ಯಶ್ ವಿರುದ್ದ ತಿರುಗಿ‌‌ ಬಿದ್ದ ಅಭಿಮಾನಿಗಳಿಗೆ ಕಿಚ್ಚನ ಬುದ್ದಿಮಾತು

0
307

ರಾಕಿಂಗ್ ಸ್ಟಾರ್ ಯಶ್ ಮೇಲೆ ಸುದೀಪ ಅಭಿಮಾನಿಗಳು ಮುಗಿಬಿದ್ದ ಬೆನ್ನಲ್ಲೇ.. ಅಭಿನಯ ಚಕ್ರವರ್ತಿ ಕಿಚ್ಚ ಅಭಿಮಾನಿಗಳಲ್ಲೊಂದು ಮನವಿ ಮಾಡಿದ್ದಾರೆ. ಯಶ್ ತೆಗಳುವಿಕೆಯನ್ನ ನಿಲ್ಲಿಸುವಂತೆ ಹೇಳಿದ್ದಾರೆ. ಹೌದು, ಸುದೀಪರನ್ನ ಏಕವಚನದಲ್ಲಿ ಕರೆದಿದ್ದಕ್ಕೆ.. ಅಭಿಮಾನಿಗಳು ಸಹಜವಾಗಿಯೇ ಸಿಟ್ಟಿಗೆದ್ದಿದ್ದಾರೆ. ಆದ್ರೆ ಇದಕ್ಕೆ ತಲೆ ಕೆಡಿಸಿಕೊಳ್ಳಲು ಹೋಗದ ಸುದೀಪ, ಅಭಿಮಾನಿಗಳ ವರ್ತನೆ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಹಾಗಾಗೇ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಬುದ್ಧಿ ಮಾತನ್ನ ಹೇಳಿರುವ ರನ್ನ, ಯಶ್‌ಗೆ ನನ್ನ ಮೇಲಿರುವ ಪ್ರೀತಿ ನನಗೆ ಗೊತ್ತು. ಹಾಗಾಗಿ, ಸುಮ್ಮನಾಗಿ ಅಂದಿದ್ದಾರೆ. ಹೀಗಿದ್ದೂ ಅದ್ಯಾಕೋ.. ಅಭಿನಯ ಚಕ್ರವರ್ತಿಯ ಮಾತಿಗೆ ಇನ್ನು ಬೆಲೆ ಕೊಡದ ಕೆಲ ಅಭಿಮಾನಿಗಳು, ಯಶ್‌ರನ್ನ ತರಾಟೆಗೆ ತೆಗೆದುಕೊಳ್ತಾನೇ ಇದಾರೆ. ಮುಂದೆ ಇದು ಎಲ್ಲಿ ಹೋಗಿ ಮುಟ್ಟುತ್ತೆ ಅನ್ನೋದು ಸದ್ಯದ ಯಕ್ಷ ಪ್ರಶ್ನೆ.

LEAVE A REPLY

Please enter your comment!
Please enter your name here