ಮೂಶಿಕನ ಕೈಯಲ್ಲಿ ಡೇಟ್ ಹೇಳಿಸಿದ ಪ್ರೇಮ್ – ಆಯುಧ ಪೂಜೆಗೆ ವಿಲನ್ ವಿಶ್ವರೂಪ ದರ್ಶನ

0
230

ದಿ ವಿಲನ್.. ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಸೆಟ್ಟೇರಿದಾಗಿನಿಂದ್ಲೂ ಸದ್ದು ಸುದ್ದಿ ಮಾಡ್ತಾನೇ ಬಂದ ಸಿನಿಮಾ. ಟೀಸರ್‌ನಿಂದ ಟಾಕ್ ಆಫ್ ದಿ ಟೌನ್ ಆಗಿದ್ದ ದಿ ವಿಲನ್ ಚಿತ್ರದ ರಿಲೀಸ್ ಯಾವಾಗ ಎಂಬ ಲಕ್ಷಾಂತರ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಸ್.. ದಿ ವಿಲನ್, ಕೊನೆಗೂ ಬಲಗಾಲಿಟ್ಟು ಚಿತ್ರಮಂದಿರಕ್ಕೆ ಬರಲು ಸಿದ್ಧವಾಗಿದ್ದಾನೆ. ಹೀಗೊಂದು ಸ್ವೀಟ್ ಸುದ್ದಿಯನ್ನ.. ನೀಡಲು ಅಂತಾನೇ, ಪ್ರೇಮ್.. ಮಾಧ್ಯಮದವ್ರ ಮುಂದೆ ಹಾಜರಾಗಿದ್ದರು. ಚಿತ್ರದ ಬಿಡುಗಡೆಯ ದಿನವನ್ನ ಹೇಳುವ ಮೊದಲ ಗಣೇಶನ ಹಬ್ಬವನ್ನಾಚರಿಸಿದ್ರು. ಸಂಭ್ರಮಿಸಿದ್ರು. ಗಣಪತಿಯ ಆರಾಧನೆಯನ್ನ ಮಾಡಿದ ಪ್ರೇಮ್, ತಮ್ಮ ಕಚೇರಿ ಬಳಿ ಗರಿಕೆಯಲ್ಲಿ ತಯಾರಿಸಿದ ಗಣಪನನ್ನ ಪ್ರತಿಷ್ಠಾಪಿಸಿದ್ದರು. ಮಹೇಶ್ ಅನ್ನುವ ಕಲಾವಿದರು ತೆಂಗಿನ ನಾರು, ಗರಿಕೆ, ಹುಲ್ಲು, ಮಣ್ಣು ಬಳಸಿ ತಯಾರಿಸಿದ್ದ ಹತ್ತು ಅಡಿಯ ಗಣೇಶನಿಗೆ, ಇದೇ ವೇಳೆ ವಿಶೇಷ ಪೂಜೆಯನ್ನೂ ಮಾಡಲಾಯ್ತು.

ಪೂಜೆಯಲ್ಲಿ ಪ್ರೇಮ್ ದಂಪತಿ ಹಾಗೂ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್ ಭಾಗಿಯಾಗಿದ್ದರು.ಇನ್ನು ಪೂಜೆ ಬಳಿಕ, ಎಲ್ಲರಲ್ಲೂ ಇದ್ದ ಕೂತುಹಲಕ್ಕೆ ಉತ್ತರ ನೀಡಲು ಮುಂದಾದ ಪ್ರೇಮ್.. ಇಲ್ಲೂ ಐಡಿಯಾ ಮಾಡಿದ್ದರು. ಬಿಡುಗಡೆ ದಿನವನ್ನ ವಿಶೇಷವಾಗಿ ಅನೌನ್ಸ್ ಮಾಡಿದ್ರು. ಹೌದು.. ಗಣಪನ ವಾಹನ ಮೂಶಿಕ ಕೈಯಲ್ಲಿ ದಿ ವಿಲನ್ ಬಿಡುಗಡೆ ದಿನಾಂಕ ಬರೆದಿರುವ ಬೋರ್ಡ್ ಹಿಡಿಸಿದ್ದ ಪ್ರೇಮ್, ಸಿನಿಮಾ ಅಕ್ಟೋಬರ್ ೧೮ಕ್ಕೆ ಅಂದ್ರೆ ಆಯುಧ ಪೂಜೆ ಪ್ರಯುಕ್ತ ಬಿಡುಗಡೆಯಾಗ್ತಿರುವ ವಿಚಾರವನ್ನ, ಈ ಮೂಲಕ ರಿವೀಲ್ ಮಾಡಿದ್ರು. ಅಂದ ಹಾಗೇ ದಿ ವಿಲನ್ ದೇಶದಾದ್ಯಂತ ಒಂದೇ ದಿನ ರಿಲೀಸ್ ಆಗಲಿದೆ. ದಿ ವಿಲನ್ ಸಾವಿರಕ್ಕೂ ಹೆಚ್ಚಿನ ಚಿತ್ರಮಂದಿರಲ್ಲಿ ತೆರೆಗೆ ಬರೋದು ಪಕ್ಕಾ ಆಗಿದೆ. ತಮಿಳು ಮತ್ತು ತೆಲುಗಿನಲ್ಲೂ ಚಿತ್ರವನ್ನು ಅಕ್ಟೊಬರ್ ೧೮ರಂದೇ ಬಿಡುಗಡೆ ಮಾಡೋ ತಯಾರಿಯಲ್ಲಿದ್ದಾರೆ ಪ್ರೇಮ್.

ಇನ್ನು, ಸಾವಿರಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ದಿ ವಿಲನ್ ವಿಶ್ವರೂಪ ದರ್ಶನ ಮಾಡಿಸುವ ಫ್ಲ್ಯಾನ್ ಮಾಡಿರುವ ಪ್ರೇಮ್, ಇದೇ ವೇಳೆ ಮತ್ತೊಂದು ಮಹತ್ವದ ದಾಖಲೆಯನ್ನೂ ಮಾಡಲು ಸಿದ್ಧರಾಗಿದ್ದಾರೆ. ಹೌದು, ದಿ ವಿಲನ್ ಮತ್ತೊಂದು ದಾಖಲೆಯನ್ನೂ ಇದೇ ವೇಳೆ ಮಾಡುತ್ತಿದೆ. ಬೆಂಗಳೂರಿನ ಕೆ.ಜಿ.ರೋಡ್‌ನ ಮೂರು ಚಿತ್ರಮಂದಿರಗಳು ದಿ ವಿಲನ್ ಜಾತ್ರೆಗೆ ಸಾಕ್ಷಿಯಾಗಲಿವೆ. ಹೌದು, ದಿ ವಿಲನ್ ಹೇಳಿ ಕೇಳಿ ಚಕ್ರವರ್ತಿದ್ವಯರ ಸಮಾಗಮದ ಸಿನಿಮಾ. ಹಾಗಾಗಿ, ದೊಡ್ಡ ಮಟ್ಟದ ಅಭಿಮಾನಿಗಳ ಅಭಿಮಾನೋತ್ಸವ ಚಿತ್ರಮಂದಿರದ ಎದುರು ನಡೆಯೋದು ಪಕ್ಕಾ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ಪ್ರೇಮ್ ಅಭಿಮಾನಿಗಳಿಗಾಗಿ ಬೆಂಗಳೂರಿನ ನರ್ತಕಿ, ತ್ರಿವೇಣಿ ಹಾಗೂ ಸಂತೋಶ್ ಚಿತ್ರಮಂದಿರದಲ್ಲಿ ದಿ ವಿಲನ್ ಚಿತ್ರವನ್ನ ಬಿಡುಗಡೆ ಮಾಡುವ ಇರಾದೆಯನ್ನ ಇಟ್ಕೊಂಡಿದ್ದಾರೆ. ಈ ಮೂಲಕ ಮತ್ತೊಂದು ದಾಖಲೆ ಬರೆಯಲು ಪ್ರೇಮ್ ಸಿದ್ಧರಾಗಿದ್ದಾರೆ. ಒಟ್ನಲ್ಲಿ ಗಣೇಶನ ಹಬ್ಬದ ಪ್ರಯುಕ್ತ, ಬಿಡುಗಡೆ ದಿನವನ್ನ ಅನೌನ್ಸ್ ಮಾಡಿದ ಪ್ರೇಮ್, ಅಭಿಮಾನಿಗಳ ಕಾಯುವಿಕೆಯನ್ನ ಹೆಚ್ಚಿಸಿರೋದು ನಿಜ.

LEAVE A REPLY

Please enter your comment!
Please enter your name here