ಮರುಕಳಿಸುತ್ತಿದೆ ಹಳೆ ಯುಗ – ಮತ್ತೆ ಬರುತ್ತಿದೆ ಶ್ವಾನದ ಕಥೆ – ಇದು ಗುಂಡ ಹಾಗೂ ಇವನ ಪ್ರೀತಿಯ ವ್ಯಥೆ

0
214

ನಾನು ಮತ್ತು ಗುಂಡ.. ಪುಟ್ಟ ಟೀಸರ್‌ನೊಂದಿಗೆ ಗಾಂಧಿನಗರದ ಗಲ್ಲಿಗಳಲ್ಲಿ ಸದ್ದು ಮಾಡ್ತಿರುವ ಸಿನಿಮಾ. ಕಾಮಿಡಿ ಕಿಲಾಡಿಗಳು ಮೂಲಕವೇ, ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ಶಿವರಾಜ್ ಕೆ.ಆರ್.ಪೇಟೆ ಚಿತ್ರದ ನಾಯಕ. ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡಿರುವ ಶಿವರಾಜ್ ಕೆ.ಆರ್.ಪೇಟೆ ಇಲ್ಲಿ ಬರೀ ನಗಿಸೋದಿಲ್ಲ. ಕಣ್ಣೀರು ಹಾಕಿಸುತ್ತಾರೆ. ಇದಕ್ಕೆ ಕೈಗನ್ನಡಿಯಂತಿರುವ ಪುಟ್ಟ ಟೀಸರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.ಶಿವರಾಜ್ ಕೆ.ಆರ್.ಪೇಟೆ ಜೊತೆ ಲ್ಯಾಬ್ರಾಡರ್ ನಾಯಿ ಚಿತ್ರದ ಪ್ರಮುಖ ಆಕರ್ಷಣೆ ಹಾಗೂ ಕೇಂದ್ರ ಬಿಂದು. ವಿಶೇಷ ಅಂದ್ರೆ ದರ್ಶನ್ ಅಭಿನಯದ ಐರಾವತ ಚಿತ್ರದಲ್ಲೂ ಇದೇ ನಾಯಿ ಕಾಣಿಸಿಕೊಂಡಿತ್ತು. ಇನ್ನು ಚಿತ್ರದ ನಾಯಕಿಯಾಗಿ ಸಂಯುಕ್ತಾ ಹೊರನಾಡು ಕಾಣಸಿಗಲಿದ್ದಾರೆ.ಅಂದ ಹಾಗೇ ಒಂದು ಕುಟುಂಬದಲ್ಲಿ ಸಾಕು ಪ್ರಾಣಿಗಳು ಎಂಥ ಪಾತ್ರವಹಿಸುತ್ತವೆ ಜತೆಗೆ ಹಾಗೆಯೇ ಇಂಥ ಪ್ರಾಣಿಗಳನ್ನೇ ಇಟ್ಟುಕೊಂಡು ಕೆಲವೊಂದು ದಂಧೆಗಳೂ ನಡೆಯುತ್ತವೆ ಎನ್ನುವುದನ್ನು ಹೇಳುವ ಯತ್ನವನ್ನ ಚಿತ್ರತಂಡ ಮಾಡಿದೆ. ಶ್ರೀನಿವಾಸ್ ತಿಮ್ಮಯ್ಯ ಚಿತ್ರದ ನಿರ್ದೇಶಕ. ನಮ್ಮ ಅಕ್ಕ ಪಕ್ಕ ನಡೆಯುವ ಕಥೆಯನ್ನೇ ಚಿತ್ರವನ್ನಾಗಿಸಿರುವ ಶ್ರೀನಿವಾಸ್ ತಿಮ್ಮಯ್ಯ, ಚಿತ್ರದ ಮೂಲಕ ಸಂದೇಶವನ್ನ ನೀಡುವ ಯತ್ನ ಮಾಡಿದ್ದಾರೆ. ಇನ್ನು ಬೆಸಿಕಲಿ ನಿರ್ದೇಶಕನಾಗಿರುವ ರಘು ಹಾಸನ್ ನಾನು ಮತ್ತು ಗುಂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಕಾರ್ತಿಕ್ ಶರ್ಮಾ ಚಿತ್ರದ ಸಂಗೀತ ನಿರ್ದೇಶಕ. ರೊಹೀತ್ ರಮಣ್ ಚಿತ್ರದ ಲಿರಿಕ್ ರೈಟರ್. ಸದ್ಯ, ಟೀಸರ್ ಮೂಲಕ ಟಾಕ್ ಆಫ್ ದಿ ಗಾಂಧಿನಗರ ಆಗಿರುವ ನಾನು ಮತ್ತು ಗುಂಡ ಹಾಡುಗಳನ್ನೊತ್ತು ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ. ಅಲ್ಲಿವರೆಗೂ ಟೀಸರ್ ನೋಡಿ.. ಎಂಜಾಯ್ ಮಾಡಿ.

https://youtu.be/6Yc5AY2z9ng

LEAVE A REPLY

Please enter your comment!
Please enter your name here