ್ಲ ತಮ್ಮ ದೇವರಿಗೆ ಇಷ್ಟೊಂದು ಕಾಟ ಕೊಡೋದು ಸರಿ ಅಲ್ಲ ಅನ್ನುವ ಚರ್ಚೆಗೂ ಕಾರಣವಾಗಿದೆ. ಇದೇ ಕಾರಣಕ್ಕೆ ಅಭಿಮಾನಿಗಳೇ ಅಭಿಮಾನಿಗಳಲ್ಲಿ ಇದೀಗ ಮನವಿಯನ್ನ ಮಾಡುತ್ತಿದ್ದಾರೆ. ಹೀಗೆಲ್ಲಾ ಮಾಡಬೇಡಿ ಅಂತಿದ್ದಾರೆ. ಅದೇನೆ ಇರ್ಲಿಿ, ಅಭಿಮಾನ ಇರಬೇಕು. ಆದ್ರೆ ಈ ತರಹದ ಅಭಿಮಾನವಲ್ಲ.

ಇನ್ಮುಂದೆಯಾದ್ರೂ ಇಂತಹ ಹುಚ್ಚು ಕೆಲ್ಸಕ್ಕೆ ಕೈ ಹಾಕದೇ ಅಭಿಮಾನಿಗಳು ಜವಾಬ್ಧಾರಿಯುತವಾಗಿ ನಡೆದುಕೊಳ್ಳುವ ಅವಶ್ಯಕತೆ ಇದೆ. ಯಾಕಂದ್ರೆ.. ಕನ್ನಡ ಚಿತ್ರರಂಗದ ತಾರೆಯರ ಪಾಲಿಗೆ ಅಭಿಮಾನಿಗಳೇ ಇಲ್ಲಿ ದೇವರುಗಳು. ದೇವರಿಗೇ ಏನಾದ್ರೂ ಆದ್ರೆ ಭಕ್ತನಿಗೆ ಮೊದಲು ನೋವಾಗೋದು.

LEAVE A REPLY

Please enter your comment!
Please enter your name here