ಮಾನಸ ಹೊಳ್ಳ ಮ್ಯೂಸಿಕ್ಗೆ ಸ್ಯಾಂಡಲ್ವುಡ್ ಫಿಧಾ – ಹಾಡು ಕೇಳಿದ್ರೆ ನಿಮ್ಗು ಲವ್ ಅಗುತ್ತೆ

0
643

6to6 ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾ. ಹೊಸತನದಿಂದ ತುಂಬಿರುವ ಸಿನಿಮಾವನ್ನ ನಿರ್ದೇಶಿಸಿರೋದು ನಿರ್ದೇಶಕರಲ್ಲ ಬದ್ಲಿಗೆ ನಿರ್ದೇಶಕಿ. ಹೌದು, ಮಾನಸಾ ಹೊಳ್ಳ ಈ 6to6ನ ಜನನಿ. ಇಷ್ಟು ದಿನ ಗಾಯಕಿಯಾಗಿ ಎಲ್ಲರ ಪ್ರೀತಿ, ಅಭಿಮಾನ ಗಳಿಸಿದ ಮಾನಸಾ, ಇದೀಗ ನಿರ್ದೇಶಕಿಯಾಗಿ ತಮ್ಮ ಅದೃಷ್ಟವನ್ನ ಪರೀಕ್ಷೆ ಮಾಡಿಕೊಳ್ತಿದ್ದಾರೆ. ಮಾನಸಾ ಬೆಸಿಕಲಿ ಸಿನಿಮಾರಂಗದ ಹಿನ್ನೆಲೆಯಿಂದ ಬಂದವರು. ತಾಯಿ ರಮಾ ಗಾಯಕಿ. ತಂದೆ ಅರವಿಂದ್ ಸಿನಿಮಾ ನಟ. ಶಂಕನಾದ ಅರವಿಂದ್ ಅಂತನೇ ಖ್ಯಾತಿ ಗಳಿಸಿದವರು ಇವ್ರ ತಂದೆ.

ತಾಯಿ ರಮಾ ಮಾರ್ಗದರ್ಶನದಲ್ಲಿ ಪಳಗಿ ಗಾಯಕಿಯಾದ ಮಾನಸಾ ಚಿತ್ರರಂಗದಲ್ಲಿ ಬೆಳೆದರು. ಗುರುತಿಸಿಕೊಂಡರು. ತಿಮ್ಮ ಚಿತ್ರದ ಉಯ್ಯಾಲೆ ಉಯ್ಯಾಲೆ. ಡಾರ್ಲಿಂಗ್ ಚಿತ್ರದ ಉಸಿರೊಳಗೆ ಬಚ್ಚಿಡಲು ಸೇರಿ ನೂರಕ್ಕೂ ಹೆಚ್ಚಿನ ಹಾಡುಗಳಿಗೆ ಧ್ವನಿಯಾಗಿದ್ದಾರೆ ಮಾನಸಾ. ಇಂತಹ ಮಾನಸ ಇದೀಗ.. ಚಿತ್ರರಂಗದ ಮತ್ತೊಂದು ದಿಕ್ಕಿನತ್ತ ಸಂಗೀತ  ನಿರ್ದೇಶಕಿಯಾಗಿ ಹೆಜ್ಜೆ ಇಟ್ಟಿದ್ದಾರೆ. ಇವ್ರ ನಿರ್ದೇಶನದ 6to6 ಹಾಡುಗಳು ಇದೀಗ ಸದ್ದು ಮಾಡ್ತಿವೆ. ಸುದ್ದಿಯಾಗ್ತಿವೆ. ಚಿತ್ರಪ್ರೇಮಿಗಳ ಪ್ರೀತಿಯನ್ನ ಗಳಿಸುತ್ತಿವೆ. ವಿಶೇಷ ಅಂದ್ರೆ 6to6 ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರೋದು ಖುದ್ದು ಮಾನಸಾನೇ.

ಇನ್ನು 6to6 ಮೂಲಕ ಮಾನಸಾ ತಮ್ಮ ತಂಗಿ ಪ್ರಾರ್ಥನಾರನ್ನೂ ಕೂಡ ಸಿಂಗರ್ ಇಲ್ಲಿ ಇಂಟ್ರಡ್ಯೂಸ್ ಮಾಡಿರೋದು ಮತ್ತೊಂದು ವಿಶೇಷ. ಹೌದು, ಕೆ.ಕಲ್ಯಾಣ್ ಬರೆದಿರುವ ಸಾಹಿತ್ಯಕ್ಕೆ ಮಾನಸಾ ಸಹೋದರಿ ಪ್ರಾರ್ಥನಾ ಧ್ವನಿಯಾಗಿದ್ದಾರೆ. ಜೀವ ತುಂಬಿದ್ದಾರೆ. ಸದ್ಯ ಈ ಹಾಡು ಸೊಶಿಯಲ್ ಮೀಡಿಯಾದಲ್ಲಿ ತುಂಬಾನೇ ಸದ್ದು ಮಾಡ್ತಿದೆ. ಇಲ್ಲಿ ಪ್ರಾರ್ಥನಾಗೆ ಮತ್ತೊಬ್ಬ ಪ್ರತಿಭಾವಂತ ಗಾಯಕ ದೀಪಕ್ ದೊಡ್ಡೇರ ಸಾಥ್ ನೀಡಿದ್ದಾರೆ.

ಅದೇನೆ ಇರ್ಲಿ್.. ಪ್ರತಿಭೆ ಇದ್ದರೆ, ವಿಶ್ವಾಸ ಇದ್ದರೆ, ಏನ್ ಬೇಕಾದ್ರೂ ಇಲ್ಲಿ ಸಾಧಿಸಬಹುದು ಅನ್ನೋದಕ್ಕೆ ಮಾನಸಾ ಓನ್ ಆಪ್ ದಿ ಬೆಸ್ಟ್ ಎಕ್ಸಾಂಫಲ್. ಇವ್ರ ನಿರ್ದೇಶನದ 6to6 ಚಿತ್ರಕ್ಕೆ ಓಳ್ಳೇಯದಾಗ್ಲಿ. ಪ್ರೇಕ್ಷಕರ ಪ್ರೀತಿ ಇವ್ರಿಗೆ ಸಿಗುವಂತಾಗಲಿ ಅನ್ನೋದೆ ನಮ್ಮ ಆಶಯ.

LEAVE A REPLY

Please enter your comment!
Please enter your name here