ಯಜಮಾನನ ಟ್ರೈಲರ್ ದರ್ಶನಕ್ಕೆ ಕ್ಷಣಗಣನೆ – ನಾಳೆಯಿಂದ ಶುರುವಾಗಲಿದೆ ಡಿ ಫ್ಯಾನ್ಸ್ ಅಸಲಿ ಸೆಲೆಬ್ರೇಶನ್

0
273

ಯಜಮಾನ.. ಯಜಮಾನ.. ಯಜಮಾನ.. ದರ್ಶನ್ ಭಕ್ತಗಣ ದಿನನಿತ್ಯ ಜಪಿಸುತ್ತಿರುವ ಹೆಸರು.ಶಿವನಂದಿ ಜೊತೆ ಬಂದಾಗ ಇರ್ಲಿೊ, ಒಂದು ಮುಂಜಾನೆ ಯಜಮಾನ ಪ್ರೀತಿಯ ಹಾಡು ಹಾಡಿದಾಗ ಇರ್ಲಿಿ, ಬಸಣ್ಣಿ ಜೊತೆ ಬಜಾರ್‌ಗೆ ಬಂದಾಗ.. ನಿಂತ ನೋಡೋ ಯಜಮಾನ ಅಂದಾಗ.. ಯಜಮಾನನಿಗೆ ಅಭಿಮಾನಿಗಳು ಕೊಟ್ಟಿದ್ದು ಬೊಗಸೆ ತುಂಬ ಪ್ರೀತಿ. ಅಭಿಮಾನಿಗಳು ಕೊಟ್ಟ ಇದೇ ಪ್ರೀತಿಯ ಫಲವೆನ್ನುವಂತೆ ಯಜಮಾನನಿಗೆ ಯುಟ್ಯೂಬ್ ಸೆಲ್ಯೂಟ್ ಹೊಡಿತಾನೇ ಬಂದಿದೆ. ಯಜಮಾನನ ಬಗ್ಗೆ ಅತೀವವಾದ ಕೂತುಹಲ ಡಿ ಕಂಪನಿಯಲ್ಲಿದೆ. ಇದಕ್ಕೆ ತಕ್ಕಂತೆ ಹಾಡುಗಳೂ ಚಿತ್ರದ ಮೇಲಿನ ಇದೇ ಕೂತುಹಲವನ್ನ ಇಮ್ಮಡಿಗೊಳಿಸಿವೆ. ಹಾಗಾಗೇ, ಹಾಡುಗಳೇ ಹೀಗೆ.. ಇನ್ನು ಟ್ರೇಲರ್ ಹೇಗೆ ಅನ್ನುವ ಪ್ರಶ್ನೆ ಅಭಿಮಾನಿಗಳಲ್ಲಿದೆ.

ಇದೇ ಪ್ರಶ್ನೆ ಅಭಿಮಾನಿಗಳು ಚಿತ್ರತಂಡಕ್ಕೆ ಅನೇಕ ಬಾರಿ ಕೇಳಿದ್ದು ಇದೆ. ಟ್ರೇಲರ್ ಬೇಕು ಅನ್ನುವ ಮನವಿಯನ್ನೂ ಇಟ್ಟಿದೆ. ಇದೀಗ, ಅಭಿಮಾನಿಗಳ ಇದೇ ಕೋರಿಕೆ ಈಡೇರುವ ದಿನ ಬಂದಿದೆ. ಯಜಮಾನನ ಟ್ರೇಲರ್.. ಇನ್ನು ಎರಡೇ ಎರಡು ದಿನಗಳಲ್ಲಿ ಬಿಡುಗಡೆಯಾಗ್ತಿದೆ. ಯಸ್, ಯಜಮಾನ ಟ್ರೇಲರ್‌ನ್ನೊತ್ತು ಬರ್ತಿದ್ದಾನೆ. ಅದು ನಾಡಿದ್ದು.. ಅಂದ್ರೆ ಫೆಬ್ರುವರಿ ಹತ್ತಕ್ಕೆ. ಸರಿಯಾಗಿ ಹತ್ತು ಘಂಟೆಗೆ. ಅಲ್ಲಿಗೆ ಯಜಮಾನನ ಉತ್ಸವಕ್ಕೆ ದಿನಗಣನೆ ಆರಂಭವಾದಂತಾಗಿದೆ. ಹಾಗಾಗೇ, ತುದಿಗಾಲಿನಲ್ಲಿ ಕುಂತಿರುವ ದರ್ಶನ್ ಅಭಿಮಾನಿಗಳೂ ಆಗ್ಲೇ ನಿಂತ ನೋಡೋ ಯಜಮಾನ, ಬಂದೇ ಬಿಡ್ತು ಟ್ರೇಲರ್ ನೋಡೋ ದಿನ ಅಂಥ ತಮ್ಮಲ್ಲಿನ ಎಕ್ಸಾಯಟ್ಮೆಂಟ್‌ನ ಪ್ರದರ್ಶನ ಮಾಡಲು ಶುರುವಿಟ್ಟುಕೊಂಡಿದ್ದಾರೆ.

LEAVE A REPLY

Please enter your comment!
Please enter your name here