ಮತ್ತೆ ಶುರುವಾಗುತ್ತ ರೈ ಸಿನಿಮಾ‌? ಟಗರು ನೋಡಿದ್ಮೇಲೆ ಉತ್ತರಿಸಿದ ವರ್ಮಾ

0
211

ರೈ. ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾ. ಕಳೆದ 2016ರಲ್ಲಿ ಅದ್ಧೂರಿಯಾಗಿ ಸೆಟ್ಟೇರಿದ್ದ ರೈ, ನಂತ್ರ ಸುದ್ದಿಗೂ ಇರಲಿಲ್ಲ. ಸದ್ದು ಮಾಡಿರಲಿಲ್ಲ. ಇದಕ್ಕೆ ತಕ್ಕಂತೆ.. ಕಳೆದ ವರ್ಷ ಇದೇ ರೈ ಬಗ್ಗೆ ರೈ ಅವ್ರಿಗೆ ಕೇಳಿದಾಗ, ರಾಮ್ ಗೋಪಾಲ್ ವರ್ಮಾ ಬದಲು ಬೇರೆ ನಿರ್ದೇಶಕರು ನಿರ್ದೇಶನ ಮಾಡ್ತಾರೆ ಅಂತ ಹೇಳಿದ್ರು.

ಬಟ್, ಅದ್ರ ಬಗ್ಗೆನೂ ಇದುವರೆಗೂ ಯಾವ್ದೇ ಅಪ್‌ಡೇಟ್ ಇಲ್ಲ. ಹಾಗಿದ್ದರೆ ರೈ ಏನಾಯ್ತು. ಹೀಗೊಂದು ಪ್ರಶ್ನೆಯನ್ನ ಇತ್ತೀಚಿಗಷ್ಟೆ ಬೆಂಗಳೂರಿಗೆ ಟಗರು ನೋಡಲು ಬಂದಿದ್ದ ರಾಮ್ ಗೋಪಾಲ್ ವರ್ಮಾರಿಗೆ ಪ್ರಚಾರ ತಂಡ ಕೇಳಿತ್ತು. ಪ್ರಶ್ನೆ ಕೇಳಿದ ಬೆನ್ನಲ್ಲೇ ತಬ್ಬಿಬ್ಬಾದ, ಇದ್ದಕ್ಕಿದ್ದಂತೆ.. ಒಂದು ಕ್ಷಣ ಸೈಲೆಂಟಾದ ರಾಮು, ಹೇಳಿದ್ದು ಬರೀ ನೊ ಕಮೆಂಟ್ಸ್ ಅಷ್ಟೇ. ಅಲ್ಲಿಗೆ.. ರೈ ಸಿನಿಮಾ, ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡೋದು ಸದ್ಯಕ್ಕಂತು ಕನಸೇ ಸರಿ.

LEAVE A REPLY

Please enter your comment!
Please enter your name here