ವೈಯುಕ್ತಿಕ ಕೋಪಕ್ಕೆ ತಿರುಗಿದೆ ರಾಜಕೀಯ ಪ್ರಚಾರ – ದಿಗ್ಗಜರ ಮಧ್ಯೆ ಮಾತಿನ ಸಮರ – ಕುಪಿತರಾದ ಅಭಿಮಾನಿಗಳು

0
110

ರಾಜಕೀಯ ಎನ್ನುವ ಚದುರಂಗದಾಟದಲ್ಲಿ ಯಾರ ಯಾರ ಯೋಗ್ಯತೆ ಏನು ಅಂತ ನಿಧಾನವಾಗಿ ಮತದಾರ ಪ್ರಭುವಿಗೆ ರಿಂiiಲೈಸ್ ಆಗ್ತಿದೆ. ಮಂಡ್ಯ ಮಹಾಸಂಗ್ರಮದಲ್ಲಿ ಈಗ ವ್ಯಕ್ತಿಗಳ ಹೊರತಾಗಿ ವ್ಯಕ್ತಿತ್ವಗಳ ಕಾದಾಟ ನಡಿತಿರೋದು ಈಗೀನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಎನ್ನಬಹುದೇನೊ? ಯಾವಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ಪ್ರಚಾರಕ್ಕೆ ಇಳಿದ್ರೋ ಆಗಿನಿಂದಲೇ ಜೆಡಿಎಸ್ ಕಾರ್ಯಕರ್ತರ ಟೀಕಾಪ್ರಹಾರ ಹೊಸ ಕಾವನ್ನ ಪಡೆದುಕೊಂಡಿತ್ತು. ಆದರೆ ಈಗ ಫೇಸ್ ಟು ಫೇಸ್ ಫೈಟ್‌ಗೆ ಇಳಿದಿರುವ ನಿಖಿಲ್ ಹಾಗೂ ಯಶ್ ಒಬ್ಬರಿಗೊಬ್ಬರು ಬಿಸಿಬಿಸಿ ಕಾಮೆಂಟ್‌ಗಳನ್ನೇ ಪಾಸ್ ಮಾಡಿಕೊಂಡಿದ್ದಾರೆ. ಇದು ಪಕ್ಷದ ನಡುವಿನ ಕಾಂಪಿಟೇಶನ್ ಅಲ್ಲವೇ ಅಲ್ಲ. ಇಟ್ ಈಸ್ ಎ ವಾರ್ ಬಿಟ್‌ವಿನ್ 2 ಪರ್ಸನಾಲಿಟಿಸ್. ಹೌದು, ನಿಖಿಲ್ ಹಾಗೂ ಯಶ್ ನಡುವೆ ವಾಕ್ಸಮರವೇ ಶುರುವಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ನಾನಾ.. ನೀನಾ ಎಂದು ಇಬ್ಬರು ತೊಡೆ ತಟ್ಟಿ ನಿಂತಿದ್ದಾರೆ.

ಯಸ್, ಹಿಂದೆ ಯಶ್ ಮಾತಿನ ಭರದಲ್ಲಿ ಯೋಗ್ಯತೆಯ ಬಗ್ಗೆ ಮಾತನಾಡಿದ್ದರಲ್ಲ, ಅದಕ್ಕೀಗ ನಿಖಿಲ್ ಉತ್ತರ ಕೊಟ್ಟಿದ್ದಾರೆ. ಮನೆ ಬಾಡಿಗೆ ಕಟ್ಟಲು ಯೋಗ್ಯತೆ ಇಲ್ಲದವರು, ನಮ್ಮ ಯೋಗ್ಯತೆಯ ಬಗ್ಗೆ ಮಾತನಾಡ್ತಾರೆ ಅಂದಿದ್ದಾರೆ. ಇದು, ಸಹಜವಾಗಿ ರಾಜಾಹುಲಿಯನ್ನ ಮತ್ತಷ್ಟು ಕೆರಳಿಸಿದೆ. ಹಾಗಾಗಿ, ಮತ್ತೆ ನಿಖಿಲ್‌ಗೆ ಟಾಂಗ್ ಕೊಟ್ಟಿರುವ ಯಶ್ ನಿಖಿಲ್‌ಗೆ ಒಂದು ವ್ಯಂಗ್ಯ ಮನವಿ ಮಾಡಿದ್ದಾರೆ. ’ನನಗೆ ಬಾಡಿಗೆ ಕಟ್ಟೋ ಕ್ಯಾಪಸಿಟಿ ಇಲ್ಲ. ಓಕೆ. ಆದರೆ ನೀವು ಸ್ವಲ್ಪ ಬಿಡುವು ಮಾಡಿಕೊಂಡು ಕೊಪ್ಪಳಕ್ಕೆ ಹೋದ್ರೆ ಅಲ್ಲಿ ನಾವು ಮಾಡಿರೋ ಕೆಲಸಗಳ ಬಗ್ಗೆ ಗೊತ್ತಾಗುತ್ತೆ’ ಅನ್ನುವ ಮಾತುಗಳನ್ನಾಡಿದ್ದಾರೆ. ಇನ್ನು ಇದೆಲ್ಲದ್ರ ನಡುವೆ ಮಂಡ್ಯ ರಣಕಣ ವ್ಯಯಕ್ತಿಕ ದಾಳಿಗಳಿಗೂ ವೇದಿಕೆಯಾಗ್ತಿದೆ ಅನ್ನುವದಕ್ಕೆ ಸಾಕ್ಷಿ ಅನ್ನುವಂತೆ ಯಶ್, ಅಂಬರೀಶ್ ಅಣ್ಣಂಗೆ ಒಬ್ಬರೇ ಹೆಂಡ್ತಿ ಇದು ನಾಡಿನ ಜನತೆಗೆ ಗೊತ್ತಿರುವ ಸತ್ಯ ಅನ್ನುವ ಮೂಲಕ ಕುಮಾರಣ್ಣ ಬಗ್ಗೆ ಪರೋಕ್ಷವಾಗಿ ಠೀಕಾ ಪ್ರಹಾರನೂ ಮಾಡಿದ್ದಾರೆ. ಅಲ್ಲಿಗೆ ಮಂಡ್ಯ ಇದೀಗ ಪೊಲಿಟಿಕಲ್ ವಾರ್‌ಗಷ್ಟೇ ಸೀಮಿತವಾಗ್ದೇ, ಪರ್ಸನಲ್ ಜಿದ್ಧಾಜಿದ್ದಿಯ ಕಣವಾಗಿಯೂ ಮಾರ್ಪಾಡಾದಂತಾಗಿದೆ. ಮುಂದೆ ಇದು ಇನ್ನೆಲ್ಲಿ ಹೋಗಿ ಮುಟ್ಟುತ್ತೋ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here