ರಶ್ಮಿಕಾ‌ ಈಗ ಚಿನ್ನದ ಮೊಟ್ಟೆಯಿಡುವ ಕೋಳಿ – ಬಿಟ್ಟುಕೊಡಲು ತಯಾರಿಲ್ಲ ಅವರ ತಾಯಿ

0
279

ರಶ್ಮಿಕಾ ಮತ್ತು ರಕ್ಷಿತ್ ಅವರ ಸಂಬಂಧದದಲ್ಲಿ ಬೆಂಕಿ ಇಲ್ಲದೇ ಹೊಗೆ ಆಡುತ್ತಿರೋಕೆ ಕಾರಣ ರಶ್ಮಿಕಾ ಅವರ ಫ್ಯಾಮಿಲಿ. ಈಗ ಅವರೇ, ಎರಡೂ ಕುಟುಂಬದವರೂ ಕೂತು ಮಾತನಾಡಿ ಈ ಸಂಬಂಧ ವರ್ಕ್ ಔಟ್ ಆಗಲ್ಲ ಅನ್ನೋ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ ಎಂಬ ಗಾಳಿಸುದ್ದಿ ಈಗ ಎಲ್ಲೆಡೆ ಹರಿದಾಡ್ತಾ ಇದೆ. ಈ ವಿಷಯಕ್ಕೆ ಬಂದ್ರೆ ಚಿತ್ರರಂಗದಲ್ಲಿ ಹೀರೋಯಿನ್ ಗಳ ತಾಯಿ ತಂದೆಯರ ಆಟಿಟ್ಯೂಡ್ ಗಳ ಬಗ್ಗೆ ಹೇಳಲೇಬೇಕು. ಸಾಮಾನ್ಯವಾಗಿ ನಾಯಕಿಯರ ಜೊತೆಗೆ ಅವರ ಅಮ್ಮನೂ ಚಿತ್ರೀಕರಣಕ್ಕೆ ಬರೋದು ವಾಡಿಕೆ. ಅದು ಮಗಳ ಮೇಲಿರೋ ಕಾಳಜಿಗೆ ಅಂತಲೇ ತಿಳಿದುಕೊಳ್ಳೋಣ. ಹಾಗಾಗಿ ನಾಯಕಿಯರ ಸಿನಿಮಾ ಕೆರಿಯರ್ನಲ್ಲಿ ಅವರ ಪೋಷಕರು, ಪೋಷಕ ಪಾತ್ರಗಳನ್ನು ಮಾಡುವುದು ತಪ್ಪೇನಲ್ಲ.

ಆದರೆ ಇದರ ಹಿಂದೆ ಆ ನಾಯಕಿಯಿಂದ ಪೋಷಕರಿಗೆ ಆಗುತ್ತಿರೋ ಧನಲಾಭದ ಬಗ್ಗೆಯೂ ಕೊಂಚ ಗಮನ ಹರಿಸಬೇಕಾಗುತ್ತದೆ. ತಮ್ಮ ಮಗಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರೆ, ಅದರಲ್ಲೂ ರಶ್ಮಿಕಾ ಅವರಂತೆ ಸೂಪರ್ ಹಿಟ್ ಎನಿಸಿಕೊಳ್ಳುವ ದಾರಿಯಲ್ಲಿ ಸಾಗುತ್ತಿದ್ರೆ ಯಾವ ಅಪ್ಪ ಅಮ್ಮಂದಿರಿಗೂ ಅಷ್ಟು ಸುಲಭವಾಗಿ ಬರುತ್ತಿರೋ ಹಣವನ್ನು ಬಿಟ್ಟು ಕೊಡೋಕೆ ಮನಸ್ಸು ಬರೋದಿಲ್ಲ ಪಾಪ. ಹಾಗಾಗಿ ಅವರು ಮಗಳ ಮದುವೆಯನ್ನು ಆದಷ್ಟು ಮುಂದಕ್ಕೆ ಹಾಕುತ್ತಿರುತ್ತಾರೆ. ಹಾಗಾಗಿ ಮಗಳಿಗೊಂದು ಅಫೈರ್ ಇದೆ, ಅವಳು ಮದುವೆ ಆಗುತ್ತಾಳೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ ಬಂದರೆ ಈ ಅಪ್ಪ ಅಮ್ಮಂದಿರು ಕೆಂಡಾ ಮಂಡಲವಾಗಿಬಿಡುತ್ತಾರೆ. ಮದುವೆ ಆಗೋದು ಪಕ್ಕಾ ಆಗಿದ್ದರೂ ಈಗಲೇ ಗೊತ್ತಾದರೆ ಯಾರೂ ಅವಕಾಶ ಕೊಡಲ್ಲ, ಕೈಗೆ ಬಂದ ಲಕ್ಷ್ಮಿ, ಬ್ಯಾಂಕ್ ಅಕೌಂಟಿಗೆ ಬರದ ಹಾಗಾಗುತ್ತೆ ಅಂತ ಅವೆಲ್ಲ ಸುದ್ದಿ ಸುಳ್ಳು ಎಂದು ವರಾತ ತೆಗೆದುಬಿಡುತ್ತಾರೆ. ಈ ಎಲ್ಲ ವರ್ತನೆಗಳಿಗೆ ಕಾರಣ ಹಣ. ಈಗ ರಶ್ಮಿಕಾ ತಾಯಿ ಕೂಡ ಅದೇ ರೀತಿಯಲ್ಲಿ ಯೋಚನೆ ಮಾಡುತ್ತಿದ್ದಾರೆ ಅನ್ನಿಸಿದರೆ ತಪ್ಪೇನಿಲ್ಲ.

ಯಾಕಂದ್ರೆ ರಕ್ಷಿತ್ ಅವರೊಂದಿಗೆ ಎಂಗೇಜ್ ಮೆಂಟ್ ಆದಾಗ ರಶ್ಮಿಕಾ ಇನ್ನೂ ಚಿತ್ರರಂಗದಲ್ಲಿ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದರು, ಥೇಟು ತೆರೆಯ ಮೇಲಿನ ತಮ್ಮ ಅಭಿನಯದ ಹಾಗೆ. ಆದರೆ ಈಗ ತೆಲುಗು ಚಿತ್ರೋದ್ಯಮಕ್ಕೆ ಕಾಲಿಟ್ಟು, ಅಲ್ಲಿ ಸೂಪರ್ ಹಿಟ್ ಸಿನಿಮಾ ಕೊಟ್ಟು, ಹಲವಾರು ದೊಡ್ಡ ಸಿನಿಮಾಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಈಗ ಅದರಿಂದ ಬರುವ ಸಂಪತ್ತನ್ನು ರಕ್ಷಿತ್ ಶೆಟ್ಟಿಗಾಗಿ ಕಳೆದುಕೊಳ್ಳಲು ರಶ್ಮಿಕಾ ಅವರ ಕುಟುಂಬ ಸಿದ್ದವಿಲ್ಲ. ಅಲ್ಲದೆ ಈಗ ಮದುವೆ ಮಾಡಿಬಿಟ್ಟರೆ ಆ ದುಡ್ಡೆಲ್ಲಾ ಗಂಡನಾಗುವ ರಕ್ಷಿತ್ ಅಕೌಂಟಿಗೆ ಹೋಗುತ್ತಲ್ಲ ಅನ್ನೋ ಬೇಸರ ಕೂಡಾ ಇರಬಹುದು. ಹಾಗಂತ ಮದುವೆ ಮುಂದಕ್ಕೆ ಹಾಕೋಣ ಅಂದ್ರೆ ರಕ್ಷಿತ್ ಹಟ ಮಾಡ್ತಿದಾರೆ. ಹಾಗಾಗಿ ಈ ಸಂಬಂಧವನ್ನೇ ಮುರಿದು ಬಿಡೋದು ಒಳ್ಳೆಯದು ಅಂತ ರಶ್ಮಿಕಾ ತಾಯಿ ಲೆಕ್ಕಾಚಾರ ಹಾಕಿದ್ದರೆ ಅಚ್ಚರಿ ಏನಿಲ್ಲ. ಅಂದ ಹಾಗೇ ಇದೆಲ್ಲಾ ರಕ್ಷಿತ್ & ರಶ್ಮಿಕಾ ಬ್ರೇಕ್ ಅಪ್ ಬ್ರೇಕಿಂಗ್ ಹೊರ ಬಿದ್ದೇಟಿಗೆ  ಗಾಂಧಿನಗರದ ಗಲ್ಲಿಗಳಿಂದ.. ರಾಜರಾಜೇಶ್ವರಿ ನಗರದ ರಕ್ಷಿತ್ ಕಚೇರಿವರೆಗೂ ಕೇಳಿ ಬರ್ತಿೇರುವ ಮಾತುಗಳು ಅನ್ನೋದು ನಿಮ್ಮ ಗಮನಕ್ಕಿರಲಿ.

LEAVE A REPLY

Please enter your comment!
Please enter your name here