ಮತ್ತೆ ರಕ್ಷಿತ್ ಅಭಿಮಾನಿಗಳಲ್ಲಿ ಮಂದಹಾಸ – ಇದಕ್ಕೆ‌ ಕಾರಣ‌ ರಶ್ಮಿಕಾ ಮಾಡಿದ ಆ ಮೇಸೆಜ್

0
167

ರಶ್ಮಿಕಾ ಮಂದಣ್ಣ. ಅಖಿಲ ಕರ್ನಾಟಕದ ಕ್ರಶ್. ಗ್ಲ್ಯಾಮರ್ & ಗ್ರಾಮರ್ ಎರಡನ್ನೂ ಹೊಂದಿರುವ ರಶ್ಮಿಕಾ ಸಿನಿಮಾಗಳ ಹೊರತಾಗಿಯೂ ಸದ್ದು ಮಾಡೋದು ಸುದ್ದಿಯಾಗೋದು ರಕ್ಷಿತ್ ಶೆಟ್ಟಿ ಸುತ್ತ ಮುತ್ತ ವಿಚಾರಗಳಿಂದ. ಹೌದು, ಅದ್ಯಾವಾಗ.. ಹಮ್ ಸಾಥ್ ಸಾಥ್ ಹೈ ಅನ್ನುತ್ತಿದ್ದ ರಶ್ಮಿಕಾ & ರಕ್ಷಿತ್, ಹಮ್ ಆಪ್ಕೇ ಹೈ ಕೌನ್ ಅಂದ್ರೋ ನೋಡಿ, ಅಂದಿನಿಂದ.. ರಕ್ಷಿತ್ ಹಾಗೂ ರಶ್ಮಿಕಾ ವೈಯುಕ್ತಿಕ ಜೀವನದ ಮೇಲೆ ಕನ್ನಡ ಕಲಾಭಿಮಾನಿಗಳಿಗೆ ಅದೇನೋ ಒಂದು ರೀತಿಯ ಕೂತುಹಲ. ಬಹುಶ, ಇದೇ ಕೂತುಹಲದ ಫಲವೆನ್ನುವಂತೆ ಅನೇಕರು.. ಅನೇಕ ಸಲ.. ಆಗಿದ್ದಾಗೋಯ್ತು.. ಒಂದಾಗಿ ಇಬ್ಬರು ಮುನಿಸು ಮರೆತು.. ಅನ್ನುವ ಮನವಿಯನ್ನೂ ಮಾಡಿಯಾಗಿದೆ. ಹೀಗಿದ್ದೂ.. ಇಬ್ಬರು, ಅದ್ಯಾಕೋ ಮನಸಿನ ಗುದ್ದಾಟಗಳನ್ನ ಬದಿಗಿಡುವ ಮನಸು ಮಾಡಿಲ್ಲ. ಹಾಗಾಗಿ, ಇನ್ನೇನೂ.. ಇಬ್ಬರು, ಒಂದಾಗಲ್ಲ.. ರಶ್ಮಿಕಾ ಭಾರೀ ಎತ್ತರಕ್ಕೆ ಬೆಳೆದು ಬಿಟ್ಟರಲ್ಲ.. ಅಂಥ, ರಾಜರಾಜೇಶ್ವರಿ ನಗರದ ಜಗಲಿ ಕಟ್ಟೆ ಮೇಲೆ ಚರ್ಚೆಗಳೂ ನಡೆಯುತ್ತಿರುವ ಹೊತ್ತಿನಲ್ಲೇ, ರಶ್ಮಿಕಾ.. ಶೆಟ್ರ ಬಗ್ಗೆ ಮಾತನಾಡಿದ್ದಾರೆಯಸ್, ಇದು.. ಸೊಶಿಯಲ್ ಮೀಡಿಯಾದಲ್ಲಿ ನಡೆದ ಅಚ್ಚರಿ. ರಶ್ಮಿಕಾ ರಕ್ಷಿತ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ.

ಹಾಗಂಥ, ಸಾನ್ವಿ ಹಾಗೂ ಕರ್ಣನ ಅಭಿಮಾನಿಗಳು ಸಂಭ್ರಮ ಪಡುವಂಗಿಲ್ಲ. ಕಾರಣ ರಶ್ಮಿಕಾ ತನ್ನ ಮಾಜಿ ಪ್ರಿಯಕರ ರಕ್ಷಿತ್ ಶೆಟ್ಟಿಯ ಹೆಸರನ್ನಿಲ್ಲಿ ತೆಗೆದುಕೊಂಡಿಲ್ಲ. ಬದ್ಲಿಗೆ ತೆಗೆದುಕೊಂಡಿರೋದು ರಕ್ಷಿತ್ ಶೆಟ್ಟಿ ಅಭಿನಯದ ಮಹತ್ವಕಾಂಕ್ಷೆಯ ಸಿನಿಮಾ ಅವ್ನೇ ಶ್ರೀಮನ್ನಾರಾಯಣ ಚಿತ್ರದ ಹೆಸರನ್ನಷ್ಟೇ. ಹೌದು, ಅವ್ನೇ ಶ್ರೀಮನ್ನಾರಾಯಣ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮಾಡ್ತಿರುವ ಭಾರೀ ದೊಡ್ಡ ಸಾಹಸ. ಭಾರತೀಯ ಚಿತ್ರರಂಗವನ್ನ ಮತ್ತೊಮ್ಮೆ ಕನ್ನಡದತ್ತ ತಿರುಗಿ ನೋಡುವಂತೆ ಮಾಡಲು ಶೆಟ್ರು ಸನ್ನದ್ಧರಾಗ್ತಿದ್ದಾರೆ. ಇನ್ನೂ ಅಭಿಮಾನಿಗಳಲ್ಲೂ ಚಿತ್ರದ ಮೇಲೊಂದು ವಿಶೇಷ ಕೂತುಹಲವಿದೆ. ಹೀಗಿರುವಾಗ ರಶ್ಮಿಕಾ ಹೇಗೆ ಅವ್ನೇ ಶ್ರೀಮನ್ನಾರಾಯಣನ ಸೆಳೆತದಿಂದ ಪಾರಾಗಲು ಸಾಧ್ಯ. ಹಾಗಾಗೇ, ಚಿತ್ರ ನೋಡುವ ತಮ್ಮ ಕೂತುಹಲವನ್ನ ಹಂಚಿಕೊಂಡಿದ್ದಾರೆ ರಶ್ಮಿಕಾ. ಅಷ್ಟಕ್ಕೂ ರಶ್ಮಿಕಾ ಮಂದಣ್ಣಗೆ ಏಕಾಏಕಿ ಅವ್ನೇ ಶ್ರೀಮನ್ನಾರಾಯಣ ನೆನಪಾಗಲು ಕಾರಣವಾದ್ರೂ ಏನು ಅಂದಾಗ್ಲೇ ಕಾಣ್ಸೋದು ಅವ್ನೇ ಶ್ರೀಮನ್ನಾರಾಯಣ ಚಿತ್ರದ ನಿರ್ದೇಶಕ ಸಚಿನ್. ಹೌದು. ಅಸಲಿಗೆ ನಿನ್ನೆ ಸಚಿನ್‌ಗೆ ಹುಟ್ಟುಹಬ್ಬದ ಸಡಗರ. ಇದೇ ಸಡಗರದ ಸಂಗತಿಗೆ ಸಡಗರದಿಂದನೇ ನಿನ್ನೆ ರಶ್ಮಿಕಾ ಸಚಿನ್‌ಗೆ ಶುಭ ಕೋರಿದ್ರು. ಆಗ್ಲೇ.. ಅವ್ನೇ ಶ್ರೀಮನ್ನಾರಾಯಣ ನೋಡಲು ಕಾಯುತ್ತಿರುವ ಸಂಗತಿಯನ್ನೂ ಹಂಚಿಕೊಂಡಿದ್ದರು. ಆದ್ರೆ ಅಪ್ಪಿ ತಪ್ಪಿಯೂ ಎಲ್ಲೂ ರಶ್ಮಿಕಾ, ತನ್ನ ಹಳೆಯ ಪ್ರೇಮಿ ರಕ್ಷಿತ್ ಹೆಸರನ್ನಿಲ್ಲಿ ತೆಗೆದುಕೊಂಡಿಲ್ಲ. ಇನ್ನೂ, ರಕ್ಷಿತ್ ಸಿನಿಮಾ ಹೆಸರನ್ನ ತೆಗೆದುಕೊಂಡು, ರಕ್ಷಿತ್ ಹೆಸರನ್ನ ರಶ್ಮಿಕಾ ಬಿಟ್ಟ ಬೆನ್ನಲ್ಲೇ, ಅಭಿಮಾನಿಗಳೂ ರಶ್ಮಿಕಾರಲ್ಲಿ ಮನವಿ ಮಾಡಲು ಶುರುವಿಟ್ಟುಕೊಂಡಿದ್ಧಾರೆ. ನಿಮ್ದು ನಮ್ಮ ಅಣ್ಣನ ಜೋಡಿನೇ ಸೂಪರು ಅನ್ನುತ್ತಿದ್ದಾರೆ. ಮನಸ್ತಾಪಗಳೂ ಜೀವನದಲ್ಲಿ ಇದ್ದಿದ್ದೇ, ಸರಿಪಡಿಸಿಕೊಂಡು ಅರ್ಥ ಮಾಡಿಕೊಂಡು ಹೋಗೋದೇ ಜೀವನ ಅನ್ನುವ ಉಪದೇಶವನ್ನೂ ಮಾಡ್ತಿದ್ದಾರೆ. ರಕ್ಷಿತ್ ಶೆಟ್ಟಿಗೂ ಶುಭ ಕೋರಿ ಅನ್ನುವ ಮನವಿಯನ್ನೂ ಮಾಡುತ್ತಿದ್ದಾರೆ. 

LEAVE A REPLY

Please enter your comment!
Please enter your name here