ಮದಗಜನ ನಾಯಕಿಗಾಗಿ ಮೂವರ ಪೈಪೋಟಿ – ಯಾರ ಪಾಲಾಗಲಿದೆ ಗಜರಾಣಿಯ ಪಟ್ಟ

0
209

ಮದಗಜ.. ಆಫ್ಟರ್ ಭರಾಟೆ ರೋರಿಂಗ್ ಸ್ಟಾರ್ ಶ್ರೀಮುರಳಿ ಮಾಡಲು ಹೊರಟಿರುವ ಸಿನಿಮಾ. ಟೈಟಲ್ ವಿಚಾರದಿಂದ್ಲೇ ಅತೀವ ಸದ್ದು ಮಾಡಿ ಸುದ್ದಿಯಾಗಿದ್ದ ಮದಗಜನಿಗೀಗ ಮದನಾರಿಯಾಗಿ ಆಯ್ಕೆಯಾಗುವವರ್ಯಾುರು ಅನ್ನುವ ಚರ್ಚೆ ಗಾಂಧಿನಗರದ ಗಲ್ಲಿಗಳಲ್ಲಿ ನಡೆಯುತ್ತಿದೆ.ಹೌದು, ಮದಗಜನಿಗಾಗಿ ನಾಯಕಿಯ ಹುಡುಕಾಟ ನಡೆಯುತ್ತಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್, ನಟಸಾರ್ವಭೌಮನ ನಾಯಕಿ ಅನುಪಮಾ ಪರಮೇಶ್ವರ್ ಹಾಗೂ ಚುಟು ಚುಟು ಚೋಖರಿ ಆಶಿಕಾ ರಂಗನಾಥ್ ಹೆಸರುಗಳೂ ಇದೇ ವೇಳೆ ಕೇಳಿ ಬರುತ್ತಿವೆ. ರಚಿತಾ ಆಲ್ ರೆಡಿ ಶ್ರೀಮುರಳಿಯೊಂದಿಗೆ ರಥಾವರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಮೊನ್ನೆ.. ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಹಾಡಿಗೂ ರಚಿತಾ ಹೆಜ್ಜೆ ಹಾಕಿದ್ದರು. ಹಾಗಾಗಿ, ರಚಿತಾನೇ ಬಹುತೇಕ ಮದಗಜನಿಗೆ ನಾಯಕಿಯಾಗ್ತಾರಾ ಎಂಬ ಗುಮಾನಿಯನ್ನ ಅನೇಕರು ಇದೀಗ ವ್ಯಕ್ತಪಡಿಸುತ್ತಿದ್ದಾರೆ.ಇನ್ನೂ, ನಟಸಾರ್ವಭೌಮನ ಬಳಿಕ ಅನುಪಮಾ ಮೇಲೂ ಕನ್ನಡಿಗರಿಗೆ ಪ್ರೀತಿಯಾಗಿದೆ. ಹಾಗಾಗಿ, ರೋರಿಂಗ್ ಸ್ಟಾರ್‌ಗೆ ಅನುಪಮಾ ಜೋಡಿಯಾದ್ರೆ ಸೊಗಸಾಗಿರುತ್ತೆ ಅನ್ನುವ ಅಭಿಪ್ರಾಯನೂ ಅನೇಕರು ಇದೇ ವೇಳೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ, ಗಾಂಧಿನಗರದಲ್ಲಿ ಮದಗಜನ ಮದನಾರಿ ಬಗ್ಗೆ ಕೂತುಹಲ ಗರಿಗೇದರಿದೆ. ಉತ್ತರ, ಜೂನ್ ಹೊತ್ತಿಗೆ ಸಿಗಲಿದೆ. ಅಲ್ಲಿವರೆಗೂ ಯಾರಾಗಬಹುದು ನಾಯಕಿ ಎಂಬ ಚರ್ಚೆ ಗಾಂಧಿನಗರದಲ್ಲಿ ನಿತ್ಯ ನಿರಂತರವಾಗಿ ನಡೆಯಲಿದೆ.

LEAVE A REPLY

Please enter your comment!
Please enter your name here