ಮೋಡಿ ಮಾಡಲು ಬರುತ್ತಿದ್ದಾನೆ ಲಂಬೋದರ – ಟ್ರೈಲರ್ ಹಾಡುಗಳಿಂದ ಭರವಸೆ ಹುಟ್ಟಿಸಿರುವ ಸಿನಿಮಾ

0
34

ಲಂಬೋದರ ಬಸವನಗುಡಿ ಬೆಂಗಳೂರು.. ಯೋಗಿ, ಪುನರಾಗಮನಕ್ಕೆ ಸಾಕ್ಷಿಯಾಗ್ತಿರುವ ಸಿನಿಮಾ. ಗಾಂಧಿನಗರದ ಪಂಡಿತರಿಗೆ, ಇಷ್ಟೇ ಯಾಕೆ ಖುದ್ದು ಯೋಗಿಗೂ ಸಿನಿಮಾ ಮೇಲೆ ತುಂಬು ನಿರೀಕ್ಷೆಗಳಿವೆ. ಹಾಗಾಗೇ, ಬಿಡುಗಡೆಯ ದಿನವನ್ನ ಯೋಗಿ ಕಾತುರದಿಂದ ಕಾಯ್ತಿರುವ ಹೊತ್ತಿನಲ್ಲೇ ಬಂದಿರುವ ಟ್ರೇಲರ್,ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಚಿತ್ತ ಕದಿಯುತ್ತಿದೆ. ಭರವಸೆಯನ್ನೂ ಮೂಡಿಸುತ್ತಿದೆ. ಇನ್ನೂ ಲಂಬೋದರ ಬಸವನಗುಡಿ ಬೆಂಗಳೂರು ಸಿನಿಮಾ, ಪಕ್ಕಾ ಯೋಗಿಗಾಗಿ ಅಂಥನೇ ಮಾಡಲಾದ ಸಿನಿಮಾ. ಬಹುಶ, ಯೋಗಿ ಬಿಟ್ಟರೆ ಇನ್ಯಾರಿಗೂ ಲಂಬೋದರನ ಇದೇ ಪಾತ್ರ ಸೂಟ್ ಆಗ್ತಿರಲಿಲ್ಲವೇನೋ. ಇದು, ನಮ್ಮ ಮಾತಲ್ಲ ಬದ್ಲಿಗೆ ಟ್ರೇಲರ್ ನೋಡಿದವ್ರ ಅಭಿಪ್ರಾಯ. ಹೌದು, ಲಂಬೋದರ ಟ್ರೇಲರ್‌ನಲ್ಲಿ ಕಾಣೆಯಾಗಿದ್ದ ಯೋಗಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಅಭಿಮಾನಿಗಳೂ ಮಿಸ್ ಮಾಡಿಕೊಂಡಿದ್ದಕ್ಕೆ, ಎಂಟ್ರಟೈನ್ಮೆಂಟ್‌ನ ಫುಲ್ ಮೀಲ್ಸ್ ಬಡಿಸಲು ಸಿದ್ಧವಾಗಿದ್ದಾರೆ ಯೋಗಿ ಅನ್ನುವಂತೆ, ಚಿತ್ರದ ಟ್ರೇಲರ್ ರೆಡಿ ಮಾಡಲಾಗಿದೆ.ಇನ್ನೂ ಚಿತ್ರದಲ್ಲಿ ನಾಯಕಿಯಾಗಿ ಆಕಾಂಕ್ಷಾ ಕಾಣಸಿಗಲಿದ್ದಾರೆ. ಹಿಂದೆ ಆರ್.ಎಕ್ಸ್.ಸೂರಿ ಹಾಗೂ ಕ್ರ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಆಕಾಂಕ್ಷಾ, ಇಲ್ಲಿ ಯೋಗಿಯ ಜೊತೆ ಪ್ರೀತಿಯ ಯಾಗ ಮಾಡಿದ್ದಾರೆ. ಇನ್ನೂ ಕೃಷ್ಣರಾಜ್ ಚಿತ್ರದ ನಿರ್ದೇಶಕ. ಅಚ್ಯುತಕುಮಾರ್, ಅರುಣಾ ಬಾಲರಾಜ್, ಸಿದ್ಧೂ ಮೂಲಿಮನಿ, ಭೂಮಿಕಾ ಶೆಟ್ಟಿ, ಧರ್ಮಣ್ಣ ಸೇರಿ ದೊಡ್ಡ ತಾರಾಬಳಗ ಲಂಬೋದರನಲ್ಲಿದೆ..

ಇನ್ನೂ ಗೌಸ್ ಪೀರ್ ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ಕಾತೀಕ್ ಶರ್ಮಾ ಚಿತ್ರದ ಸಂಗೀತ ನಿರ್ದೇಶಕ. ಇನ್ನೂ ವಿಶ್ವೇಶರ್ ಪಿ ಹಾಗೂ ರಾಘವೇಂದ್ರ ಭಟ್ ಬಂಡವಾಳ ಹೂಡಿದ್ದಾರೆ. ಅಂದ ಹಾಗೇ ಸದ್ಯ ಬಿಡುಗಡೆಯಾಗಿರುವ ಲಂಬೋದರ ಬಸವನಗುಡಿ ಬೆಂಗಳೂರು ಚಿತ್ರಕ್ಕೆ, ಲಂಬೋದರನ ಆಶಿರ್ವಾದ ಆಲ್ ರೆಡಿ ಸಿಕ್ಕಂತಿದೆ. ಕಾರಣ, ಚಿತ್ರದ ಟ್ರೇಲರ್ ಯುಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಇದು, ಸಹಜವಾಗಿ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಅದೇನೆ ಇರ್ಲಿಿ, ಸದ್ಯ ತುಂಬಾ ದಿನಗಳ ನಂತರ ’ಬ್ಯಾಕ್ ಟು ಫ್ಲೋರ್’ ಎನ್ನುತ್ತಿರುವ ಲೂಸ್‌ಮಾದ ಯೋಗಿಗೆ ’ಲಂಬೋದರ’ ಸಿನಿಮಾ ಕೈ ಹಿಡಿಯುತ್ತಾ.. ಉತ್ತರ, ಸದ್ಯದಲ್ಲೇ ಸಿಗಲಿದೆ. ಅಲ್ಲಿವರೆಗೂ ಟ್ರೇಲರ್ ನೋಡಿ ಎಂಜಾಯ್ ಮಾಡಿ. ಇಷ್ಟವಾದ್ರೇ ಬೇರೆಯವ್ರಿಗೂ ತೋರಿಸಿ.

LEAVE A REPLY

Please enter your comment!
Please enter your name here