ಮತ್ತೆ ಬಂದ ಮುಂಗಾರುಮಳೆ ನೇಹಾ – ಈಗ ಈಕೆ ಪೂರಿ ಜಗನ್ನಾಥ್ ಕಲ್ಪನೆಯ ಮೆಹಬೂಬ

0
355

ನೇಹಾ ಶೆಟ್ಟಿ. ಮುಂಗಾರು ಮಳೆ 2ದಲ್ಲಿ ಮೋಡಿ ಮಾಡಿದ್ದ ಮುದ್ದು ಮುಖದ ಸುಂದರಿ. ಮೊದಲ ಚಿತ್ರದಲ್ಲೇ ಎಲ್ಲರನ್ನ ಇಂಪ್ರೆಸ್ ಮಾಡಿದ್ದ ನೇಹಾ.. ಆಫ್ಟರ್ ಮುಂಗಾರು ಮಳೆ 2 ಕಾಣೆಯಾಗಿದ್ದರು. ಹಾಗಾಗಿ, ಇವ್ರಭಿಮಾನಿಗಳು.. ನೇಹಾ ಎಲ್ ಹೋದ್ರು. ಯಾಕ್ ಹೋದ್ರು ಅಂತ ತುಂಬಾ ತಲೆ ಕೆಡಿಸಿಕೊಂಡಿದ್ದರು. ಯೋಚನೆಯಲ್ಲಿ ಮುಳುಗಿದ್ದರು. ಹೀಗಿರುವಾಗ್ಲೇ.. ಇದೀಗ, ನೇಹಾ ಪ್ರತ್ಯಕ್ಷವಾಗಿದ್ದಾರೆ. ಅದು ಕನ್ನಡದಲ್ಲಿ ಅಲ್ಲ ಬದ್ಲಿಗೆ ತೆಲುಗುದಲ್ಲಿ.

ಹೌದು, ನೇಹಾ ಶೆಟ್ಟಿ ಮತ್ತೆ ಲೈಮ್ ಲೈಟಿಗೆ ಬಂದಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಇವ್ರನ್ನ ಈ ಬಾರಿ ಕರೆತಂದಿರೋದು ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾದ್. ಹೌದು, ಪೂರಿ ತಮ್ಮ ಪುತ್ರ ಆಕಾಶ್‌ಗಾಗಿ ಸಿನಿಮಾವೊಂದನ್ನ ಡೈರೆಕ್ಟ್ ಮಾಡಿದ್ದಾರೆ. ಚಿತ್ರಕ್ಕೆ ಮೆಹಬೂಬಾ ಅಂತ ಹೆಸರು ಇಟ್ಟಿದ್ದಾರೆ. ಇದೇ ಮೆಹಬೂಬಾ ಈ ನೇಹಾ ಶೆಟ್ಟಿ. ಭಾರತೀಯ ಸೈನಿಕನಾಗಿ ಇಲ್ಲಿ ಆಕಾಶ್ ಪೂರಿ ಕಾಣಿಸಿಕೊಂಡಿದ್ದರೆ, ಪಾಕಿಸ್ತಾನದ ಯುವತಿಯಾಗಿ ನೇಹಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿವೀಲ್ ಆಗಿರುವ ಟ್ರೇಲರ್‌ನಲ್ಲಿ ಗಮನಸೆಳೆಯುವ ನೇಹಾ ಮುಂದಿನ ದಿನಗಳಲ್ಲಿ ತೆಲುಗುದಲ್ಲೇ ಠಿಕಾಣಿ ಹೂಡುವಂತಹ ಅವಕಾಶಗಳು ಗಿಟ್ಟಿಸಿಕೊಂಡರು ಇಲ್ಲಿ ಅಚ್ಚರಿ ಇಲ್ಲ. ಸದ್ಯ.. ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿರುವ ಮೆಹಬೂಬಾ ನಿಮ್ಮ ಮುಂದೆ ಇದೇ ಮೇ 11ಕ್ಕೆ ಬರಲಿದ್ದಾಳೆ. ಅಲ್ಲಿವರೆಗೂ ನೇಹಾ ಶೆಟ್ಟಿಯನ್ನ ಇಷ್ಟಪಡುವ ಆರಾಧಿಸುವ ಮನಸುಗಳು ಕಾಯಲೇಬೇಕು. 

LEAVE A REPLY

Please enter your comment!
Please enter your name here