ಯಂಗ್ ರೆಬಲ್ ಸ್ಟಾರ್ ಜೊತೆ ಚಾಲೆಂಜಿಂಗ್ ಸ್ಟಾರ್ – ಅಮರ್ ಸಿನಿಮಾಕ್ಕೆ ಸಿಕ್ತು‌ ಆನೆ ಬಲ

0
173

ದರ್ಶನ್.. ಸ್ನೇಹಕ್ಕೆ ಸ್ನೇಹ.. ಪ್ರೀತಿಗೆ ಪ್ರೀತಿ ಅನ್ನುವ ಮಾತನ್ನ ನಂಬುವ ನಟ. ಇಂಥ ದರ್ಶನ್, ಮೊದಲಿಂದನೂ ರೆಬೆಲ್ ಸ್ಟಾರ್ ಅಂಬರೀಶ್ ಮನಸಿಗೆ ತುಂಬಾನೇ ಹತ್ತಿರವಾಗಿದ್ದರು. ಒಂದರ್ಥದಲ್ಲಿ ದರ್ಶನ್ ಅಂಬಿಯ ದತ್ತು ಪುತ್ರ ಅಂದ್ರೂ ಅತಿಶಯೋಕ್ತಿಯಲ್ಲ. ಅಂಬರೀಶ್ ನಿಧನರಾದಾಗ ವಿದೇಶದಲ್ಲಿದ್ದ ದರ್ಶನ್, ಶೂಟಿಂಗ್ ಕ್ಯಾನ್ಸಲ್ ಮಾಡ್ಕೊಂಡು ಬಂದು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ, ಅಂತ್ಯ ಸಂಸ್ಕಾರದ ನಂತರ ನಡೆದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ತಾವು ಕೂಡ ಅಂಬಿ ಕುಟುಂಬ ಸದಸ್ಯ ಎಂಬುದನ್ನ ತೋರಿಸಿಕೊಟ್ಟಿದ್ರು. ಎಲ್ಲಾ ಕಾರ್ಯಕ್ರಮಗಳು ಮುಗಿಯವರೆಗೂ ಅಂಬಿ ಪುತ್ರ ಅಭಿಷೇಕ್ ಜೊತೆಗಿದ್ದ ದರ್ಶನ್ ಈಗ, ಅಭಿಷೇಕ್ ಅಭಿನಯದ ಮೊದಲ ಚಿತ್ರದಲ್ಲೂ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಅಭಿಷೇಕ್‌ಗೆ ಸಾಥ್ ನೀಡಿದ್ದಾರೆ. ಹೌದು, ಹೀಗೊಂದು ಸುದ್ದಿ ಅಮರ್ ಅಂಗಳದಿಂದ ಹೊರಬಿದ್ದಿದೆ. ಅಭಿಷೇಕ್ ಅಭಿನಯದ ಅಮರ್ ಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಸಿಗಲಿದ್ದಾರೆ. ಆಲ್ ರೆಡಿ ದರ್ಶನ್ ಹಾಗೂ ಅಭಿಷೇಕ್ ಕಾಂಬಿನೇಶನ್‌ನ ಸನ್ನಿವೇಶಗಳ ಚಿತ್ರೀಕರಣ ರಾಜರಾಜೇಶ್ವರಿ ನಗರ ಹಾಗೂ ಬೆಂಗಳೂರು ಏರಪೋರ್ಟ್ ಸುತ್ತ ಮುತ್ತ ನಡೆದಿದೆ. ಬರೀ ಮಾತಿನ ಭಾಗದ ಚಿತ್ರೀಕರಣವಷ್ಟೇ ಅಲ್ಲ ಹಾಡಿನ ಚಿತ್ರೀಕರಣದಲ್ಲೂ ದರ್ಶನ್ ಭಾಗಿಯಾಗಿದ್ದಾರೆ. ಅಭಿಷೇಕ್, ಹಿರಿಯ ನಟ ದೇವರಾಜ್ ನಿರೂಪ್ ಭಂಡಾರಿ ಜೊತೆ ಕುಣಿದಿದ್ದಾರೆ. ಅಲ್ಲಿಗೆ ಅಮರ್‌ನಲ್ಲಿ ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಧಮಾಕಾ ನಡೆಯೋದು ಖಾತ್ರಿಯಾದಂತಾಗಿದೆ.

ಇನ್ನೂ ಅಮರ್ ಚಿತ್ರದಲ್ಲಿ ದರ್ಶನ್ ಪಾತ್ರವೇನು..? ಪಾತ್ರಕ್ಕಿರುವ ಮಹತ್ವವೇನು..? ಹೀಗೊಂದು ಪ್ರಶ್ನೆಗೆ ಚಿತ್ರದ ನಿರ್ದೇಶಕ ನಾಗಶೇಖರ್ ಇನ್ನೂ ಉತ್ತರ ಕೊಟ್ಟಿಲ್ಲ. ಅದು, ಸಿನಿಮಾದಲ್ಲೇ ನೋಡಿಯೇ ಅನುಭವಿಸಬೇಕು ಅನ್ನೋದು ನಾಗಪ್ಪ ಉವಾಚ. ಅಂದ ಹಾಗೇ ಅಮರ್ ಚಿತ್ರಕ್ಕೆ ದರ್ಶನ್ ಅತ್ಯಾಪ್ತ ಸಂದೇಶ್ ನಾಗರಾಜ್ ಬಂಡವಾಳ ಹೂಡುತ್ತಿದ್ದಾರೆ. ಇನ್ನುಳಿದಂತೆ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಸತ್ಯ ಹೆಗಡೆ ಛಾಯಾಗ್ರಹಣ, ಹರ್ಷ ಸಂಕಲನ, ಧನಂಜಯ್, ಇಮ್ರಾನ್, ಕಲೈ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ಥ್ರಿಲ್ಲರ್ ಮಂಜು, ಅಂಬು ಅರಿವು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅಭಿಷೇಕ್ ಅಂಬರೀಶ್, ತಾನ್ಯಾ ಹೋಪ್, ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧುಕೋಕಿಲ, ನಿರೂಪ್ ಭಂಡಾರಿ ಮುಂತಾದವರಿದ್ದಾರೆ.

LEAVE A REPLY

Please enter your comment!
Please enter your name here