ಯಜಮಾನ ಟೈಟಲ್ ಸಾಂಗ್ ಟ್ರೆಂಡಿಂಗ್ – ಇದು ಹಾಡಲ್ಲ ಚಾಲೆಂಜಿಂಗ್ ಸ್ಟಾರ್ ನಿಜವಾದ ವ್ಯಕ್ತಿತ್ವ

0
207

ಯಾರೇ ಬಂದರು.. ಎದುರ್ಯಾeರೇ ನಿಂತರೂ.. ಮಾತು ತಪ್ಪದ ಯಜಮಾನ. ಸದ್ಯ ಸೋಷಿಯಲ್ ಪ್ಲಾಟ್ ಫಾರ್ಮ್‌ನಲ್ಲಿ ನಂ-1 ಟ್ರೆಂಡಿಂಗ್‌ನಲ್ಲಿರುವ ನಯಾ ಯಜಮಾನ ಮತ್ತೆ ಎದ್ದು ನಿಂತಿದ್ದಾನೆ. ಎಷ್ಟರ ಮಟ್ಟಿಗೆ ಅಂದ್ರೆ ಯುಟ್ಯೂಬ್ ಮತ್ತೊಮ್ಮೆ ಯಜಮಾನನಿಗೆ ಸೆಲ್ಯೂಟ್ ಹೊಡೆದಿದೆ. ಹರಿಕೃಷ್ಣ ಸಂಗೀತ, ವಿಜಯ ಪ್ರಕಾಶ್ ಗಾಯನ ಹಾಗೂ ಸಂತೋಷ್ ಆನಂದ್ ರಾಮ್ ಸಾಹಿತ್ಯ ಹಾಡಿಗಿದ್ದು. ಸರಳ ಸುಂದರ ಪದಗಳ ಮೂಲಕ ಯಜಮಾನನ್ನು ವರ್ಣಿಸಿರುವ ರೀತಿ ಅತ್ಯದ್ಭುತವಾಗಿ ಮೂಡಿಬಂದಿದೆ. ಚಿತ್ರದ ಟೈಟಲ್ ಹಾಡನ್ನು ಗಾಯನಪ್ರಿಯರು ಬಿಟ್ಟು ಬಿಡದಂತೆ ಕೇಳುವಂತೆ ಮಾಡ್ತಿದೆ. ಇನ್ನು ಚಿತ್ರಕ್ಕೆ ಹಾಡು ಪೋಣಿಸಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯಕ್ಕೆ ಸರಳ ಸುಂದರ ಪದಗಳ ಮೂಲಕ ಗಮನ ಸೆಳೆಯುತ್ತಿದ್ದು. ಚಿತ್ರರಂಗದಿಂದ ಭಾರಿ ಮೆಚ್ಚುಗೆಗಳು ವ್ಯಕ್ತವಾಕ್ತಿದೆ.

ನಿರ್ದೇಶಕ ಪವನ್ ಒಡೆಯರ್ ಸಂತೋಷ್ ಆನಂದ್ ರಾಮ್ ಸಾಲುಗಳಿಗೆ ಉಘೇ ಉಘೇ ಅಂದಿದ್ದಾರೆ. ಅಲ್ಲದೆ ‘ವೆರಿ ಮೀನಿಂಗ್ ಫುಲ್ಸ್ ಸಾಹಿತ್ಯ- ಮತ್ತು ಟ್ಯೂನ್, ತುಂಬಾ ಚೆನ್ನಾಗಿದೆ. ಎನ್ನುವ್ ಮೂಲಕ ಚಿತ್ರತಂಡಕ್ಕೆ ಶುಭವಾಗಲಿದೆ ಎಂದು ಪವನ್ ಒಡೆಯರ್ ಟ್ವೀಟ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಶೇರ್ ಮಾಡಿದ್ದಾರೆ. ದರ್ಶನ್, ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೂಪೆ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಹಾಡಿನ ಜೊತೆಗೆ ಚಿತ್ರದ ಮೇಕಿಂಗ್ ಕೂಡ ಸದ್ದು ಮಾಡ್ತಿದ್ದು. ಟಗರು ಖ್ಯಾತಿಯ ಡಾಲಿ ಲುಕ್ ಕೂಡ ಹಾಡಿನಲ್ಲಿ ರಿವೀಲ್ ಆಗಿದೆ. ದೇವರಾಜ್ ಮತ್ತು ದರ್ಶನ್ ತಂದೆ ಮಗನ ಪ್ರೀತಿ ಇದೆ. ಡಿ- ಬಾಸ್ ಪ್ರಾಣಿ ಪ್ರೀತಿಯ ಕಚಗುಳಿ ಅನಾವರಣವಾಗಿದೆ. ದರ್ಶನ್ ಜೊತೆಗೆ ಹಾಟ್ ಎಂಟ್ ಕ್ಯೂಟ್ ಆಗಿ ಕಾಣಿಸಿಕೊಂಡಿರುವ ರ ಶ್ಮಿಕಾ ಮುಗ್ದ ನಗುವಿದೆ. ರವಿಶಂಕರ್ ಆರ್ಭಟದ ಜೊತೆಗೆ ಸಮುದ್ರದ ಕಡೆ ನಿಂತು ಸಂಕಟದಿಂದಿರುವ ಯಜಮಾನ ಈ ವಿಡಿಯೋ ಸಾಂಗ್‌ನಲ್ಲಿ ಚಿತ್ರದ ಮೇಲಿನ ಭರವಸೆ ಹೆಚ್ಚಾಗಿ ಮಾಡ್ತಿದೆ.

LEAVE A REPLY

Please enter your comment!
Please enter your name here